ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

Gudibande News: ಗುಡಿಬಂಡೆಯಲ್ಲಿ ಅರ್ಥಪೂರ್ಣ ವಿಶ್ವಕರ್ಮ ಜಯಂತಿ ಆಚರಣೆ

ಗುಡಿಬಂಡೆಯಲ್ಲಿ ಅರ್ಥಪೂರ್ಣ ವಿಶ್ವಕರ್ಮ ಜಯಂತಿ ಆಚರಣೆ

ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಶಿಕ್ಷಕ ಚಂದ್ರಶೇಖರ್ ಮಾತನಾಡಿ, ವಿಶ್ವಕರ್ಮ ಸಮುದಾಯವು ಬುದ್ಧಿವಂತಿಕೆ, ದೂರದೃಷ್ಟಿ ಹಾಗೂ ವಿಶಿಷ್ಟ ಕೌಶಲ್ಯಕ್ಕೆ ಹೆಸರಾಗಿದ್ದು, ಚಿನ್ನ-ಬೆಳ್ಳಿ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಸುಬುಗಳಲ್ಲಿ ಪರಿಣತಿ ಹೊಂದಿದೆ ಎಂದರು.

ದಿವ್ಯಾಂಗರಿಗೆ ಅನುಕಂಪವಲ್ಲ, ಸ್ವಾವಲಂಬನೆಗೆ ಆದ್ಯತೆ: ಬಿ.ಎಸ್.ಸುರೇಶ್

ದಿವ್ಯಾಂಗರಿಗೆ ಅನುಕಂಪವಲ್ಲ, ಸ್ವಾವಲಂಬನೆಗೆ ಆದ್ಯತೆ

ಸುಮಾರು 2,000 ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ವಿತರಿಸುತ್ತಿರುವುದು ಸಂತಸದ ಸಂಗತಿ. ಹಿಂದೆ ವಿಕಲಚೇತನರ ಬಗ್ಗೆ ಸಮಾಜದಲ್ಲಿ ವಿಭಿನ್ನ ಭಾವನೆಗಳಿದ್ದವು. ಇದೀಗ ಅವರನ್ನು ಅನುಕಂಪದಿಂದ ನೋಡುವ ಬದಲು ಸಮಾಜದ ಮುಖ್ಯವಾಹಿನಿಗೆ ತಂದು ಸ್ವಾವಲಂಬಿಗಳನ್ನಾಗಿ ಮಾಡಬೇಕಾದ ಕಾಲ ಬಂದಿದೆ

Chikkaballapur News: ವೈರತ್ವದಾಚೆ ಮನುಷ್ಯತ್ವ ಮೆರೆದ ಶಾಸಕ, ಸಂಸದ: ಶಾಂತಮ್ಮ ನಮ್ಮ ತಾಯಿಯಷ್ಟೇ ಶ್ರೇಷ್ಠ ಎಂದ ಶಾಸಕ ಪ್ರದೀಪ್ ಈಶ್ವರ್

ಶಾಂತಮ್ಮ ನಮ್ಮ ತಾಯಿಯಷ್ಟೇ ಶ್ರೇಷ್ಠ ಎಂದ ಶಾಸಕ ಪ್ರದೀಪ್

ಇದು ರಾಜಕೀಯ ಹೊರತಾದ ಮನವಿ. ಸಂಸದರ ತಾಯಿ ನಮ್ಮೂರಿನ ಹೆಣ್ಣುಮಗಳು. ಅವರು ನಮ್ಮ ತಾಯಿಯಷ್ಟೇ ಶ್ರೇಷ್ಠರು. ಅವರ ಹೆಸರನ್ನು ಒಪಿಡಿಗೆ ಇಟ್ಟರೆ ನನಗೆ ಹೆಚ್ಚು ಸಂತೋಷವಾಗುತ್ತದೆ” ಇದು ನನ್ನ ಸಂಕಲ್ಪವೂ ಆಗಿತ್ತು ಎಂದು ಶಾಸಕ ಹೇಳಿದ ಮಾತು ಕಾರ್ಯಕ್ರಮದ ವಾತಾವರಣವನ್ನೇ ಬದಲಿಸಿತು.

Dr B R Ambedkar: ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ದೇಶದ ಎಲ್ಲ ಜನರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವದ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಮಾನವತಾವಾದಿ ಹಾಗೂ ಸಂವಿಧಾನ ಶಿಲ್ಪಿಯಾಗಿದ್ದಾರೆ. ಅವರನ್ನು ಜಾತಿಯ ಎಲ್ಲೆಗಳನ್ನು ಮೀರಿ ಪ್ರತಿಯೊಬ್ಬರೂ ಗೌರವಿಸಬೇಕು.

S N Subbareddy: ಶಿಕ್ಷಣದ ಜತೆಗೆ ಶಿಸ್ತನ್ನು ಕಲಿಸಿಕೊಡಿ: ಶಾಸಕ ಸುಬ್ಬಾರೆಡ್ಡಿ

ಶಿಕ್ಷಣದ ಜತೆಗೆ ಶಿಸ್ತನ್ನು ಕಲಿಸಿಕೊಡಿ: ಶಾಸಕ ಸುಬ್ಬಾರೆಡ್ಡಿ

ಮಕ್ಕಳು ತಮ್ಮ ಸುತ್ತಮುತ್ತಲಿನವರ ನಡವಳಿಕೆಯನ್ನು ಗಮನಿಸಿ ಅನುಸರಿಸುವುದರಿಂದ ಶಿಕ್ಷಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಿಂದುಳಿದ ಹಾಗೂ ಬರಪೀಡಿತ ಗುಡಿಬಂಡೆ ತಾಲೂಕಿ ನಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಬಡ ಕುಟುಂಬಗಳ ಅನೇಕ ಮಕ್ಕಳು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದು, ಶಿಕ್ಷಕರು ಅವರನ್ನು ತಮ್ಮ ಮಕ್ಕಳಂತೆ ಭಾವಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ  ಸಂಸ್ಮರಣೋತ್ಸವ; ಪ್ರಶಸ್ತಿ ಪ್ರದಾನ, ಅಭಿನಂದನಾ ಸಮಾರಂಭ

ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಸಂಸ್ಮರಣೋತ್ಸವ

Chikkaballapur News: ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸಂಸ್ಮರಣೋತ್ಸವದ ಅಂಗವಾಗಿ ಚಿಕ್ಕಬಳ್ಳಾಪುರದ ಎಸ್.ಜೆ.ಸಿ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಜರುಗಿತು.

UPI: ಯುಪಿಐ ಶುಲ್ಕದ ಚರ್ಚೆ: ಸಣ್ಣ ವ್ಯಾಪಾರಿಗಳಲ್ಲಿ ಆತಂಕ: ಕೆಲವು ವ್ಯಾಪಾರಿ ವಹಿವಾಟುಗಳಿಗೆ MDR ಜಾರಿ; ಲಾಭಾಂಶದ ಮೇಲೆ ಪರಿಣಾಮದ ಭೀತಿ

ಯುಪಿಐ ಶುಲ್ಕದ ಚರ್ಚೆ: ಸಣ್ಣ ವ್ಯಾಪಾರಿಗಳಲ್ಲಿ ಆತಂಕ

ದೊಡ್ಡ ಮೊತ್ತದ ವಹಿವಾಟುಗಳಿಗೆ MDR ಅನ್ವಯಿಸಿದರೆ ವೆಚ್ಚ ಹೆಚ್ಚಾಗಬಹುದು. ಈ ವೆಚ್ಚವನ್ನು ಗ್ರಾಹಕರಿಂದ ವಸೂಲು ಮಾಡಬಾರದು ಎಂಬ ನಿಯಮವಿದ್ದರೂ, ವ್ಯಾಪಾರಿಗಳ ಲಾಭಾಂಶದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕ ಸಂತೋಷ್ ಅಭಿಪ್ರಾಯ ಪಟ್ಟರು. ಹಾಲು ಮತ್ತು ಇತರ ಅಗತ್ಯ ವಸ್ತುಗಳ ಖರೀದಿಯಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶುಲ್ಕವು ಸಣ್ಣ ಅಂಗಡಿಗಳ ಮೇಲೂ ಪರಿಣಾಮ ಬೀರಬಹುದು.

UPI: ಯುಪಿಐ ಶುಲ್ಕದ ಚರ್ಚೆ: ಸಣ್ಣ ವ್ಯಾಪಾರಿಗಳಲ್ಲಿ ಆತಂಕ: ಕೆಲವು ವ್ಯಾಪಾರಿ ವಹಿವಾಟುಗಳಿಗೆ MDR ಜಾರಿ; ಲಾಭಾಂಶದ ಮೇಲೆ ಪರಿಣಾಮದ ಭೀತಿ

ಯುಪಿಐ ಶುಲ್ಕದ ಚರ್ಚೆ: ಸಣ್ಣ ವ್ಯಾಪಾರಿಗಳಲ್ಲಿ ಆತಂಕ

ದೊಡ್ಡ ಮೊತ್ತದ ವಹಿವಾಟುಗಳಿಗೆ MDR ಅನ್ವಯಿಸಿದರೆ ವೆಚ್ಚ ಹೆಚ್ಚಾಗಬಹುದು. ಈ ವೆಚ್ಚವನ್ನು ಗ್ರಾಹಕರಿಂದ ವಸೂಲು ಮಾಡಬಾರದು ಎಂಬ ನಿಯಮವಿದ್ದರೂ, ವ್ಯಾಪಾರಿಗಳ ಲಾಭಾಂಶದ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕ ಸಂತೋಷ್ ಅಭಿಪ್ರಾಯ ಪಟ್ಟರು. ಹಾಲು ಮತ್ತು ಇತರ ಅಗತ್ಯ ವಸ್ತುಗಳ ಖರೀದಿಯಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶುಲ್ಕವು ಸಣ್ಣ ಅಂಗಡಿಗಳ ಮೇಲೂ ಪರಿಣಾಮ ಬೀರಬಹುದು.

Chinthamani News: ಅಂಬೇಡ್ಕರ್ ಪ್ರತಿಮೆಗೆ ಪೂಜೆಗಿಂತ ಆಶಯಗಳ ಅಳವಡಿಕೆಯೇ ನಿಜವಾದ ಗೌರವ: ಇಒ ಆನಂದ್

ಅಂಬೇಡ್ಕರ್ ಪ್ರತಿಮೆಗೆ ಪೂಜೆಗಿಂತ ಆಶಯಗಳ ಅಳವಡಿಕೆಯೇ ನಿಜವಾದ ಗೌರವ

ನಗರದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಹೆಸರನ್ನು ಗೌರವದಿಂದ ಉಚ್ಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅವರ ಚಿಂತನೆ, ಹೋರಾಟದ ಉದ್ದೇಶ ಹಾಗೂ ಸಂವಿಧಾನದ ಮೂಲ ಆಶಯಗಳನ್ನು ಅರ್ಥಮಾಡಿ ಕೊಳ್ಳುವ ಪ್ರಯತ್ನ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ

Chikkaballapur News: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ನಮನ

ಗ್ರಾಮೀಣ ಯುವಕರಿಗೆ ಜಾಗತಿಕ ಅವಕಾಶ ಕಲ್ಪಿಸುವುದೇ ವಿಶ್ವೇಶ್ವರಯ್ಯ ಕನಸು

ಮುದ್ದೇನಹಳ್ಳಿಯಂತಹ ಗ್ರಾಮೀಣ ಪ್ರದೇಶದಿಂದಲೇ ಅಚಲ ಸಂಕಲ್ಪ, ಶಿಸ್ತು ಮತ್ತು ಪರಿಶ್ರಮದ ಮೂಲಕ ದೇಶ ಹೆಮ್ಮೆಪಡುವ ಎಂಜಿನಿಯರ್ ಆಗಿ ವಿಶ್ವೇಶ್ವರಯ್ಯ ಬೆಳೆದರು. ಅವರ ಬದುಕು, ಸಾಧನೆ ಮತ್ತು ದೂರದೃಷ್ಟಿ ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಪ್ರತಿಭೆಗೂ ಸೂಕ್ತ ಅವಕಾಶ ದೊರೆತರೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅವರ ಜೀವನ ತೋರಿಸಿಕೊಟ್ಟಿದೆ

Praja Seve: ಪ್ರಜಾ ಸೇವೆಯಲ್ಲಿ ಜನರ ಆಕ್ರೋಶ: ಅರ್ಜಿಗಳಿಗಷ್ಟೇ ಸೀಮಿತವೇ...ಪ್ರಜಾ ಸೇವೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಯಾವಾಗ?

ಪ್ರಜಾ ಸೇವೆಯಲ್ಲಿ ಜನರ ಆಕ್ರೋಶ: ಅರ್ಜಿಗಳಿಗಷ್ಟೇ ಸೀಮಿತವೇ...

ಅರ್ಜಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಅರ್ಜಿಗಳು ಬುಟ್ಟಿಗೆ ಹೋಗುತ್ತಿವೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸ ದಿದ್ದರೆ ಸರ್ಕಾರಿ ಕಚೇರಿಗಳಿಗೆ ಕುರಿ-ಮೇಕೆಗಳನ್ನು ತಂದು ಹಾಕಿ ಬೀಗ ಹಾಕುವ ಹೋರಾಟ ನಡೆಸಬೇಕಾಗುತ್ತದೆ

Gauribidanur News: ಗೌರಿಬಿದನೂರಿನಲ್ಲಿ ತಾರಕಕ್ಕೇರಿದ ಹಾಲಿ-ಮಾಜಿ ಶಾಸಕರ ವಾಕ್ಸಮರ

ಗೌರಿಬಿದನೂರಿನಲ್ಲಿ ತಾರಕಕ್ಕೇರಿದ ಹಾಲಿ-ಮಾಜಿ ಶಾಸಕರ ವಾಕ್ಸಮರ

ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಸಿಗುತ್ತಿಲ್ಲ. ರೌಡಿಗಳು ಹಾಗೂ ದಂಧೆಕೋರರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲ ವಾಗಿದೆ ಎಂದು ದೂರಿದರು. ವ್ಯವಸ್ಥೆ ಸರಿಪಡಿಸದಿದ್ದರೆ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

Chikkaballapur News: ಅರಿತ್‌ಮೆಟಿಕ್ ಜೀನಿಯಸ್ ಸ್ಪರ್ಧೆಯಲ್ಲಿ 1800 ವಿದ್ಯಾರ್ಥಿಗಳ ಭಾಗಿ

ಅರಿತ್‌ಮೆಟಿಕ್ ಜೀನಿಯಸ್ ಸ್ಪರ್ಧೆಯಲ್ಲಿ 1800 ವಿದ್ಯಾರ್ಥಿಗಳ ಭಾಗಿ

ಮೆದುಳಿನ ಚುರುಕುತನ ಹೆಚ್ಚಿಸಿಕೊಳ್ಳಲು ಅನುಸರಿಸಬಹುದಾದ ಹಲವು ಸರಳ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಗಣಿತದ ಲೆಕ್ಕಾಚಾರಗಳನ್ನು ಸುಲಭವಾಗಿ ಮಾಡುವ ವಿವಿಧ ಸೂತ್ರಗಳು ಮತ್ತು ತಂತ್ರಗಳನ್ನು ಪರಿಚಯಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ವಿದ್ಯಾರ್ಥಿ ಗಳು ವೇಗ ಮತ್ತು ನಿಖರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು

Byrathi Suresh: ಪ್ರಜಾಪ್ರಭುತ್ವದ ಮೌಲ್ಯಗಳಿಂದ ಸಮಾಜದ ಸಮಸ್ಯೆ ಪರಿಹಾರ ಸಾಧ್ಯ

ಪ್ರಜಾಪ್ರಭುತ್ವದ ಮೌಲ್ಯಗಳಿಂದ ಸಮಾಜದ ಸಮಸ್ಯೆ ಪರಿಹಾರ ಸಾಧ್ಯ

ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ನಮಗೆ ಪರಮೋಚ್ಛವಾದ ಸಂವಿಧಾನ ನೀಡಿದ್ದಾರೆ. ಅದುವೇ ನಮಗೆ ಭಗವದ್ಗೀತೆ, ಅದುವೇ ಕುರಾನ್ ಮತ್ತು ಬೈಬಲ್ ಆಗಿದೆ ಎಂದರು. ಅಂಬೇಡ್ಕರ್ ಅವರು ಒಂದೇ ವರ್ಗಕ್ಕೆ ಸೀಮಿತವಾಗಿದ್ದ ಅಧಿಕಾರವನ್ನು ಎಲ್ಲಾ ವರ್ಗಗಳಿಗೂ ಸಿಗುವಂತೆ ಮಾಡಿದ ಧೀಮಂತ ನಾಯಕರಾಗಿದ್ದಾರೆ. ಅವರು ಕೊಟ್ಟಿರುವ ಸಂವಿಧಾನ ನಮ್ಮ ದೇಶದ ಬೆನ್ನೆಲುಬಾಗಿದ್ದರೆ, ಅದರ ಪೀಠಿಕೆ ಆತ್ಮವಾಗಿದೆ ಎಂದು ಬಣ್ಣಿಸಿದರು.

International Day of Democracy: ಗುಡಿಬಂಡೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಗುಡಿಬಂಡೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ(International Day of Democracy Celebration)ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು. ನಂತರ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.

International Day of Democracy: ಗುಡಿಬಂಡೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಗುಡಿಬಂಡೆಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ(International Day of Democracy Celebration)ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು. ನಂತರ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು.

Road Accident: ದ್ವಿಚಕ್ರ ವಾಹನ–ಕಾರಿನ ನಡುವೆ ಅಪಘಾತ: ಬಾಲಕ ಸ್ಥಳದಲ್ಲೇ ಮೃತ

ದ್ವಿಚಕ್ರ ವಾಹನ–ಕಾರಿನ ನಡುವೆ ಅಪಘಾತ

ಅಪಘಾತದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಹಫಾನ್ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಡಿಕಲ್‌ ಶಾಪ್‌ಗೆ ಮಾತ್ರೆ ತರಲು ಸ್ನೇಹಿತನ ದ್ವಿಚಕ್ರ ವಾಹನದಲ್ಲಿ ರಯಾನ್ ಹಾಗೂ ಹಫಾನ್ ತೆರಳುತ್ತಿದ್ದ ವೇಳೆ, ಎದುರಿನಿಂದ ಬಂದ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

K H Puttaswamy gowda: ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಎಲ್ಲರ ಜವಾಬ್ದಾರಿ: ಶಾಸಕ ಪುಟ್ಟಸ್ವಾಮಿಗೌಡ

ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಎಲ್ಲರ ಜವಾಬ್ದಾರಿ

ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಂವಿಧಾನ ಪ್ರತಿಪಾದಿ ಸಿರುವ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

Chikkaballapur News: ದುಡಿಮೆಯೇ ದೇವರು ಎಂಬುದನ್ನು ಬದುಕಿನ ಮೂಲಕ ತೋರಿಸಿದ ವಿಶ್ವೇಶ್ವರಯ್ಯ: ಕೋಡಿ ರಂಗಪ್ಪ

ʼದುಡಿಮೆಯೇ ದೇವರುʼ: ಬದುಕಿನ ಮೂಲಕ ತೋರಿಸಿದ ವಿಶ್ವೇಶ್ವರಯ್ಯ

ಮಂಡಿಕಲ್‌ನ ಕರ್ನಾಟಕ ಪಬ್ಲಿಕ್ ಶಾಲಾ ಸಮುಚ್ಚಯ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಸಹಯೋಗದಲ್ಲಿ ಕೆಪಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಜೀವನದ ಕೊನೆಯ ಕ್ಷಣದವರೆಗೂ ದುಡಿಯಲು ಇಚ್ಛಿಸುತ್ತೇನೆ” ಎಂಬ ವಿಶ್ವೇಶ್ವರಯ್ಯನವರ ಮಾತು ಪ್ರತಿಯೊಬ್ಬರಿಗೂ ಸ್ಫೂರ್ತಿ ಯಾಗಬೇಕು

Shidlaghatta News: ಶಿಡ್ಲಘಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಾದಾಸ್ ಗೋ ಸಂತೆ’: ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಗುದ್ದಲಿ ಪೂಜೆ

ಶಿಡ್ಲಘಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಾದಾಸ್ ಗೋ ಸಂತೆ'

ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಚಿಂತಾಮಣಿ ರಸ್ತೆಯಲ್ಲಿರುವ ಬೊಮ್ಮನಹಳ್ಳಿ ಹಾಗೂ ಪಿಂಡಪಾಪನಹಳ್ಳಿ ಮಧ್ಯಭಾಗದಲ್ಲಿರುವ ನಾದಾಸ್ ಹೋಟೆಲ್ ಮುಂಭಾಗದಲ್ಲಿ ‘ನಾದಾಸ್ ಫ್ರೂಟ್’ ಸಂಸ್ಥೆಯ ಅಡಿಯಲ್ಲಿ ಆರಂಭಿಸಲಾಗುತ್ತಿರುವ ‘ನಾದಾಸ್ ಗೋ ಸಂತೆ’ಗೆ ಗುದ್ದಲಿ ಪೂಜೆ ನೆರವೇರಿಸ ಲಾಗುವುದು ಎಂದರು.

Health Camp: ಲಯನ್ಸ್ ಸಂಸ್ಥೆಯಿಂದ 233ನೇ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ: 75ಕ್ಕೂ ಅಧಿಕ ವಯೋವೃದ್ಧರ ತಪಾಸಣೆ; 34 ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆ

ಲಯನ್ಸ್ ಸಂಸ್ಥೆಯಿಂದ 233ನೇ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

ನಗರದ ಮುನೇಶ್ವರ ಬಡಾವಣೆಯಲ್ಲಿರುವ ಲಯನ್ಸ್ ಕಣ್ಣಿನ ತಪಾಸಣಾ ಕೇಂದ್ರದಲ್ಲಿ ನಡೆದ 233ನೇ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವಯೋವೃದ್ಧರು ದೃಷ್ಟಿದೋಷದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿತಿಂಗಳು ದಾನಿಗಳ ಸಹಕಾರದಿಂದ ಸಂಸ್ಥೆ ನಡೆಸುತ್ತಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳು ಇಂತಹವರಿಗೆ ಆಸರೆಯಾಗಿವೆ

Unique Ganeshotsav: ಸಾಯಿರಾಂ ಶಾಲೆಯಲ್ಲಿ ವಿಭಿನ್ನ ಗಣೇಶೋತ್ಸವ; ಆರೋಗ್ಯ, ಶಿಸ್ತು–ಏಕತೆಯ ಸಂದೇಶ

ಗಣೇಶನ ಆಕೃತಿಯಲ್ಲಿ ಕುಳಿತು ವ್ಯಾಯಾಮ ಮಾಡಿದ ವಿದ್ಯಾರ್ಥಿಗಳು!

ಶಾಲೆಯ ದೈಹಿಕ ಶಿಕ್ಷಣ ಅವಧಿಯಲ್ಲಿ ನೂರಾರು ವಿದ್ಯಾರ್ಥಿಗಳು ಮೈದಾನದಲ್ಲಿ ಗಣೇಶನ ಆಕೃತಿಯ ವಿನ್ಯಾಸದಲ್ಲಿ ವ್ಯವಸ್ಥಿತವಾಗಿ ಕುಳಿತುಕೊಂಡು ಸಾಮೂಹಿಕ ವ್ಯಾಯಾಮ ಪ್ರದರ್ಶಿಸಿದರು. ವಿವಿಧ ಬಣ್ಣಗಳ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ನಿಗದಿತ ವಿನ್ಯಾಸದಲ್ಲಿ ಕುಳಿತು ಕೊಂಡಾಗ, ಮೇಲಿನಿಂದ ವೀಕ್ಷಿಸಿದವರಿಗೆ ಮೈದಾನದಲ್ಲಿ ಬೃಹತ್ ಗಣೇಶನ ಆಕೃತಿ ಮೂಡಿಬಂದಂತೆ ಕಂಡುಬಂತು.

B N Ravikumar: ಜನರ ಅಹವಾಲುಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಶಾಸಕ ಬಿ.ಎನ್.ರವಿಕುಮಾರ್ ಸೂಚನೆ

ಕುಡಿಯುವ ನೀರಿನ ಸಮಸ್ಯೆ ಕಂಡ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು

ಬಶೆಟ್ಟಿಹಳ್ಳಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ‘ಪ್ರಜಾಸೇವೆ–ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಪಿಡಿಒಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಲಭ್ಯತೆ ಪರಿಶೀಲಿಸಬೇಕು ಎಂದರು.

Gauribidanur News: ಗಣೇಶೋತ್ಸವಕ್ಕೆ ಅನಗತ್ಯ ಷರತ್ತು ವಿಧಿಸಬೇಡಿ: ಹಿಂದೂ ಸಂಘಟನೆಗಳ ಆಗ್ರಹ

ಕಾನೂನು ಎಲ್ಲರಿಗೂ ಸಮಾನವಾಗಿರಲಿ

ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಧಾರ್ಮಿಕ ಹಾಗೂ ಶಾಸ್ತ್ರೋಕ್ತ ವಿಧಿ–ವಿಧಾನಗಳ ಮೂಲಕ ಗಣೇಶೋತ್ಸವ ಆಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕು. ವರ್ಷಕ್ಕೊಮ್ಮೆ ನಡೆಯುವ ಗಣೇಶೋತ್ಸವಕ್ಕೆ ಅನಗತ್ಯ ನಿರ್ಬಂಧಗಳನ್ನು ವಿಧಿಸಬಾರದು ಎಂದು ಆಗ್ರಹಿಸಿದರು.

Loading...