Chikkaballapur News: ಬಾಗೇಪಲ್ಲಿಯಲ್ಲಿ: "ಸ್ಟಾಪ್ ವೋಟ್ ಚೊರಿ" ಸ್ಟಿಕರ್ ಅಭಿಯಾನಕ್ಕೆ ಚಾಲನೆ
ರಾಷ್ಟ್ರ ವ್ಯಾಪಿ ನಡೆಯು ತ್ತಿರುವಂತಹ ಸ್ಟಾಪ್ ವೋಟ್ ಚೊರಿ" ("ಮತಗಳ್ಳತನ ನಿಲ್ಲಿಸಿ") ಸ್ಟಿಕರ್ ಅಭಿಯಾನವನ್ನು ಇಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಅಭಿಯಾನ ಪ್ರಾರಂಭಿಸಿದ್ದೇವೆ. ಇಡೀ ದೇಶಾದ್ಯಂತ ವ್ಯಾಪ್ತಿ ಯಲ್ಲಿ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾ ನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿ ದ್ದಾರೆ.

ಬಾಗೇಪಲ್ಲಿಯಲ್ಲಿ: "ಸ್ಟಾಪ್ ವೋಟ್ ಚೊರಿ" ಸ್ಟಿಕರ್ ಅಭಿಯಾನಕ್ಕೆ ಚಾಲನೆ ಮಂಗಳವಾರ ಚಾಲನೆ ನೀಡಲಾಯಿತು.

ಬಾಗೇಪಲ್ಲಿ: ರಾಷ್ಟ್ರ ವ್ಯಾಪಿ ನಡೆಯುತ್ತಿರುವಂತಹ ಸ್ಟಾಪ್ ವೋಟ್ ಚೊರಿ" ("ಮತಗಳ್ಳತನ ನಿಲ್ಲಿಸಿ") ಸ್ಟಿಕರ್ ಅಭಿಯಾನವನ್ನು ಮಂಗಳವಾರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪುರಸಭೆ ಸದಸ್ಯರಾದ ಎ.ನಂಜುAಡಪ್ಪ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ವಾಹನಗಳಿಗೆ, ಬಸ್ ನಿಲ್ದಾಣ ಗೋಡೆ, ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಜನ ಸಾಮಾನ್ಯರಲ್ಲಿ ಮತಗಳತನದ ವಿರುದ್ಧ ಜಾಗೃತಿ ಮೂಡಿಸಲಾಯಿತು.
ಇದನ್ನೂ ಓದಿ: India-China Trade: ಭಾರತ- ಚೀನಾ ವ್ಯಾಪಾರ ಮತ್ತೆ ಪುನರಾರಂಭ; ರಸಗೊಬ್ಬರ, ಸುರಂಗ ಯಂತ್ರ ರಫ್ತಿಗೆ ಡ್ರಾಗನ್ ರಾಷ್ಟ್ರ ಒಪ್ಪಿಗೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎ.ನಂಜುಂಡಪ್ಪ ಮಾತನಾಡಿ ರಾಷ್ಟ್ರ ವ್ಯಾಪಿ ನಡೆಯು ತ್ತಿರುವಂತಹ ಸ್ಟಾಪ್ ವೋಟ್ ಚೊರಿ" ("ಮತಗಳ್ಳತನ ನಿಲ್ಲಿಸಿ") ಸ್ಟಿಕರ್ ಅಭಿಯಾನವನ್ನು ಇಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಅಭಿಯಾನ ಪ್ರಾರಂಭಿಸಿದ್ದೇವೆ.
ಇಡೀ ದೇಶಾದ್ಯಂತ ವ್ಯಾಪ್ತಿ ಯಲ್ಲಿ ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಅಧ್ಯಯನ ಮಾಡಿ, ಮತದಾನದ ಅಂಕಿ ಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿ ದಾಖಲೆಗಳ ಸಮೇತ ದೇಶದ ಜನರ ಮುಂದೆ ಇಟ್ಟಿ ದ್ದಾರೆ. ದೇಶಾದ್ಯಂತ ಮತ ಅಕ್ರಮ ಬಯಲಿಗೆ ಎಳೆಯಲು ಕರ್ನಾಟಕದಲ್ಲಿ ಮುನ್ನುಡಿ ಬರೆಯುತ್ತಿದ್ದಾರೆ ಕರ್ನಾಟಕದಿಂದ ದೇಶಕ್ಕೆ ಮಹತ್ವದ ಸಂದೇಶ ರವಾನಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗೂಳೂರು ಬಾಬು, ನವೀನ್ ರಾಜ್ ಆಸೀಫ್ ಸಲೀಮ್ ಶ್ರೀನಿವಾಸ್ ವೆಂಕಟೇಶ್, ರಂಜಿತ್ ಕುಮಾರ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.