Chikkaballapur News: ನಾಯಕತ್ವದ ಗುಣಗಳು ಶಾಲಾ ಹಂತದಲ್ಲೇ ಮಕ್ಕಳಿಗೆ ಪರಿಚಯವಾಗಬೇಕಿದೆ: ಕಾರ್ಯದರ್ಶಿ ಶೈಲಜಾ ವೆಂಕಟೇಶ್ ಅಭಿಮತ
ಶಾಲಾ ಹಂತದಲ್ಲಿ ನೀಡುವ ಔಪಚಾರಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯ ಗಳನ್ನು ಪರಿಚಯಿಸುವ ಅಗತ್ಯವಿದೆ. ಸಂವಿಧಾನದ ಆಶಯಗಳನ್ನು ಬಿಂಬಿಸುವಂತಹ ಶಾಸಕಾಂಗ ಆದರ ಕಾರ್ಯವೈಖರಿಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ

ಪ್ರಜಾಪ್ರಭುತ್ವದ ರಕ್ಷಕರಾಗಿರುವ ಜನಪ್ರತಿನಿಧಿಗಳು ಹೇಗಿರಬೇಕು? ನಾಯಕತ್ವ ಎಂದರೆ ಏನು ಎಂಬ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲೇ ಪರಿಚಯ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಪೂರ್ಣಪ್ರಜ್ಞ ಶಾಲೆಯ ಕಾರ್ಯದರ್ಶಿ ಶೈಲಜಾ ವೆಂಕಟೇಶ್ ತಿಳಿಸಿದರು. -

ಚಿಕ್ಕಬಳ್ಳಾಪುರ: ಪ್ರಜಾಪ್ರಭುತ್ವದ ರಕ್ಷಕರಾಗಿರುವ ಜನಪ್ರತಿನಿಧಿಗಳು ಹೇಗಿರಬೇಕು? ನಾಯಕತ್ವ ಎಂದರೆ ಏನು ಎಂಬ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲೇ ಪರಿಚಯ ಮಾಡುವುದರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಪೂರ್ಣಪ್ರಜ್ಞ ಶಾಲೆಯ ಕಾರ್ಯದರ್ಶಿ ಶೈಲಜಾ ವೆಂಕಟೇಶ್ ತಿಳಿಸಿದರು.
ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಆಯೋಜಿಸಿದ್ದ ಸ್ಟುಡೆಂಟ್ ಕೌನ್ಸಿಲ್ ಇನ್ವೆಸ್ಟಿಟ್ಯುರ್ ಸೆರೆಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಲಾ ಹಂತದಲ್ಲಿ ನೀಡುವ ಔಪಚಾರಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸುವ ಅಗತ್ಯವಿದೆ. ಸಂವಿಧಾನದ ಆಶಯಗಳನ್ನು ಬಿಂಬಿಸುವAತಹ ಶಾಸಕಾಂಗ ಆದರ ಕಾರ್ಯವೈಖರಿಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಪೂರ್ಣ ಪ್ರಜ್ಞ ವಿದ್ಯಾಸಂಸ್ಥೆಯಲ್ಲಿ ಕಾಲಕಾಲಕ್ಕೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಾ ಬರಲಾಗಿದೆ. ಶನಿವಾರ ಆಯೋಜಿಸಿದ್ದ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳಲ್ಲಿ ನಾಯಕತ್ವದ ಗುಣಗಳನ್ನು ಹೇಗೆ ತುಂಬಬೇಕು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ ಕೊಡಲಾಯಿತು ಎಂದರು.
ಚುನಾವಣೆಯ ಮೂಲಕ ತಮಗೆ ಬೇಕಾದ ನಾಯಕರನ್ನು ಆರಿಸಿಕೊಳ್ಳುವ ಅವಕಾಶವನ್ನು ಮಕ್ಕಳಿಗೆ ನೀಡುವ ಮೂಲಕ ವಿದ್ಯಾರ್ಥಿನಾಯಕರನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ಗಳನ್ನು ಹಂಚಲಾಯಿತು. ಇದು ಬಹು ಮುಖ್ಯವಾದ ಕಾರ್ಯಕ್ರಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು
ಪೋಷಕರಾದ ನಿರ್ಮಲ ಮಾತನಾಡಿ ಪೂರ್ಣಪ್ರಜ್ಞಾ ಶಾಲೆಯಲ್ಲಿ ಮಕ್ಕಳಿಗೆ ಕೇವಲ ಪಾಠ ಬೋಧನೆ ಮಾತ್ರ ಮಾಡದೆ ಅವರ ಸರ್ವಮತೋಮುಖ ಬೆಳವಣಿಗೆಗೆ ಬೇಕಾದ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಿರುವುದು ನಮಗೆ ತೃಪ್ತಿ ತಂದಿದೆ. ನಾಯಕತ್ವ ಗುಣಗಳನ್ನು ಈಗಿನಿಂದಲೇ ಬೆಳೆಸುವುದರಿಂದ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ಬೆಳೆಯಲು ಸಹಕಾರಿಯಾಗಲಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ನಾಯಕತ್ವ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳನ್ನು ಸಮವಸ್ತçದಲ್ಲಿ ಪೋಷಕರಾಗಿ ನೋಡಲು ಸಂತೋಷಪಟ್ಟಿದ್ದೇವೆ ಎಂದರು.

ಪೂರ್ಣ ಪ್ರಜ್ಞಾ ಶಾಲೆಯ ಪ್ರಾಂಶುಪಾಲೆ ರಾಧಿಕಾ ಮಾತನಾಡಿ ಸ್ಟುಡೆಂಟ್ ಕೌನ್ಸಿಲ್ ಇನ್ವೆಸ್ಟಿ ಟ್ಯೂಟ್ ಸೆರೆಮನಿ ಎಂಬ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ಕೆಲಸವನ್ನು ಮಾಡಲಾಗಿದೆ. 2025ನೇ ಸಾಲಿನಲ್ಲಿ ನಮ್ಮ ಶಾಲೆಯಲ್ಲಿ ನಡೆದ ಅತ್ಯುತ್ತಮ ಕಾರ್ಯಕ್ರಮದಲ್ಲಿ ಇದು ಒಂದಾಗಿದೆ. ಚುನಾವಣೆಯ ಮೂಲಕ ತಮಗೆ ಬೇಕಾದ ನಾಯಕರನ್ನು ಆರಿಸಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಈ ಅವಕಾಶ ವನ್ನು ಸಮರ್ಥವಾಗಿ ಬಳಸಿಕೊಂಡು ಶಾಲಾ ಹಂತದಲ್ಲಿ ವಿವಿಧ ನಾಯಕತ್ವ ನಾಯಕರನ್ನು ಆರಿಸಿಕೊಳ್ಳಲಾಯಿತು. ಇಂತಹ ಕಾರ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ಆಯೋಜಿಸಲು ನೆರವು ನೀಡಿದ ಸಂಸ್ಥೆಯ ಮುಖ್ಯಸ್ಥರಿಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಎಂದರು.
ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿ ಮುಖಂಡನಾಗಿ ಆಯ್ಕೆ ಆಗಿರುವ ಇಶಾಂಕ್ ಬಾಬು ಮಾತನಾಡಿ ಶಾಲೆಯಲ್ಲಿ ನಡೆದ ಚುನಾವಣೆಯ ಮೂಲಕ ನಾನು ನಾಯಕನಾಗಿ ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲಾ ಸಹಪಾಠಿಗಳಿಗೂ, ಶಿಕ್ಷಕರಿಗೂ, ಆಡಳಿತ ಮಂಡಳಿಗೂ ಧನ್ಯವಾದ ಅರ್ಪಿಸುತ್ತೇನೆ. ಸಹಪಾಠಿಗಳ ಜೊತೆ ಮೆಡಲ್ ಧರಿಸುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಈ ವೇಳೆ ಪೂರ್ಣಪ್ರಜ್ಞಾ ಶಾಲೆಯ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಎಲ್ಲಾ ಬೋಧಕ ಬೋಧಕ್ಕೆ ತರ ಸಿಬ್ಬಂದಿ ಪೋಷಕರು ಇದ್ದರು.