ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಸಕರೇ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ : ಹರೀಶ್ ರೆಡ್ಡಿ ಆಗ್ರಹ

ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟಿರುವ ನಿಮ್ಮ ನಡೆಸ ಸರ್ವಥಾ ಸರಿಯಿಲ್ಲ. ನೀವು ಕ್ಷೇತ್ರದ ಜನರ ಸಮಸ್ಯೆ ಅರಿಯುವುದಕ್ಕಿಂತ ಹೆಚ್ಚಾಗಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಲ ಕಳೆಯುತ್ತಿದ್ದೀರಿ. ಶಾಸಕರೇ ನೀವು ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಜವಾಬ್ದಾರಿ ಸ್ಥಾನದಲ್ಲಿದ್ದೀರಿ,ಕೇವಲ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡಬೇಡಿ

ಶಾಸಕರೇ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ

ಸುದ್ದಿಗೋಷ್ಟಿಯಲ್ಲಿ ಹರೀಶ್ ರೆಡ್ಡಿ ಮಾತನಾಡಿದರು

Ashok Nayak Ashok Nayak Aug 12, 2025 11:42 PM

ಚಿಕ್ಕಬಳ್ಳಾಪುರ: ಚಾಲಕ ಬಾಬು ಅವರ ಆತ್ಮಹತ್ಯೆಯ ಇಡೀ ಪ್ರಕರಣವನ್ನು  ಶಾಸಕ ಪ್ರದೀಪ್ ಈಶ್ವರ್ ಅವರು  ತಮಗೆ ಅನುಕೂಲ ಆಗುವ ರೀತಿ ರಾಜಕೀಯಗೊಳಿಸಲು ಮುಂದಾಗಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು  ಬಿಜೆಪಿ ಯುವ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಹರೀಶ್ ರೆಡ್ಡಿ  ಆರೋಪಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿದರು.

ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೊರಟಿರುವ ನಿಮ್ಮ ನಡೆಸ ಸರ್ವಥಾ ಸರಿಯಿಲ್ಲ. ನೀವು ಕ್ಷೇತ್ರದ ಜನರ ಸಮಸ್ಯೆ ಅರಿಯುವುದಕ್ಕಿಂತ ಹೆಚ್ಚಾಗಿ ಚಾಲಕ ಬಾಬು ಆತ್ಮಹತ್ಯೆ ಪ್ರಕರಣ ದಲ್ಲಿ ಕಾಲ ಕಳೆಯುತ್ತಿದ್ದೀರಿ. ಶಾಸಕರೇ ನೀವು ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡುವ ಜವಾಬ್ದಾರಿ ಸ್ಥಾನದಲ್ಲಿದ್ದೀರಿ,ಕೇವಲ ದಲಿತರ ಹೆಸರೇಳಿ ಜಾತಿ ರಾಜಕಾರಣ ಮಾಡ ಬೇಡಿ ಎಂದು ಕಿಡಿ ಕಾರಿದರು.

ಇದನ್ನೂ ಓದಿ: Chikkaballapur News: 2028ಕ್ಕೆ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಎಂಎಲ್ಎ ಆಗಬೇಕು

ಮೃತ ಬಾಬು ಕುಟುಂಬದ ಬಗ್ಗೆ ನಮಗೂ ಅಪಾರವಾದ ಅನುಕಂಪವಿದೆ. ಆ ಕುಟುಂಬಕ್ಕೆ ನ್ಯಾಯ ಒದಗಿಸಲು ನಾವು ಕೂಡ ಮುಂದೆ ನಿಲ್ಲುತ್ತೇವೆ.ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಡಾ.ಕೆ. ಸುಧಾಕರ್ ಅವರ ಹೆಸರಿರುವ ಕಾರಣದಿಂದಾಗಿ ನೀವು ಈ ರೀತಿಯಾಗಿ ಅತಿರೇಕದ ರಾಜಕಾರಣ ಮಾಡುತ್ತಾ ದ್ವೇಷ ಮನೋಭಾವನೆಯಿಂದ ಈ ರೀತಿ ವರ್ತಿಸುತ್ತಿದ್ದೀರಿ. ಇನ್ನದಾದರೂ ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.

ಬಾಬು ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಇದು ಆಗಬೇಕೆಂದರೆ ಪೊಲೀಸ್ ಇಲಾಖೆಗೆ ಸ್ವಾತಂತ್ರ‍್ಯ ಕೊಡಬೇಕು. ಆಗ ಸತ್ಯಾಸತ್ಯತೆ ಹೊರಬಂದು, ನಿಜವಾದ ಸತ್ಯ ಹೊರಬರಲಿದೆ.ಹಾಗಾಗಿ ಮೃತ ಬಾಬು ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡೋಣ. ಅದನ್ನು ಬಿಟ್ಟು, ನಾವೇ ತೀರ್ಪು ನೀಡಲು ಮುಂದಾಗುವುದು ಪ್ರಜಾಪ್ರಭುತ್ವವನ್ನು ಅಣುಕಿಸಿದಂತೆ ಎಂದು ಹೇಳಿದರು.

ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ ಮಾತನಾಡಿ, ಸ್ಥಳೀಯ ಶಾಸಕ ಪ್ರದೀಪ್ ಈಶ್ವರವರು ತಮ್ಮ ಸ್ಥಾನದ ಶಾಶ್ವತ ಭದ್ರತೆಗಾಗಿ  ದಲಿತ ವರ್ಗವನ್ನು ಒಡೆದು ಆಳುತ್ತಿರುವುದು ಖಂಡನೀಯ ಮುಂದಿನ ದಿನಗಳಲ್ಲಿ ಪ್ರದೀಪ್ ಈಶ್ವರ್ ಅಥವಾ ಚಿಕ್ಕಬಳ್ಳಾಪುರ ಬಚಾವೋ ಎಂಬ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು , ಹೇಳಿದರು.

ದಲಿತ ವರ್ಗಕ್ಕೆ ಸೇರಿದ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಇವರ ಪುತ್ರ ಜಗದೀಶ್ ದಲಿತ ವರ್ಗಕ್ಕೆ ಸೇರಿದ್ದರು ಸಹ  ಶಾಸಕರ ಕಿರುಕುಳ ತಳಲಾರದೆ  ಎಸ್.ಎಂ. ಮುನಿಯಪ್ಪ ಅವರು ತಮ್ಮ  ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಪ್ರದೀಪ್ ಈಶ್ವರ್ ಅವರ ಚುನಾವಣೆಯಲ್ಲಿ ಹಗಲಿರಳು ಪಕ್ಷ ನಿಷ್ಠೆಯಿಂದ ಪ್ರಚಾರ ನಡೆಸಿದ್ದ ಜಗದೀಶ್ ಮೂಲೆಗುಂಪಾದರು, ಮೈಲಪ್ಪನಹಳ್ಳಿ ಸಮೀಪದ  ಪೆಟ್ರೋಲ್ ಬಂಕ್ ಒಂದರಲ್ಲಿ ದಲಿತ ಯುವಕ  ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಶಾಸಕರ ದಲಿತ ಪ್ರೇಮ ಎಲ್ಲಿ ಹೋಗಿತ್ತು. ಅದೇ ರೀತಿ ಕೆಳಗಿನ ತೋಟಗಳಲ್ಲಿ ದಲಿತ ವ್ಯಕ್ತಿಗೆ ಸೇರಿದ್ದ ತೋಟದಲ್ಲಿ 3000 ರೋಜ ಬೆಳೆಯನ್ನ ಹಾಳು ಮಾಡಿದಾಗ  ದಲಿತ ವ್ಯಕ್ತಿಯ ಪರ ಶಾಸಕರು ಏಕೆ ನಿಲ್ಲಲಿಲ್ಲ ಎಂದು ಕಟುವಾಗಿ ಪ್ರಶ್ನೆ ಮಾಡಿದರು.

ಶಾಸಕರ ಜೊತೆ ಈಗಿರುವ ಅನೇಕ ದಲಿತ ಮುಖಂಡರು ಈ ಹಿಂದೆ ಡಾ.ಕೆ.ಸುಧಾಕರ್ ರವರು ಶಾಸಕ ಸಚಿವರಾಗಿದ್ದ ಸಂದರ್ಭದಲ್ಲಿ ಅವರಿಂದ ಫಲಾನುಭವಿಗಳಾಗಿದ್ದರು ಎಂದು ಆರೋಪಿಸಿ ದರು.

ಸುದ್ದಿಗೋಷ್ಠಿಯಲ್ಲಿ ಡಿ.ಎಸ್‌ಎಸ್ ಜಿಲ್ಲಾ ಮುಖಂಡ , ನಲ್ಲಕದರೇನಹಳ್ಳಿ ಗಂಗಪ್ಪ, ತಾಲೂಕು ಅಧ್ಯಕ್ಷ  ಡಿ. ಹೊಸೂರು ದೇವದಾಸ್, ತಾಲೂಕು ಉಪಾಧ್ಯಕ್ಷ ಮುಸ್ಟೂರು ಮುನಿರಾಜು, ಸಮಾಜ ಸೇವಕರಾದ ಮಂಜುನಾಥ್, ಸಾಗರ್, ನಾಗೇಶ್, ಹರೀಶ್, ಚನ್ನಪ್ಪ ಮಂಜುನಾಥ್  ಮತ್ತಿತರರು ಇದ್ದರು.