Chikkaballapur News: : ಅಪ್ರಾಪ್ತರಿಗೆ ವಾಹನ ನೀಡಿದರೆ 25 ಸಾವಿರ ದಂಡ ಹಾಕ್ತಿವಿ: ಎಸ್ ಪಿ ರವರಿಂದ ಖಡಕ್ ವಾರ್ನಿಂಗ್
ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪೊಲೀ ಸರು ಕಾರ್ಯಾಚರಣೆ ನಡೆಸುತ್ತಿದ್ದು,ಇಲ್ಲಿಯವರೆಗೆ ಚಿಕ್ಕಬಳ್ಳಾಪುರದಲ್ಲಿ 40 ಹಾಗೂ ಬಾಗೇಪಲ್ಲಿಯಲ್ಲಿ 22 ವಾಹನಗಳು ವಶಕ್ಕೆ ತೆಗೆದಿದ್ದು,ಅವರ ಪೋಷಕರನ್ನು ಕರೆಸಿ ಕಾನೂನಿನ ಅರಿವು ಮೂಡಿಸಲಾಗಿದೆ.


ಚಿಂತಾಮಣಿ: ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುವ ಅಪ್ರಾಪ್ತರ ಪೋಷಕರನ್ನು ಕರೆಸಿ ಸಂಚಾರಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಗಳ ಜರುಗಿಸುವುದಾಗಿ ಎಸ್‌ಪಿ ಕುಶಾಲ್ ಚೌಕ್ಸ್ ಎಚ್ಚರಿಕೆ ನೀಡಿದರು.
ಇಂದು ಚಿಂತಾಮಣಿ ನಗರ ಭಾಗದಲ್ಲಿ ಅಪ್ರಾಪ್ತರು ಓಡಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಹಿಡಿದು ಚಿಂತಾಮಣಿ ನಗರ ಠಾಣೆ ಪೊಲೀಸರು ದಂಡ ವಿಧಿಸಿ ಅವರ ಪೋಷಕರಿಗೆ ಕಾನೂನಿನ ಅರಿವು ಮೂಡಿಸಲಾಯಿತು.
ಈ ವೇಳೆ ಎಸ್ ಪಿ ಕುಶಾಲ್ ಚೌಕ್ಸ್ ರವರು ಮಾತನಾಡಿ ಹೆಲೈಟ್ ಧರಿಸಲು ಉದಾಸೀನತೆ ತೋರುವ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸುವುದು ಸರಿಯಲ್ಲ. ವಾಹನ ಸಂಚಾರ ನಿಯಮ ಎಲ್ಲೆಡೆ ಅನ್ವಯವಾಗುತ್ತದೆ.ವಾಹನ ಸವಾರರು ತಪ್ಪದೇ ಪಾಲಿಸಬೇಕೆಂದು ಸೂಚಿಸಿದರು.
ಇದನ್ನೂ ಓದಿ: Chikkaballapur News: ವಿದ್ಯಾರ್ಥಿ ಸಮೂಹ ದುಶ್ಚಟಗಳಿಂದ ದೂರವಿದ್ದರೆ ಕಾಲೇಜು ಶಿಕ್ಷಣ ಭವಿಷ್ಯ ನೀಡಲಿದೆ : ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ
ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು,ಇಲ್ಲಿಯವರೆಗೆ ಚಿಕ್ಕಬಳ್ಳಾಪುರದಲ್ಲಿ 40 ಹಾಗೂ ಬಾಗೇಪಲ್ಲಿಯಲ್ಲಿ 22 ವಾಹನಗಳು ವಶಕ್ಕೆ ತೆಗೆದಿದ್ದು,ಅವರ ಪೋಷಕರನ್ನು ಕರೆಸಿ ಕಾನೂನಿನ ಅರಿವು ಮೂಡಿಸಲಾಗಿದೆ. ಅಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ವಾಹನ ನೀಡಬಾರದು.ಇದು ಮುಂದುವರಿದರೆ ಕ್ರಮ ಕೈಗೊಳ್ಳಲಾಗುವುದು.ಸಂಚಾರಿ ನಿಯಮ ಪಾಲಿಸದೆ ವಾಹನ ಚಲಾಯಿಸು ವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಜಗನ್ನಾಥ್ ರೈ,ಡಿವೈಎಸ್ಪಿ ಮುರುಳಿಧರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್, ಸೇರಿದಂತೆ ಮತ್ತಿತರರು ಇದ್ದರು.