ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

CT Ravi: ವಿಧಾನ ಪರಿಷತ್‌ನಲ್ಲಿ ಒಂದು ದಿನದ ಮಟ್ಟಿಗೆ ಸಿಟಿ ರವಿ ಅಮಾನತು

ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಅವರಿಗೆ ಪಾಕಿಸ್ತಾನದ ನಾಲಿಗೆ ಎಂದು ಹೇಳಿದ್ದ ಸಿಟಿ ರವಿಯವರು ಕ್ಷಮೆಯಾಚನೆ ಮಾಡಬೇಕೆಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದಿದ್ದರು. ಈ ಸಂಬಂಧ ರವಿ ಕೂಡಲೇ ಸದನಕ್ಕೆ ಹಾಜರಾಗಬೇಕೆಂದು ಸಭಾಪತಿ ಹೊರಟ್ಟಿ ಸೂಚಿಸಿದ್ದರು. ಆದರೂ ಸಿಟಿ ರವಿ ಬರದಿದ್ದರಿಂದ ಸಭಾಪತಿ ಈ ಕ್ರಮ ಕೈಗೊಂಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಒಂದು ದಿನದ ಮಟ್ಟಿಗೆ ಸಿಟಿ ರವಿ ಅಮಾನತು

ಸಿಟಿ ರವಿ -

ಹರೀಶ್‌ ಕೇರ
ಹರೀಶ್‌ ಕೇರ Feb 5, 2026 7:46 AM

ಬೆಂಗಳೂರು, ಫೆ.04: ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಅವರು ಒಂದು ದಿನದ ಮಟ್ಟಿಗೆ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ಅವರನ್ನು ಅಮಾನತು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದ್ರೋಹಿ ಎಂದಿದ್ದ ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ಅವರಿಗೆ ಪಾಕಿಸ್ತಾನದ ನಾಲಿಗೆ ಎಂದು ಸಿಟಿ ರವಿಯವರು ಸದನದಲ್ಲೇ ಹೇಳಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಯ್ತು. ಕೂಡಲೇ ಸಿಟಿ ರವಿ ಕ್ಷಮೆಯಾಚನೆ ಮಾಡಬೇಕೆಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದಿದ್ದರು. ಈ ಸಂಬಂಧ ರವಿ ಕೂಡಲೇ ಸದನಕ್ಕೆ ಹಾಜರಾಗಬೇಕೆಂದು ಸಭಾಪತಿ ಹೊರಟ್ಟಿ ಸೂಚಿಸಿದ್ದರು. ಆದರೂ ಸಿಟಿ ರವಿ ಬರದಿದ್ದರಿಂದ ಸಭಾಪತಿ ಈ ಕ್ರಮ ಕೈಗೊಂಡಿದ್ದಾರೆ.

ರಾತ್ರಿ 8 ಗಂಟೆಯೊಳಗೆ ಸಿ.ಟಿ.ರವಿ ಸದನಕ್ಕೆ ಕರೆತರುವಂತೆ ವಿಪಕ್ಷ ನಾಯಕರು, ಪರಿಷತ್​ನ ವಿಪಕ್ಷ ಮುಖ್ಯ ಸಚೇತಕರಿಗೆ ಹೇಳಿದ್ದೆ. ಆದರೆ, ಬಿಜೆಪಿ ಸದಸ್ಯ ಸಿ.ಟಿ.ರವಿ ಸಭಾಪತಿ ಆದೇಶಕ್ಕೆ ಗೌರವ ನೀಡಿರುವುದಿಲ್ಲ. ಹೀಗಾಗಿ ಸಿ.ಟಿ.ರವಿಯನ್ನು ಈ ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಇದರಿಂದ ಪರಿಷತ್​​ ಸದಸ್ಯ ಸಿ.ಟಿ.ರವಿ ಬಂದರೆ ಹೊರಗೆ ನಿಲ್ಲಿಸಿ. ಯಾವ ಕಡೆಯಿಂದಲೂ ಅವರು ಒಳಗೆ ಬರತಕ್ಕದ್ದಲ್ಲ. ಎಲ್ಲಾ ಬಾಗಿಲಲ್ಲಿ ಇರುವವರಿಗೆ ಹೇಳಿ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಪರಿಷತ್​​ನ ಚೀಫ್ ಮಾರ್ಷಲ್​​ಗೆ ಖಡಕ್ ಸೂಚನೆ ನೀಡಿದರು.

CT Ravi: ಧರ್ಮಸ್ಥಳ ಕುರಿತ ಷಡ್ಯಂತ್ರ ಬಹಿರಂಗಪಡಿಸಿ: ಸಿಎಂ, ಡಿಸಿಎಂಗೆ ಸಿಟಿ ರವಿ ಆಗ್ರಹ