ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಕ್ಷಿಣ ಕನ್ನಡ

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಮಂಗಳೂರು ಕಾರಾಗೃಹದ ಬಳಿ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ

Priyank Kharge: ಕಾರಾಗೃಹದ ಭದ್ರತೆ ಅತ್ಯಂತ ಮುಖ್ಯವಾಗಿರುವಂತೆಯೇ, ಕಾರಾಗೃಹದ ಸುತ್ತಮುತ್ತ ವಾಸಿಸುವ ಸಾರ್ವಜನಿಕರಿಗೆ ಮತ್ತು ಇತರ ಬಳಕೆದಾರರಿಗೆ ಮೊಬೈಲ್ ಸಂಪರ್ಕ ಸೇವೆಯಲ್ಲಿ ಅನಗತ್ಯ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದೂ ಅಗತ್ಯ. ಈ ಎರಡೂ ಅಗತ್ಯಗಳ ನಡುವೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ತುಳುವಿಗೆ ರಾಜ್ಯಭಾಷೆ ಸ್ಥಾನ ಸೇರಿ ಹಲ ಘೋಷಣೆ ನಿರೀಕ್ಷೆ ಕರಾವಳಿ ಕೇಂದ್ರಿತವಾದ 35 ವಿಚಾರಗಳನ್ನು ಚರ್ಚಿಸುವ ಸಾಧ್ಯತೆ: ಇಂದು ಕರಾವಳಿಯಲ್ಲಿ ಮಂತ್ರಿಮಂಡಲ ಸಭೆ

ಇಂದು ಕರಾವಳಿಯಲ್ಲಿ ಮಂತ್ರಿಮಂಡಲ ಸಭೆ

ದ.ಕನ್ನಡ, ಉಡುಪಿ ಮತ್ತು ಉ.ಕನ್ನಡ ಜಿಗಳಿಗೆ ಸಂಬಂಧಿಸಿದ ಸಂಪುಟ ಸಭೆಯಾದರೂ, ಮೀನು ಗಾರಿಕೆ, ಪ್ರವಾಸೋದ್ಯಮ, ಕಂದಾಯ ಭೂಮಿ, ಪಿಲಿಕುಳ ಅಭಿವೃದ್ಧಿ, ಕೋಸ್ಟಲ್ ರೋಡ್, ಸಿಆರ್ ಝಡ್ ಸಡಿಲಿಕೆ ಮುಂತಾದ 35ಕ್ಕೂ ಹೆಚ್ಚು ಮಂಗ ಳೂರು ಕೇಂದ್ರೀಕೃತ ಅಭಿವೃದ್ಧಿ ಯೋಜನೆಗಳ ವಿಷಯ ಮಂಡನೆ ನಡೆಯಲಿವೆ. ಕ್ರೂಸ್ ಟೂರಿಸಂ, ಬೋಟ್ ಹೌಸ್, ಹೂಡಿಕೆ ಹೆಚ್ಚಳ, ಕಡಲ ತೀರ ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ತೀರ್ಮಾನ ನಿರೀಕ್ಷಿಸಲಾಗಿದೆ.

ನಾಳೆ ಕರಾವಳಿಯಲ್ಲಿ ಸಂಪುಟ ಸಭೆ: ತುಳು 2ನೇ ಆಡಳಿತ ಭಾಷೆ, ಮೂಲಸೌಕರ್ಯ ಯೋಜನೆಗಳಿಗೆ ಅಧಿಕೃತ ಮುದ್ರೆಯ ನಿರೀಕ್ಷೆ

ನಾಳೆ ಕರಾವಳಿಯಲ್ಲಿ ಸಂಪುಟ ಸಭೆ

ಕರ್ನಾಟಕದ ಆಡಳಿತ ಶಕ್ತಿ ಸೌಧವೇ ಕರಾವಳಿಯಂಗಳಕ್ಕೆ ಇಳಿದು ಬರುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಧಾರ್ಮಿಕಸಾಮಾಜಿಕ ಸಂಘಟನೆಗಳು ಹಾಗೂ ಕೈಗಾರಿಕಾ ಒಕ್ಕೂಟಗಳು ಸರಕಾರದ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವನೆಗಳು ಮತ್ತು ಅವುಗಳ ಸಂಪುಟ ಅನುಮೋದನೆಯ ಸಾಧ್ಯತೆಗಳು ಹೀಗಿದೆ.

ಕಡಲ ನಗರಿ ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ; 2ನೇ ಆಡಳಿತ ಭಾಷೆಯಾಗುತ್ತ ತುಳು?

ಕಡಲ ನಗರಿ ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ

Cabinet meeting in Mangaluru: ಕರಾವಳಿಯ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಲು ಸಿದ್ಧತೆ ಜೋರಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶುಕ್ರವಾರ (ಸೆಪ್ಟೆಂಬರ್‌ 18) ಈ ಐತಿಹಾಸಿಕ ಸಭೆ ಆಯೋಜಿಸಲಾಗಿದೆ.

ಸೆ.18ರ ಸಚಿವ ಸಂಪುಟ ಸಭೆಯಲ್ಲಿ ತುಳು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ: ಶಾಸಕ ಅಶೋಕ್ ಕುಮಾರ್ ರೈ

ಸಚಿವ ಸಂಪುಟ ಸಭೆಯಲ್ಲಿ ತುಳು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ

Tulu as additional official language: ಮಂಗಳೂರಿನಲ್ಲಿ ಸೆಪ್ಟೆಂ ರ್ 18 ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕೆಲವೊಂದು ಮಹತ್ವದ ಘೋಷಣೆಗಳನ್ನು ರಾಜ್ಯ ಸರ್ಕಾರ ಮಾಡು ಸಾಧ್ಯತೆ ಇದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವುದು, ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಜಿಲ್ಲೆಯ ಜನರದ್ದಾಗಿದೆ.

MLA Ashok Kumar Rai Interview: ಪಕ್ಷ ರಾಜಕೀಯ ಮೀರಿ ಪುತ್ತೂರಿನ ಅಭಿವೃದ್ದಿಗೆ ಪಣ

ಪಕ್ಷ ರಾಜಕೀಯ ಮೀರಿ ಪುತ್ತೂರಿನ ಅಭಿವೃದ್ದಿಗೆ ಪಣ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದ ಅಭಿವೃದ್ಧಿ, ಕುಡಿಯುವ ನೀರು, ವೈದ್ಯಕೀಯ ಕಾಲೇಜು, ಪ್ರವಾಸೋದ್ಯಮ, ಕೈಗಾರಿಕೆ, ಉದ್ಯೋಗ, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿಶ್ವವಾಣಿ ಜತೆ ಹಂಚಿಕೊಂಡಿದ್ದಾರೆ.

ಮಡಿಯಾಲದಲ್ಲಿ ಶೀಘ್ರ ಎಐ ಅಧ್ಯಯನ ಕೇಂದ್ರ: ಸದ್ಗುರು ಶ್ರೀ ಮಧುಸೂದನ ಸಾಯಿ

ಮಡಿಯಾಲದಲ್ಲಿ ಶೀಘ್ರ ಎಐ ಅಧ್ಯಯನ ಕೇಂದ್ರ: ಸದ್ಗುರು ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್‌ಗಳೂ ಲಭ್ಯವಿವೆ. ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದು "ಒನ್‌ ವರ್ಲ್ಡ್‌ ಒನ್ ಫ್ಯಾಮಿಲಿ ಮಿಷನ್" ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.

105 ವರ್ಷದ ತಾಯಿಯನ್ನು ನೋಡಲು ಬೆಟ್ಟ, ಗುಡ್ಡ ದಾಟಿ ಬಂದ 85 ವರ್ಷದ ಮಗಳು; ಎರಡು ದಶಕಗಳ ಬಳಿಕ ಕರುಳ ಬಳ್ಳಿಯ ಮಿಲನ

ಎರಡು ದಶಕಗಳ ಬಳಿಕ ಕರುಳ ಬಳ್ಳಿಯ ಮಿಲನ

ಕರುಳು ಬಳ್ಳಿಯ ಸಂಬಂಧವೇ ಹಾಗೆ ಎಷ್ಟೇ ದೂರವಿದ್ದರೂ ಮನಸ್ಸು ಅವರನ್ನು ನೋಡಲು ಹಾತೊರೆಯುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ವೈರಲ್‌ ಆಗಿದ್ದು, 105 ವರ್ಷದ ತಾಯಿಯನ್ನು ನೋಡಲು 85 ವರ್ಷದ ಮಗಳು ಬೆಟ್ಟ ಗುಡ್ಡವನ್ನು ದಾಟಿ, ದುರ್ಗಮ ಹಾದಿಯಲ್ಲಿ ಸಂಚರಿಸಿ ಬರೋಬ್ಬರಿ 20 ವರ್ಷಗಳ ಬಳಿಕ ತವರು ಮನೆ ಸೇರಿದ್ದಾರೆ.

ಭಾರತೀಯ ರೆಡ್ ಕ್ರಾಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಮುರಲೀ  ಮೋಹನ್ ಚೂಂತಾರು ನೇಮಕ

ಡಾ.ಚೂಂತಾರು ರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ನಾಮನಿರ್ದೇಶನ

ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿಯ ರಾಷ್ಪ್ರೀಯ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಡಾ ಮುರಲೀ ಮೋಹನ್ ಚೂಂತಾರು ನೇಮಕಗೊಂಡಿದ್ದಾರೆ. ಗೃಹರಕ್ಷಕ ದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಂಡೆಂಟ್ ಆಗಿ ಮತ್ತು ರೆಡ್ ಕ್ರಾಸ್ ಸಂಸ್ಥೆಯ ವಿವಿಧ ಸ್ತರಗಳಲ್ಲಿ ಅವರು ನೀಡಿದ ಸುದೀರ್ಘ ಹಾಗೂ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬಗೆ SIR ನೋಟೀಸ್ ಕೊಟ್ಟ ಚುನಾವಣಾ ಆಯೋಗ!

ಹರೇಕಳ ಹಾಜಬ್ಬಗೆ SIR ನೋಟೀಸ್ ಕೊಟ್ಟ ಚುನಾವಣಾ ಆಯೋಗ!

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವೇಳೆ ಹೆಸರು ವ್ಯತ್ಯಾಸವಾಗಿದೆ ಎಂಬ ಕಾರಣಕ್ಕೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ನೋಟಿಸ್ ಜಾರಿಯಾಗಿದ್ದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಚುನಾವಣಾ ಮತ್ತು ಕಂದಾಯ ಅಧಿಕಾರಿಗಳು ನೇರವಾಗಿ ಅವರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಮೊಟ್ಟೆಯಲ್ಲಿ ಹುಳು ಪತ್ತೆ: ಬ್ಲಿಂಕಿಟ್ ವಿರುದ್ಧ ದೂರು; ಮಂಗಳೂರಿನ ಆಹಾರ ಮಳಿಗೆ ಮೇಲೆ ಅಧಿಕಾರಿಗಳ ದಾಳಿ

ಬ್ಲಿಂಕಿಟ್ ನಲ್ಲಿ ಆರ್ಡರ್ ಮಾಡಿದ್ದ ಮೊಟ್ಟೆಯಲ್ಲಿ ಹುಳು ಪತ್ತೆ

ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ನಲ್ಲಿ ಆರ್ಡರ್ ಮಾಡಿದ್ದ ಮೊಟ್ಟೆಯಲ್ಲಿ ಹುಳು ಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗ್ರಾಹಕರು ದೂರು ನೀಡಿದ ಬಳಿಕ ತನಿಖೆ ಹಿನ್ನೆಲೆಯಲ್ಲಿ ಆಹಾರ ಮಳಿಗೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮಳಿಗೆಯಲ್ಲಿ ಹಾನಿಗೊಳಗಾಗಿರುವ ಮೊಟ್ಟೆಗಳು ಕಂಡು ಬಂದಿದ್ದರಿಂದ ಶೇಖರಣಾ ಕೊಠಡಿಯನ್ನು ಸೀಲ್ ಮಾಡಲಾಗಿದೆ.

ಕರಾವಳಿಯ ಗಂಡುಕಲೆ ಕಂಡು ಮಂತ್ರಮುಗ್ಧರಾದ ಕಲಬುರಗಿ ಜನ: ‘ಕಾಂತಾರ ಮಣಿ’ಯಲ್ಲಿ ದೈವ–ಮಾನವ ಸಂಬಂಧದ ರೋಚಕ ಅನಾವರಣ

ಕರಾವಳಿಯ ಗಂಡುಕಲೆ ಕಂಡು ಮಂತ್ರಮುಗ್ಧರಾದ ಕಲಬುರಗಿ ಜನ

ದಕ್ಷಿಣ ಕನ್ನಡ ಸಂಘ, ಹೋಟೆಲ್, ಬೇಕರಿ ಹಾಗೂ ವಸತಿಗೃಹ ಮಾಲೀಕರ ಸಂಘದ ಸಹಯೋಗಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಶಿವಾನುಭವ ಮಂಟಪದಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಪ್ರದರ್ಶನದಲ್ಲಿ ಕರಾವಳಿಯ ಗಂಡುಕಲೆಯ ವೈಭವವನ್ನು ಕಲಬುರಗಿ ಜನ ಕಣ್ತುಂಬಿಕೊಂಡರು.

ಧರ್ಮಸ್ಥಳದಲ್ಲಿ 812 ಮಂದಿಯಿಂದ ಏಕಕಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳ ಅನುಷ್ಠಾನ

ಧರ್ಮಸ್ಥಳದಲ್ಲಿ ಏಕಕಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳ ಅನುಷ್ಠಾನ

ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಯುರ್ವೇದದ ಸಾಂಪ್ರದಾಯಿಕ ದಿನಚರ್ಯ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಪ್ರತಿ ಭಾಗವಹಿಸುವವರಿಗೂ ಸಂಖ್ಯೆಯುಳ್ಳ ಕುರ್ಚಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಪ್ರತ್ಯೇಕ ಕಿಟ್‌ಗಳನ್ನು ಒದಗಿಸಲಾಗಿತ್ತು. ರಶ್ಮಿ ಇನ್‌ಸ್ಟಿಟ್ಯೂಟ್‌ ನ 100 ವಿದ್ಯಾರ್ಥಿ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು

ದಿ ಸೊಲಿಟೇರ್ ಫೆಸ್ಟಿವಲ್ ಆಫ್ ಇಂಡಿಯಾ (TSFI) 2026 ಅಂತಿಮ ವಾರಕ್ಕೆ ಪ್ರವೇಶ: Divine Solitairesನಿಂದ ವಿಶೇಷ ಹಬ್ಬದ ಕೊಡುಗೆಗಳು

Divine Solitairesನಿಂದ ವಿಶೇಷ ಹಬ್ಬದ ಕೊಡುಗೆಗಳು

TSFI 2026ರ ಭಾಗವಾಗಿ, Divine Solitaires ಗ್ರಾಹಕರಿಗೆ ಮತ್ತಷ್ಟು ವಿಶೇಷ ಹಬ್ಬದ ಅನುಭವ ನೀಡಲು ಹೊಸ ಹಾಗೂ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ. ಖರೀದಿ ಮಾಡುವ ಗ್ರಾಹಕರಿಗೆ ಖಚಿತ ಉಡುಗೊರೆಗಳ ಅಪ್‌ಗ್ರೇಡ್ ದೊರೆಯಲಿದೆ. ಇದರ ಜೊತೆಗೆ, ತಮ್ಮ ಆಭರಣಗಳನ್ನು ವೈಯಕ್ತೀಕರಿಸಲು ಬಯಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಮೊದಲಕ್ಷರಗಳನ್ನು ಕೆತ್ತಿಸಿಕೊಳ್ಳ ಬಹುದು

Bantwal civic worker: ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ; ಬಂಟ್ವಾಳದ ಶ್ರಮಿಕನ ವಿಡಿಯೊ ವೈರಲ್‌!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ!

ಬಂಟ್ವಾಳದಲ್ಲಿ 50 ರೂ. ದಿನಗೂಲಿಯಿಂದ ಆರಂಭವಾದ ಪೌರ ಕಾರ್ಮಿಕರೊಬ್ಬರ ಬದುಕು ಈಗ ಐಷರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ. ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ಅವರು ರಸ್ತೆ ಬದಿ ಕಸ ಗುಡಿಸುವ ಜತೆಗೆ ವಿವಿಧ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಇವರ ಕಥೆ ಹಲವರಿಗೆ ಸ್ಫೂರ್ತಿಯಾಗಿದೆ.

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ; ಸಂಸದ ಕ್ಯಾ. ಬ್ರಿಜೇಶ್‌ ಚೌಟ ಸತತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ

ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

Vande Mataram Row: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು; ಎಫ್‌ಐಆರ್‌ ದಾಖಲಿಸದಿದ್ದರೆ ಹೈಕೋರ್ಟ್‌ ಮೊರೆ ಹೋಗುವುದಾಗಿ ಬಿಜೆಪಿ ಮುಖಂಡ ವಿಕಾಸ್ ಎಚ್ಚರಿಕೆ

ʼವಂದೇ ಮಾತರಂʼ ವಿವಾದ: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು

BJP Leader Vikas Puttur: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ರಾಷ್ಟ್ರೀಯ ಗೀತೆ ʼವಂದೇ ಮಾತರಂʼಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಕಾಸ್‌ ಪುತ್ತೂರು ದೂರು ದಾಖಲಿಸಿದ್ದಾರೆ.

ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್‌ ಬಂಧನ; 12 ದಿನ ಇಡಿ ಕಸ್ಟಡಿಗೆ ನೀಡಿದ ಕೋರ್ಟ್‌

ಶಿವಾನಂದ ನೀಲಣ್ಣನವರ್‌ ಬಂಧನ; 12 ದಿನ ಇಡಿ ಕಸ್ಟಡಿಗೆ ನೀಡಿದ ಕೋರ್ಟ್‌

Shivam Associates Scam: ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್‌ಗಢ ರಾಜ್ಯಗಳಾದ್ಯಂತ ಪೋಂಜಿ ಶೈಲಿಯ ಸ್ಕೀಮ್‌ಗಳ ಮೂಲಕ ಸಾರ್ವಜನಿಕರಿಂದ ಅಕ್ರಮವಾಗಿ ಹೂಡಿಕೆ ಸಂಗ್ರಹಿಸಿರುವುದು ಪತ್ತೆಯಾಗಿದೆ. ಹೀಗಾಗಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

Dakshina Kannada Rain: ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ

ನಾಳೆ ದ.ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Karnataka Weather: ಜುಲೈ 8ರಂದು ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ನದಿ, ಹೊಳೆ, ಕೆರೆ ಹಾಗೂ ಜಲಾಶಯಗಳ ಬಳಿ ಸಾರ್ವಜನಿಕರು ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮನವಿ ಮಾಡಿದೆ. ತಗ್ಗು ಪ್ರದೇಶದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ವಾಲಿವಾಲ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು; ಸುರತ್ಕಲ್‌ನಲ್ಲಿ ಭೀಕರ ಘಟನೆ: ವಿಡಿಯೊ ವೈರಲ್‌

ವಾಲಿವಾಲ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು

Heart Attack: ಇತ್ತೀಚೆಗೆ ಯುವ ಜನತೆ ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದ್ದು, ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ವಾಲಿಬಾಲ್‌ ಆಡುತ್ತಿದ್ದ ಲಿಖಿತ್‌ ಆಮೀನ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಉಮ್ಮರ್ ಫಾರೂಕ್  ಬಂಧಿಸಿದ NIA

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ NIA

Praveen Nettaru Murder: BJP ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಪ್ರಚೋದನಕಾರಿ ದ್ವೇಷ ಭಾಷಣ; ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಜೈಲು ಶಿಕ್ಷೆ

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಜೈಲು ಶಿಕ್ಷೆ!

Riyaz Parangipete: 11 ವರ್ಷಗಳ ಹಳೆಯ ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.

ʼʼಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿʼʼ: ವಿದ್ಯಾರ್ಥಿಗಳಿಗೆ ಸಹ ಪ್ರಧ್ಯಾಪಕಿ ಕಾವ್ಯ ಕರೆ

ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಕಾವ್ಯ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ವತಿಯಿಂದ ಸಮ್ಯಗ್ದರ್ಶನ ಸಭಾಭವನದಲ್ಲಿ ಬುಧವಾರ 'ಕಾಗ್ನಿಟೋ' ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮ ಜರುಗಿತು. ಎಸ್‌.ಡಿ.ಎಂ. ನ್ಯಾಚುರೋಪತಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹ ಪ್ರಧ್ಯಾಪಕಿ ಕಾವ್ಯ ಎಂ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಸ್ತೆ ಅಪಘಾತದಂತೆ ಬಿಂಬಿಸಿ ಕೊಲೆ: 2014ರ ಮಂಗಳೂರು ಪ್ರಕರಣದಲ್ಲಿ ನಾಲ್ವರಿಗೆ ಜೀವಾವಧಿ ಶಿಕ್ಷೆ

2014ರ ಮಂಗಳೂರು ಕೊಲೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಸುಮಾರು ಹತ್ತು ವರ್ಷಕ್ಕಿಂತಲೂ ಹಿಂದೆ ಮಂಗಳೂರಿನಲ್ಲಿ ನಡೆದಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ. 2014ರ ಮೇ 15ರಂದು ರಸ್ತೆ ಅಪಘಾತದಲ್ಲಿ ಗಂಗಾಧರ ಪಾಂಗಳ ಎಂಬವರು ಸಾವನ್ನಪ್ಪಿದ್ದು, ತನಿಖೆ ವೇಳೆ ಇದು ವೈಯಕ್ತಿಕ ದ್ವೇಷದಿಂದ ಪ್ರೇರಿತವಾದ ಯೋಜಿತ ಕೊಲೆ ಎಂಬುದು ಬಹಿರಂಗಗೊಂಡಿತ್ತು.

Loading...