ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahesh Shetty Timarodi: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಏರ್‌ಗನ್ ಪತ್ತೆ- ತನಿಖೆ ಚುರುಕುಗೊಳಿಸಿದ ಎಸ್‌ಐಟಿ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸದ ಮೇಲೆ ವಿಶೇಷ ತನಿಖಾ ತಂಡ ಈಗಾಗಲೇ ಒಂದು ಬಾರಿ ದಾಳಿ ನಡೆಸಿರುವ ಅಧಿಕಾರಿಗಳು ಇಂದು ಮತ್ತೇ ಮಹಜರಿಗೆ ತೆರಳಿದ್ದು, ಪರಿಶೀಲನೆ ನಡೆಸುವ ವೇಳೆ ಏರ್ ಗನ್ ಪತ್ತೆಯಾಗಿದೆ ಎನ್ನಲಾಗಿದೆ. ಸಾಕ್ಷಿಯಾಗಿ ಬಂದು, ಈಗ ಆರೋಪಿಯಾಗಿರುವ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ ಹೇಳಿಕೆಯಂತೆ ಪೊಲೀಸರು ಕೋರ್ಟ್‌ ಸರ್ಚ್‌ ವಾರಂಟ್‌ ಪಡೆದು ತಿಮರೋಡಿ ನಿವಾಸಕ್ಕೆ ತೆರಳಿದ್ದಾರೆ. ಈ ಹಿಂದೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್‌ ಸೇರಿ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ತಿಮರೋಡಿ ಮನೆಯಲ್ಲಿ ಪತ್ತೆಯಾಯ್ತು ಏರ್‌ಗನ್!

ಮಹೇಶ್ ಶೆಟ್ಟಿ ತಿಮರೋಡಿ

Profile Sushmitha Jain Aug 28, 2025 2:06 PM

ದಕ್ಷಿಣ ಕನ್ನಡ: ಧರ್ಮಸ್ಥಳದ (Dharmasthala) ಬುರುಡೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (Special Investigation Team) ಮಹೇಶ್ ಶೆಟ್ಟಿ ತಿಮರೋಡಿಯ (Mahesh Shetty Timarodi) ಮನೆಯ ಮೇಲೆ ದಾಳಿಯನ್ನು ಮುಂದುವರೆಸಿದೆ. ಆಗಸ್ಟ್ 27 ರಂದು ನಡೆದ ದಾಳಿಯಲ್ಲಿ ಮೂರು ತಲವಾರುಗಳು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿದ್ದವು. ಗುರುವಾರ ಒಂದು ಏರ್‌ಗನ್ (Airgun) ಕೂಡ ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬುಧವಾರದ ದಾಳಿಯಲ್ಲಿ ಚಿನ್ನಯ್ಯನ ಮೊಬೈಲ್, ಮಹೇಶ್ ಶೆಟ್ಟಿಯ ಮೊಬೈಲ್, ಆತನ ಹೆಂಡತಿ ಮತ್ತು ಮಕ್ಕಳ ಮೊಬೈಲ್‌ಗಳು, ಸೋದರನ ಮೊಬೈಲ್, ಸಿಸಿಟಿವಿ ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಮತ್ತು ಮಹತ್ವದ ದಾಖಲೆಗಳನ್ನು ಎಸ್‌ಐಟಿ ವಶಪಡಿಸಿಕೊಂಡಿದೆ. ಈಗ ತನಿಖೆ ತೀವ್ರಗೊಂಡಿದ್ದು, ಮುಸುಕುಧಾರಿ ದೂರುದಾರ (ಚಿನ್ನಯ್ಯ) ಮತ್ತು ಸುಜಾತಾ ಭಟ್‌ ಅವರ ಹೇಳಿಕೆಗಳ ಆಧಾರದ ಮೇಲೆ ಪ್ರಭಾವಿ ವ್ಯಕ್ತಿಗಳ ಮೇಲೆ ನಿಗಾ ಹೆಚ್ಚಾಗಿದೆ.

ಸುಜಾತಾ ಭಟ್, “ನನಗೆ ಮಗಳೇ ಇಲ್ಲ, ಗ್ಯಾಂಗ್‌ನ ಆದೇಶದಂತೆ ಕಥೆ ರೂಪಿಸಿದೆ” ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಚಿನ್ನಯ್ಯ ಕೂಡ ಬೇರೆ ಜಾಗದಿಂದ ಬುರುಡೆ ತಂದಿದ್ದಾಗಿ ತಿಳಿಸಿದ್ದಾನೆ. ಇಬ್ಬರ ಹಿಂದೆ ಹಲವರ ಕೈವಾಡ ಇರುವುದು ಎಸ್‌ಐಟಿ ಗೆ ಸ್ಪಷ್ಟವಾಗಿದ್ದು, ಪಿತೂರಿ ಮಾಡಿದವರನ್ನು ಬಯಲಿಗೆಳೆಯಲು ತನಿಖೆ ಚುರುಕುಗೊಳಿಸಿದೆ.

ಈ ಸುದ್ದಿಯನ್ನು ಓದಿ: Dharmasthala Case: ಚಿನ್ನಯ್ಯನನ್ನು ಎ1 ಆರೋಪಿಯಾಗಿಸಿ ಹೊಸ ದೂರುಗಳು ದಾಖಲು, ಸಂಚುಕೋರರಿಗೂ ಸಂಕಷ್ಟ

ಮಾಸ್ಕ್ ಮ್ಯಾನ್ ಚಿನ್ನಯ್ಯ ನೀಡಿರುವ ಮಾಹಿತಿಯ ಆಧಾರದಲ್ಲಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಎಸ್​ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹೋದರ ಮೋಹನ್ ಅವರ ಮನೆಯಲ್ಲಿ ಮಹಜರು ಮಾಡಿದ್ದರು. ಪರಿಶೀಲನೆ ನಡೆಸುತ್ತಿದ್ದ ವೇಳೆ ಮೂರು ತಲವಾರು ಪತ್ತೆ ಆಗಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಜೊತೆಗೆ ಮಹೇಶ್ ತಿಮರೋಡಿ ಪತ್ನಿ, ಮಗ ಹಾಗೂ ಅವರ ಮಗಳ ಮೊಬೈಲ್​ಗಳನ್ನು ತೆಗೆದುಕೊಂಡಿದ್ದರು. ಇನ್ನು ಧರ್ಮಸ್ಥಳದ ವಿರುದ್ಧ ಸಂಚು ನಡೆಸಲು ಸಂಗ್ರಹಿಸಿದ್ದ ದಾಖಲೆ ಪತ್ರಗಳನ್ನು ಕೂಡ ವಶಕ್ಕೆ ಎಸ್​ಐಟಿ ತೆಗೆದುಕೊಂಡಿತ್ತು ಎನ್ನಲಾಗಿದೆ.

ಅಲ್ಲದೇ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಪಕ್ಕದಲ್ಲೇ ಇರುವ ಅವರ ಸಹೋದರ ಮೋಹನ್ ಕುಮಾರ್ ಮನೆಯಲ್ಲಿ ಚಿನ್ನಯ್ಯನ ವಾಸ್ತವ್ಯಕ್ಕೆ ಕೊಠಡಿ ನೀಡಲಾಗಿತ್ತು ಅನ್ನೋ ಮಾಹಿತಿಯನ್ನು ಚಿನ್ನಯ್ಯ ಬಹಿರಂಗಪಡಿಸಿದ್ದ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ. ತಿಮರೋಡಿ ಅವರ ನಿವೇಶನ ಸೇರಿದಂತೆ ಎಲ್ಲಾ ಕಡೆ ದಾಳಿ ನಡೆಸಿದ್ದಾರೆ.