Ganesh Chathurthi 2025: ಬಾಲಿವುಡ್ ತಾರೆಯರ ಗಣೇಶ ಹಬ್ಬದ ಸಂಭ್ರಮ ಹೇಗಿತ್ತು? ಇಲ್ಲಿದೆ ಫೋಟೊ
ಆಗಸ್ಟ್ 27ರಂದು ಎಲ್ಲೆಡೆ ಅದ್ಧೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಬಾಲಿವುಡ್ ಸೆಲೆಬ್ರಿಟಿಗಳು ತಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಅದ್ಧೂರಿಯಾಗಿಯೇ ಗಣೇಶ ಹಬ್ಬವನ್ನು ಕೊಂಡಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಬಾಲಿವುಡ್ ತಾರೆಯರು ತಮ್ಮ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Ganesh Chaturthi For Bollywood Actors


ಅನನ್ಯಾ ಪಾಂಡೆ ತಮ್ಮ ಕುಟುಂಬದ ಜತೆಗೆ ಗಣೇಶ ಪೂಜೆಯ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಬಹಳ ಸಿಂಪಲ್ ಆಗಿ ನಟಿ ಹಬ್ಬಕ್ಕೆ ರೆಡಿಯಾಗಿದ್ದು "ನನ್ನ ಅಚ್ಚುಮೆಚ್ಚಿನ ಬಪ್ಪಾ, ಮನೆಗೆ ಸ್ವಾಗತ!" ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕರೀನಾ ಕಪೂರ್ ಖಾನ್ ತಮ್ಮ ಕಿರಿಯ ಮಗ ಜೇಹ್ ಅವರೊಂದಿಗೆ ಇರುವ ಹೃದಯಸ್ಪರ್ಶಿ ಕ್ಷಣವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಗೋವಿಂದ ಪತ್ನಿ ಸುನೀತಾ ಹಾಗೂ ಪುತ್ರ ಯಶವರ್ಧನ್ ಜತೆಗೂಡಿ ಬಪ್ಪನಿಗೆ ಆರಾಧನೆ ಸಲ್ಲಿಸಿದ್ದು, ಇತ್ತೀಚಿನ ವಿಚ್ಛೇದನದ ವದಂತಿಗಳ ನಡುವೆಯೂ ಕುಟುಂಬ ಸಮೇತರಾಗಿ ಹಬ್ಬವನ್ನು ಆಚರಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಸೋಹಾ ಅಲಿ ಖಾನ್ ತಮ್ಮ ಪತಿ ಹಾಗೂ ಪುತ್ರಿಯೊಂದಿಗೆ ಗಣೇಶನಿಗೆ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸೋನು ಸೂದ್ ತಮ್ಮ ಕುಟುಂಬದ ಜತೆ ಗಣಪತಿ ಹಬ್ಬ ಆಚರಣೆ ಮಾಡಿ ಗಣಪತಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ತುಷಾರ್ ಕಪೂರ್ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಗಣೇಶ ಚತುರ್ಥಿಯನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ.

ಶಾರ್ವರಿ ತಮ್ಮ ಪೂರ್ವಜರ ಮನೆಯಲ್ಲಿ ಕುಟುಂಬದೊಂದಿಗೆ ಹಬ್ಬವನ್ನು ಸಂಭ್ರಮಿಸಿದ್ದಾರೆ.