Dharmasthala Case: ನೂರಾರು ಶವಗಳನ್ನು ಹೂತಿದ್ದೆ ಎಂದಿದ್ದ ಬುರುಡೆ ಮನುಷ್ಯನ ಬಂಧನ, ಎಸ್‌ಐಟಿ ಪ್ರಶ್ನೆಗಳಿಗೆ ವಿಲವಿಲ
ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿದ್ದೇನೆ ಎಂದು ಶರಣಾಗಿ ರಾಜ್ಯ ಪೊಲೀಸರನ್ನು ಗೊಂದಲಕ್ಕೀಡುಮಾಡಿದ್ದ ಅನಾಮಿಕ ದೂರುದಾರನನ್ನು (Anonymous complainant) ವಿಶೇಷ ತನಿಖಾ ದಳ (Special Investigation Team) ಬಂಧಿಸಿದೆ. ದೂರುದಾರನ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಆತ ಉದ್ದೇಶಪೂರ್ವಕವಾಗಿ ಪೊಲೀಸರನ್ನು ದಿಕ್ಕು ತಪ್ಪಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿದ್ದೇನೆ ಎಂದು ಶರಣಾಗಿ ರಾಜ್ಯ ಪೊಲೀಸರನ್ನು ಗೊಂದಲಕ್ಕೀಡುಮಾಡಿದ್ದ ಅನಾಮಿಕ ದೂರುದಾರನನ್ನು (Anonymous complainant) ವಿಶೇಷ ತನಿಖಾ ದಳ (Special Investigation Team) ಬಂಧಿಸಿದೆ. ದೂರುದಾರನ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಆತ ಉದ್ದೇಶಪೂರ್ವಕವಾಗಿ ಪೊಲೀಸರನ್ನು ದಿಕ್ಕುತಪ್ಪಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸಂಚಲನ ಮೂಡಿಸಿದ್ದ ದೂರುದಾರನ ಆರೋಪ
ದೂರುದಾರನು ಪ್ರಭಾವಿ ವ್ಯಕ್ತಿಯ ಆದೇಶದ ಮೇರೆಗೆ ಧರ್ಮಸ್ಥಳದಲ್ಲಿ ನೂರಾರು ಹೆಣ್ಣುಮಕ್ಕಳ ಶವಗಳನ್ನು ಹೂತಿದ್ದೇನೆ ಎಂದು ಠಾಣೆಗೆ ಶರಣಾಗಿ, ತಲೆಬುರುಡೆಯೊಂದನ್ನು ಸಾಕ್ಷಿಯಾಗಿ ಒದಗಿಸಿದ್ದ. ಈ ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಸರ್ಕಾರವು ತಕ್ಷಣ ಎಸ್‌ಐಟಿ ರಚಿಸಿ, ಮೊಹಾಂತಿ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಿತು. ದೂರುದಾರನು 17 ಸ್ಥಳಗಳಲ್ಲಿ ಶವಗಳನ್ನು ಹೂತಿರುವುದಾಗಿ ತಿಳಿಸಿದ್ದರಿಂದ, ಎಸ್‌ಐಟಿ ಜೆಸಿಬಿ ಬಳಸಿ ಉತ್ಖನನ ನಡೆಸಿತು. ಆದರೆ, ಕೇವಲ ಒಂದು ಗುಂಡಿಯಲ್ಲಿ ಕೆಲವು ಮೂಳೆಗಳು ಮಾತ್ರ ದೊರೆತಿದ್ದು, ಅದು ಕೂಡ ಪುರುಷನದ್ದು ಎನ್ನಲಾಗಿದೆ. ಕಾರ್ಯಾಚರಣೆ ವೇಳೆ ಸಿಕ್ಕ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಎಸ್ಐಟಿ, ಅನಾಮಿಕನನ್ನು ವಶಕ್ಕೆ ಪಡೆದಿದೆ.
ಶುಕ್ರವಾರ ರಾತ್ರಿಯಿಂದ ಅನಾಮಿಕನ ವಿಚಾರಣೆ
ಎಸ್‌ಐಟಿ ದೂರುದಾರನ ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಣೆಗೊಳಪಡಿಸಿತು. ಆತನ ಪತ್ನಿ ಮತ್ತು ಸಹೋದರರು, ದೂರುದಾರನು ಹಣಕ್ಕಾಗಿ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಪಿತೂರಿ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವ 5 ಗಂಟೆಯವರೆಗೆ ತೀವ್ರ ವಿಚಾರಣೆಯಲ್ಲಿ, ಆತ ಹಣಕ್ಕಾಗಿ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನು ಓದಿ: Dharmasthala Case: ಅನನ್ಯ ಭಟ್ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್
ಇಂದೇ ನಾಯಾಲಯಕ್ಕೆ ಹಾಜರು
ಇಂದು ಬೆಳಿಗ್ಗೆ 11 ಗಂಟೆಗೆ ದೂರುದಾರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಂಗ ಬಂಧನ ಕೋರಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಈ ಪ್ರಕರಣವು ಧರ್ಮಸ್ಥಳದ ಧಾರ್ಮಿಕ ಮಹತ್ವವನ್ನು ದುರ್ಬಳಕೆ ಮಾಡಿರುವ ಆರೋಪದಿಂದ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಎಸ್‌ಐಟಿ ತನಿಖೆಯ ಮುಂದಿನ ಹಂತದಲ್ಲಿ ಈ ಆರೋಪಿಯ ಹಿನ್ನೆಲೆ ಮತ್ತು ಉದ್ದೇಶಗಳ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.