Haveri News: ಹಾವೇರಿಯಲ್ಲಿ ಗಾಂಧಿ ಪುತ್ಥಳಿ ಧ್ವಂಸ ಮಾಡಿದ ಕಿಡಿಗೇಡಿಗಳು; ಕ್ರಮಕ್ಕೆ ಆಗ್ರಹ
Mahatma Gandhi Bust destroyed: ಹಾವೇರಿ ನಗರದ ಹೃದಯಭಾಗದಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿದ್ದ ಗಾಂಧೀಜಿ ಅವರ ಪುತ್ಥಳಿಯನ್ನು ಧ್ವಂಸಗೊಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಗಾಂಧೀಜಿ ಪುತ್ಥಳಿ ಧ್ವಂಸ ಮಾಡಿರುವುದು. -
ಹಾವೇರಿ: ನಗರದ ಹೃದಯಭಾಗದಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಾಂಧೀಜಿ ಅವರ ಪುತ್ಥಳಿಯನ್ನು (Mahatma Gandhi Bust) ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಬಗ್ಗೆ ಶಹರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಭಾನುವಾರ ತಡರಾತ್ರಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಪುತ್ಥಳಿಯ ಮುಖಭಾಗ ಹಾನಿಯಾಗಿದೆ. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಬೆಳಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸುವುದಾಗಿ ತಿಳಿಸಿದ್ದಾರೆ.
ಕೆರೆಯಲ್ಲಿ ಮುಳುಗಿ ಮಾವ-ಅಳಿಯ ಸಾವು
ಹಾಸನ: ಕೆರೆಯಲ್ಲಿ ಮುಳುಗಿ ಮಾವ-ಅಳಿಯ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ್ (45), ಪ್ರತೀಕ್ (12) ಮೃತ ದುರ್ದೈವಿಗಳು. ಪ್ರತೀಕ್ ಮೂಲತಃ ದುದ್ದ ಹೋಬಳಿ ಸೋಮನಹಳ್ಳಿ ಗ್ರಾಮದವನು. ಬೇಸಿಗೆ ರಜೆ ಹಿನ್ನಲೆ ಮಾವ ಪ್ರಭಾಕರ್ ಮನೆಗೆ ಬಂದಿದ್ದ. ಮಾವ-ಅಳಿಯ ಇಬ್ಬರೂ ಕೆರೆಯ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾಲು ಜಾರಿ ಪ್ರತೀಕ್ ಕೆರೆಗೆ ಬಿದ್ದಿದ್ದಾನೆ. ಪ್ರತೀಕ್‌ನನ್ನು ರಕ್ಷಿಸಿಲು ಮಾವ ಪ್ರಭಾಕರ್ ಕೂಡ ಕೆರೆಗೆ ಇಳಿದಿದ್ದಾರೆ. ಈಜು ಬಾರದ ಕಾರಣ ಇಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Bidar news: ಬೀದರ್‌ನಲ್ಲಿ ಬಿಸಿಲಿನ ಝಳಕ್ಕೆ ಯುವಕ ಬಲಿ
ಸದ್ಯ ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.