ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivaraj Tangadagi: ಭಾರತೀಯ ಸೈನಿಕರ ಶಕ್ತಿ ಎದುರು ಪಾಕ್ ಲೆಕ್ಕಕ್ಕಿಲ್ಲ: ಶಿವರಾಜ್ ತಂಗಡಗಿ

Shivaraj Tangadagi: ಭಾರತೀಯ ಸೈನಿಕರ ಶಕ್ತಿಯ ಎದುರಿಗೆ ಪಾಕಿಸ್ತಾನ ಲೆಕ್ಕಕ್ಕಿಲ್ಲ. ಭಾರತ ಗಟ್ಟಿಯಾಗಿ ನಾಲ್ಕು ದಿನ ಯುದ್ಧ ಮಾಡಿದರೆ ಪಾಕಿಸ್ತಾನ ವಿಶ್ವದ ಭೂಪಟದಲ್ಲೇ ಇರಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಭಾರತೀಯ ಸೈನಿಕರ ಶಕ್ತಿ ಎದುರು ಪಾಕ್ ಲೆಕ್ಕಕ್ಕಿಲ್ಲ: ಶಿವರಾಜ್ ತಂಗಡಗಿ

Profile Siddalinga Swamy May 10, 2025 8:47 PM

ಕಲಬುರಗಿ: ಭಾರತೀಯ ಸೈನಿಕರ ಶಕ್ತಿಯ ಎದುರಿಗೆ ಪಾಕಿಸ್ತಾನ ಲೆಕ್ಕಕ್ಕಿಲ್ಲ. ಭಾರತ ಗಟ್ಟಿಯಾಗಿ ನಾಲ್ಕು ದಿನ ಯುದ್ಧ ಮಾಡಿದರೆ ಪಾಕಿಸ್ತಾನ ವಿಶ್ವದ ಭೂಪಟದಲ್ಲೇ ಇರಲ್ಲ ಎಂದು ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು. ಶನಿವಾರ ಇಲ್ಲಿನ ಕೆಕೆಆರ್‌ಡಿಬಿಯ ಸಭೆಗೆ ಹಾಜರಾಗಲು ಆಗಮಿಸಿದ್ದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಸೈನಿಕರ ಶಕ್ತಿ ಅಪಾರವಾಗಿದೆ. ಹಿಂದಿನಿಂದಲೂ ನಮ್ಮ ಸೈನಿಕರ ಶಕ್ತಿ ವಿಶ್ವಕ್ಕೆ ತಿಳಿದಿದೆ ಎಂದು ತಿಳಿಸಿದರು.

ಜಾತಿ ಗಣತಿ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಸದ್ಯ ಒಳಮೀಸಲಾತಿ ಸಮೀಕ್ಷೆ ನಡೆಯುತ್ತಿದೆ. ಮೇ 5ರಿಂದ ಗಣತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದೆ. ಗಣತಿ ಮುಗಿದ ಮೇಲೆ ನ್ಯಾ. ನಾಗಮೋಹನ್ ದಾಸ್ ವರದಿ ಪರಿಶೀಲಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ ಅವರು, ಸಮೀಕ್ಷೆಯಲ್ಲಿ ಅನೇಕ ಅಡೆತಡೆಗಳು ಕಂಡು ಬಂದಿವೆ. ಸಮಯ ವಿಸ್ತರಣೆ ಮಾಡುವ ಬಗ್ಗೆ ಸರ್ಕಾರದ ಹಂತದಲ್ಲಿ ಗಮನಕ್ಕೆ ತರಲಾಗುವುದು ಎಂದರು.

ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಅವರಿಗೆ ವಾಸ್ತವ ಸತ್ಯದ ಬಗ್ಗೆ ತಿಳಿದಿಲ್ಲ. ಕಟ್ಟಕಡೆಯ ಜನರ ಬಗ್ಗೆ ಕಾಳಜಿ ಬಿಜೆಪಿಗಿಲ್ಲ. ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ಸರ್ಕಾರವೇ ನೇಮಕ ಮಾಡಿತ್ತು. ಅಲ್ಲದೇ, ಬೊಮ್ಮಾಯಿ ಅವರ ಕಾಲದಲ್ಲಿ 2ಸಿ, 2ಡಿ ಮಾಡಿದರು. ಆಗ ವರದಿ ಪರಿಶೀಲನೆ ಮಾಡದೇ, ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಅವರು ಮಾಡಿದರೆ, ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡುತ್ತಾರೆ. ನಾವು ಮಾಡಿದರೆ ಮಾತ್ರ ಸಿಎಂ ಮನೇಲಿ ಕುಳಿತು ಸಮೀಕ್ಷೆ ಮಾಡಿದಂತೆ ಎಂದು ಆರೋಪಿಸುತ್ತಾರೆ. ಬಿಜೆಪಿಯವರು ಏನು ಅರಿಯದೇ ಆರೋಪಿಸುತ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ದೂರಿದರು.

ಶೈಕ್ಷಣಿಕ ಗುಣಮಟ್ಟ ಹಂತ ಹಂತವಾಗಿ ಸುಧಾರಣೆ

371 (ಜೆ) ಅನುಷ್ಠಾನದಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅನುಕೂಲವಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶ ಸುಧಾರಣೆಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ. ಅಕ್ಷರ ಆವಿಷ್ಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಅತಿ ಹೆಚ್ಚು ಗಮನ ಹರಿಸಿ, ಕ್ರಮ ಕೈಗೊಳ್ಳುತ್ತೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಪ್ರಕಾರ ಅತಿ ಹೆಚ್ಚು ಅನುದಾನ ಸಿಗುತ್ತಿದೆ. ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿ ಈ ಭಾಗದಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಹೋರಾಡುತ್ತಿರುವಾಗ ನನ್ನ ಜನ್ಮದಿನಾಚರಣೆ ಬೇಡ- ಡಿ.ಕೆ. ಶಿವಕುಮಾರ್

ರಾಜ್ಯದ ಬಹುತೇಕ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಗುಣಮಟ್ಟ ಆಹಾರ ನೀಡಲಾಗುತ್ತಿದೆ. ಆಹಾರ ಸಾಮಗ್ರಿಗಳನ್ನು ಶೇಖರಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಗೊಂದು ಗೋದಾಮು ಸ್ಥಾಪಿಸಲಾಗುವುದು. ಬಿಸಿಎಂ ಹಾಸ್ಟೆಲ್‌ಗಳಲ್ಲಿ ಗುಣಮಟ್ಟ ಕಾಪಾಡಲು ಕ್ರಮ ಕೈಗೊಳ್ಳಲಾಗಿದ್ದು, ಎಲ್ಲೆಲ್ಲಿ ಸಮಸ್ಯೆ ಕಂಡುಬರುತ್ತೆ ಅಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.