Killer Movie: ದಶಕದ ಬಳಿಕ ಸಿನಿಮಾ ನಿರ್ದೇಶನಕ್ಕೆ ಮುಂದಾದ ತಮಿಳು ನಟ ಎಸ್.ಜೆ.ಸೂರ್ಯ; ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ
Killer Movie: ತಮಿಳಿನ ಹೆಸರಾಂತ ನಿರ್ದೇಶಕ ಹಾಗೂ ನಟ ಎಸ್.ಜೆ. ಸೂರ್ಯ ಮತ್ತೆ ಡೈರೆಕ್ಟರ್ ಟೋಪಿ ತೊಟ್ಟು ಬಹುಮುಖ್ಯವಾದ ಹೊಸ ಸಿನಿಮಾದ ಮೂಲಕ ವಾಪಸ್ಸಾಗುತ್ತಿದ್ದಾರೆ. ಚಿತ್ರಕ್ಕೆ ‘ಕಿಲ್ಲರ್ʼ ಎಂದು ಶೀರ್ಷಿಕೆ ಇಡಲಾಗಿದೆ. ʼಕಿಲ್ಲರ್ʼ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.


ಬೆಂಗಳೂರು: ಹತ್ತು ವರ್ಷಗಳ ನಂತರ, ತಮಿಳಿನ ಹೆಸರಾಂತ ನಿರ್ದೇಶಕ ಹಾಗೂ ನಟ ಎಸ್.ಜೆ. ಸೂರ್ಯ ಮತ್ತೆ ಡೈರೆಕ್ಟರ್ ಟೋಪಿ ತೊಟ್ಟು ಬಹುಮುಖ್ಯವಾದ ಹೊಸ ಸಿನಿಮಾದ ಮೂಲಕ ವಾಪಸ್ಸಾಗುತ್ತಿದ್ದಾರೆ. ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ, ಗೋಕುಲಂ ಗೋಪಾಲನ್ ಮತ್ತು ಏಂಜೆಲ್ ಸ್ಟುಡಿಯೋಸ್ (ಎಸ್.ಜೆ. ಸೂರ್ಯ ಒಡೆತನದ) ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ‘ಕಿಲ್ಲರ್ʼ ಎಂದು (Killer Movie) ಶೀರ್ಷಿಕೆ ಇಡಲಾಗಿದೆ. ʼವಾಲಿʼ, ʼಖುಷಿʼ ಮತ್ತು ʼನ್ಯೂʼ ಎಂಬ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಎಸ್.ಜೆ. ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿ.ಸಿ. ಪ್ರವೀಣ್ ಮತ್ತು ಬೈಜು ಗೋಪಾಲನ್ ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ. ಕೃಷ್ಣಮೂರ್ತಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

ʼಕಿಲ್ಲರ್ʼ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ದೇಶದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಲಿರುವ ಈ ಚಿತ್ರದಲ್ಲಿ, ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು ಹಾಗೂ ತಾಂತ್ರಿಕ ತಂಡ ಇರಲಿದೆ. ಚಿತ್ರದ ಕುರಿತಾಗಿ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ.
ಈ ಸುದ್ದಿಯನ್ನೂ ಓದಿ | Jumka Fashion 2025: ಮಾನಿನಿಯರ ಮನ ಗೆದ್ದ ಬ್ಲ್ಯಾಕ್ ಮೆಟಲ್ ಜುಮಕಿಗಳು
ಇನ್ನು ಶ್ರೀ ಗೋಕುಲಂ ಮೂವೀಸ್ ಸಂಸ್ಥೆಯು ಮಲಯಾಳಂ ಚಿತ್ರರಂಗದಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡುತ್ತಿದೆ. ಸುರೇಶ್ ಗೋಪಿ ಅಭಿನಯದ ʼಒಟ್ಟಕೋಂಬನ್ʼ, ಜಯಸೂರ್ಯ ಅಭಿನಯದ ʼಕಥನಾರ್ʼ, ದಿಲೀಪ್ ಅಭಿನಯದ ʼಭಾ ಭಾ ಬಾʼ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದೆ. ಇದೀಗ ʼಕಿಲ್ಲರ್ʼ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ ಎಂದು ತಿಳಿಸಿದೆ.