ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka SSLC Results: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರೂ ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಉತ್ತಮ ಅಂಕ

Injured Student Success story: ಶೈಕ್ಷಣಿಕ ಜೀವನದ ಭವಿಷ್ಯ ನಿರ್ಧರಿಸುವ ಮಹತ್ವದ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಆಂಬ್ಯುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್‌ನಲ್ಲಿ ಮಲಗಿಯೇ ಪರೀಕ್ಷೆ ಬರೆದ ಕೋಲಾರದ ವಿದ್ಯಾರ್ಥಿನಿ ಕುಸುಮಾ ಉತ್ತಮ ಅಂಕ ಪಡೆದಿದ್ದು, ರಾಜ್ಯಕ್ಕೆ ಮಾದರಿಯಾಗಿದ್ದಾಳೆ.

ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಉತ್ತಮ ಅಂಕ

ಜೆಮಿನಿ ಎಐ ರಚಿತ ಚಿತ್ರ -

Priyanka P
Priyanka P Apr 23, 2026 3:16 PM

ಕೋಲಾರ, ಏ. 23: ಸಾಧನೆ ಮಾಡುವ ಛಲವಿದ್ದರೆ, ಜೀವನದಲ್ಲಿ ಅದೆಷ್ಟೇ ಸಂಕಷ್ಟ ಬಂದರೂ ಎದೆಗುಂದದೆ ಹೋರಾಡಿದರೆ ಫಲ ನಿಶ್ಚಿತ ಅನ್ನೋ ಮಾತನ್ನು ಕೋಲಾರ ಜಿಲ್ಲೆಯ ಈ ಬಾಲಕಿ ನಿಜವಾಗಿಸಿದ್ದಾಳೆ (Kolar News). ಶೈಕ್ಷಣಿಕ ಜೀವನದ ಭವಿಷ್ಯ ನಿರ್ಧರಿಸುವ ಮಹತ್ವದ ಎಸ್ಎಸ್ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿನಿ ಕುಸುಮಾ ಆಂಬ್ಯುಲೆನ್ಸ್‌ನಲ್ಲಿ ಬಂದಿದ್ದಳು. ಅಲ್ಲದೆ ಸ್ಟ್ರೆಚರ್‌ನಲ್ಲಿ ಮಲಗಿಯೇ ಪರೀಕ್ಷೆ ಬರೆದಿದ್ದಳು. ಇದೀಗ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾಳೆ (SSLC Exam Result). ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ (Student’s Inspirational Story).

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಿನ್ನನಾಗಹಳ್ಳಿ ನಿವಾಸಿ ಕುಸುಮಾ ಪ್ರತಿಭಾವಂತ ಬಾಲಕಿ. 16 ವರ್ಷದ ಕುಸುಮಾ, ಸೆಂಟ್ ಮೇರಿಸ್ ಹೈಸ್ಕೂಲ್ ವಿದ್ಯಾರ್ಥಿನಿ. ಪರೀಕ್ಷೆಗೆ ಸಕಲ ಸಿದ್ಧತೆ ನಡೆಸಿದ್ದುಳಆದರೆ ವಿಧಿಯಾಟ ಆಕೆಯನ್ನು ಹಾಸಿಗೆ ಹಿಡಿಯುವಂತೆ ಮಾಡಿತು.

ಪರೀಕ್ಷೆ ಇನ್ನೇನು ಸಮೀಪಿಸಿತು ಎಂದಾದಾಗ ಅಪಘಾತದಿಂದ ಒಂದು ಕಾಲು ಕಳೆದುಕೊಳ್ಳಬೇಕಾಯಿತು. ಎದ್ದು ನಿಲ್ಲಲೂ ಸಾಧ್ಯವಾಗದ ಆಕೆ ಮಲಗಿದ್ದಲ್ಲೇ ಇರಬೇಕಾಯಿತು. ಈ ಆಘಾತಕಾರಿ ಘಟನೆಯಿಂದ ಎದೆಗುಂದದ ಕುಸುಮಾ, ಪರೀಕ್ಷೆ ಬರೆಯಲೇಬೇಕು ಎಂದು ದೃಢಸಂಕಲ್ಪ ಮಾಡಿದಳು. ಆಂಬ್ಯುಲೆನ್ಸ್ ಮೂಲಕವೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಆಕೆ, ಸ್ಟ್ರೆಚರ್‌ನಲ್ಲಿ ಮಲಗಿಕೊಂಡೇ ಪರೀಕ್ಷೆ ಬರೆದಳು.

ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕೋದು ಹೇಗೆ? ಲಾಸ್ಟ್ ಡೇಟ್, ಫೀಸ್-‌ ಡೀಟೆಲ್ಸ್

ಹೌದು, ಎಸ್ಎಸ್‍ಎಲ್‌ಸಿ ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡ ಆಕೆ, ಒಂದು ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಈ ವೇಳೆ ಪರೀಕ್ಷೆಯ ದಿನ ಬಂದೇಬಿಟ್ಟಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗದಿದ್ದರೂ, ಮಲಗಿದ್ದಲ್ಲೇ ಪರೀಕ್ಷೆ ಬರೆಯಬೇಕೆಂಬ ಹಂಬಲ ವ್ಯಕ್ತಪಡಿಸಿದಳು. ಹೀಗಾಗಿ ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್‌ನ ಸೆಂಟ್ ಜೋಸೆಫ್ ಶಾಲೆಗೆ ಬಂದು ಪರೀಕ್ಷೆಗೆ ಹಾಜರಾಗಿದ್ದಳು.

ಇಂದು (ಏ. 23) ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕುಸುಮಾ ಉತ್ತಮ ಅಂಕ ಪಡೆದಿದ್ದಾಳೆ. 625 ಅಂಕಗಳಿಗೆ 374 ಅಂಕಗಳನ್ನು ಗಳಿಸಿದ್ದಾಳೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು, ನೋವಿನಲ್ಲಿದ್ದರೂ ಪರೀಕ್ಷೆ ಬರೆಯುವ ಮೂಲಕ ಆಕೆ ಮಾಡಿರುವ ಧೈರ್ಯ, ಸಾಧನೆ ನಿಜಕ್ಕೂ ಮೆಚ್ಚುವಂಥದ್ದು. ಸದ್ಯ ಕುಸುಮಾ ಬೆಂಗಳೂರಿನ ವೈಟ್ ಫೀಲ್ಡ್‌ನ ಹಾಸ್ಟರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾಳೆ.