ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Koppal News: ಸಾಲ ಕಟ್ಟಲಾಗದೆ ಜೈಲು ಸೇರಿದ್ದ ವ್ಯಕ್ತಿ ಸಾವು; ಲಾಕಪ್‌ ಡೆತ್‌ ಆರೋಪ

Crime News: ಖಾಸಗಿ ಫೈನಾನ್ಸ್ ಕಂಪನಿಯ ಸಾಲ ತೀರಿಸಲು ಸಾಧ್ಯವಾಗದೇ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಏಕಾಏಕಿ ಮೃತಪಟ್ಟಿದ್ದು ಅನುಮಾನ ಮೂಡಿದೆ. ಗಂಗಾವತಿ ನಗರದ ಶರಣಬಸವೇಶ್ವರ ನಗರದ ನಿವಾಸಿ ರಾಮರೆಡ್ಡಿ (35) ಮೃತ ವ್ಯಕ್ತಿ. ಇವರ ಸಾವಿನ ಬಗ್ಗೆ ಮೃತನ ಕುಟುಂಬ ಅನುಮಾನ ವ್ಯಕ್ತಪಡಿಸಿದೆ.

ಸಾಲ ಕಟ್ಟಲಾಗದೆ ಜೈಲು ಸೇರಿದ್ದ ವ್ಯಕ್ತಿ ಸಾವು; ಲಾಕಪ್‌ ಡೆತ್‌ ಆರೋಪ

ಸಾಂದರ್ಭಿಕ ಚಿತ್ರ.

Profile Ramesh B May 1, 2025 11:35 PM

ಕೊಪ್ಪಳ: ಖಾಸಗಿ ಫೈನಾನ್ಸ್ ಕಂಪನಿಯ ಸಾಲ ತೀರಿಸಲು ಸಾಧ್ಯವಾಗದೇ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಏಕಾಏಕಿ ಮೃತಪಟ್ಟಿದ್ದು ಇದು ಲಾಕಪ್‌ ಡೆತ್ ಎಂಬ ಅನುಮಾನ ವ್ಯಕ್ತವಾಗಿದೆ (Crime News). ಸಾವಿನ ಬಗ್ಗೆ ಮೃತನ ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಜಿಲ್ಲೆಯ ಗಂಗಾವತಿ ನಗರದ ಶರಣಬಸವೇಶ್ವರ ನಗರದ ನಿವಾಸಿ ರಾಮರೆಡ್ಡಿ (35) ಮೃತ ವ್ಯಕ್ತಿ (Koppal News). ಮೃತ ಬೈಕ್ ಖರೀದಿಗೆ ಶ್ರೀರಾಮ ಫೈನಾನ್ಸ್‌ನಲ್ಲಿ ಸಾಲ ಮಾಡಿದ್ದರು.

ಇಎಂಐ ಪಾವತಿಸದ ಹಿನ್ನೆಲೆ ಫೈನಾನ್ಸ್ ಕಂಪನಿ ನ್ಯಾಯಾಲಯದ ಮೊರೆ ಹೋಗಿತ್ತು. ಏ. 21ರಂದು ಫೈನಾನ್ಸ್ ಕಂಪನಿ ಹಾಗೂ ಕೋರ್ಟ್ ಸಿಬ್ಬಂದಿ ರಾಮರೆಡ್ಡಿ ಅವರನ್ನು ಕರೆದೊಯ್ದಿದ್ದರು. ಏ. 29ರಂದು ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಏ. 30ರಂದು ಮೃತಪಟ್ಟಿದ್ದರು. ಇದೀಗ ಕುಟುಂಬ ಸದಸ್ಯರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ʼʼರಾಮರೆಡ್ಡಿ ದೈಹಿಕವಾಗಿ ಸದೃಢನಾಗಿದ್ದು ನ್ಯಾಯಾಲಯದ ಆದೇಶದಂತೆ ಕಾರಾಗೃಹಕ್ಕೆ‌ ಹೋಗಿದ್ದ. ಕಾರಾಗೃಹ ಅಧಿಕಾರಿ, ಸಿಬ್ಬಂದಿ ಮತ್ತು ಶ್ರೀರಾಮ್ ಫೈನಾನ್ಸ್ ಸಿಬ್ಬಂದಿ ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆʼʼ ಎಂದು ಕುಟುಂಬ ಆರೋಪಿಸಿದೆ.

ಈ ಸುದ್ದಿಯನ್ನೂ ಓದಿ: Physical abuse: ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ; ಸ್ನೇಹಿತರಿಂದಲೇ ಹೀನ ಕೃತ್ಯ!

ʼʼಕೈ ಬೆರಳುಗಳು ಮುರಿದಿದ್ದು, ಕಾಲಿನ ಬೆರಳು ಜರ್ಜರಿತವಾಗಿವೆ. ಹೊಟ್ಟೆ, ಎದೆ ಮತ್ತು ಬೆನ್ನಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ಕಂದು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಸಾವಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕುʼʼ ಎಂದು ರಾಮರೆಡ್ಡಿ ಅವರ ಸಹೋದರ ಶಂಕರಗೌಡ ಪಲ್ಲೇದ ದೂರು ನೀಡಿದ್ದಾರೆ. ಘಟನೆ ಸಂಬಂಧ ಕೊಪ್ಪಳ ನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ‌‌ ದಾಖಲಾಗಿದೆ.

ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣದ ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

ಕಾರವಾರ: ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣದ ಪ್ರಮುಖ ಆರೋಪಿ ಮೌಸಿನ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 1ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದಾನೆ. ಹೀಗಾಗಿ ಇನ್ನುಳಿದ ಪ್ರಕರಣದಲ್ಲಿ ಬಾಡಿ ವಾರಂಟ್ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆರೋಪಿ ಮೌಸಿನ್ ವಿರುದ್ಧ ಉತ್ತರ ಕನ್ನಡ, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈತ ಉಗ್ರರ ಜತೆ ಸಂಪರ್ಕ ಹೊಂದಿದ್ದರ ಬಗ್ಗೆಯೂ ಮಾಹಿತಿ ಇದೆ. ಈ ಕಾರಣಕ್ಕಾಗಿಯೇ ಎನ್ಐಎ ಕೂಡ ಈತನ ಮನೆ ಮೇಲೆ ದಾಳಿ ನಡೆಸಿತ್ತು.