ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Ramesh Ballamoole

Senior Sub Editor

[email protected]

ಗಡಿನಾಡು ಕಾಸರಗೋಡು ಜಿಲ್ಲೆಯ ಆದೂರು ಗ್ರಾಮದ ರಮೇಶ್ ಬಳ್ಳಮೂಲೆ ಉದಯವಾಣಿ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ವಿಜಯವಾಣಿ, ಅಧಾನ್ ನ್ಯೂಸ್ ಆ್ಯಪ್, ನ್ಯೂಸ್ ಆ್ಯರೋ ವೆಬ್‌ಸೈಟ್‌, ವಿಸ್ತಾರ ನ್ಯೂಸ್ ವೆಬ್‌ಸೈಟ್‌ನಲ್ಲಿ ಕಾರ್ಯ ನಿರ್ವಹಿಸಿದರು. 2024ರ ಆಗಸ್ಟ್‌ನಿಂದ ವಿಶ್ವವಾಣಿ ವೆಬ್‌ಸೈಟ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸುಮಾರು 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರವಣಿಗೆ, ಓದು, ಸಿನಿಮಾ ವೀಕ್ಷಣೆ, ಪ್ರವಾಸ ಇವರ ನೆಚ್ಚಿನ ಹವ್ಯಾಸ.

Articles
ಮದುವೆ ಆಮಿಷ ಒಡ್ಡಿ ಯುವತಿಗೆ ವಂಚನೆ; ಮಾಜಿ ಸಚಿವ ಡಿ. ಸುಧಾಕರ್ ಸಹೋದರನ ಕುಟುಂಬದ ವಿರುದ್ಧ ಎಫ್‌ಐಆರ್

ಮದುವೆ ಆಮಿಷ ಒಡ್ಡಿ ಯುವತಿಗೆ ವಂಚನೆ; ಎಫ್‌ಐಆರ್ ದಾಖಲು

Tumkur News: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಎಸಗಿರುವ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪದ ಮೇಲೆ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ಸಹೋದರ ಡಿ.ಎಸ್. ಕುಮಾರ್ ಕುಟುಂಬದ ವಿರುದ್ಧ ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಟ್ಟು ಏಳು ಜನರ ವಿರುದ್ಧ ದೂರು ದಾಖಲಾಗಿದೆ.

ಕಡಲ ನಗರಿ ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ; 2ನೇ ಆಡಳಿತ ಭಾಷೆಯಾಗುತ್ತ ತುಳು?

ಕಡಲ ನಗರಿ ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ

Cabinet meeting in Mangaluru: ಕರಾವಳಿಯ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಲು ಸಿದ್ಧತೆ ಜೋರಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಶುಕ್ರವಾರ (ಸೆಪ್ಟೆಂಬರ್‌ 18) ಈ ಐತಿಹಾಸಿಕ ಸಭೆ ಆಯೋಜಿಸಲಾಗಿದೆ.

Vishweshwar Bhat: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಒಂದು ಗರಿ ಮೂಡಿತು!

Anant Nag: ಅನಂತ್ ನಾಗ್ ಮತ್ತು ಶಂಕರ್ ನಾಗ್—ಈ ಇಬ್ಬರು ಸಹೋದರರ ಒಡನಾಟ ಕನ್ನಡ ಸಾಂಸ್ಕೃತಿಕ ಲೋಕದ ಅತ್ಯಂತ ಸುಂದರ ಅಧ್ಯಾಯ. ಶಂಕರ್ ಅವರಲ್ಲೊಂದು ಕಾಡಿನ ಬೆಂಕಿಯಂತಹ ತೀವ್ರತೆ, ನಿರಂತರ ಚಲನೆ ಇದ್ದರೆ, ಅನಂತ್ ಅವರಲ್ಲಿ ಹರಿಯುವ ನದಿಯಂತಹ ಪ್ರಶಾಂತತೆ, ತಣ್ಣನೆಯ ಗಾಂಭೀರ್ಯವಿತ್ತು. ಶಂಕರ್ ನಿರ್ದೇಶಿಸಿದ ಆರ್.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ನಲ್ಲಿ ಅನಂತ್ ಕಾಣಿಸಿಕೊಂಡ ಪರಿ ಇಂದಿಗೂ ಮರೆಯಲಾಗದು-ಅನಂತ್‌ ನಾಗ್‌ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ವಿಶ್ವೇಶ್ವರ ಭಟ್‌ ಅವರು ಬರೆದ ಆತ್ಮೀಯ ಬರಹ ಇಲ್ಲಿದೆ.

ವಿವಾಹವಾಗಿ 17 ದಿನದಲ್ಲೇ ಅಮೆರಿಕದಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ವ್ಯಕ್ತಿ: ಪತ್ನಿ ನಾಪತ್ತೆ, ಹೆಚ್ಚಿದ ಅನುಮಾನ

ವಿವಾಹವಾಗಿ 17 ದಿನದಲ್ಲೇ ಅಮೆರಿಕದಲ್ಲಿ ಭಾರತೀಯ ವ್ಯಕ್ತಿಯ ನಿಗೂಢ ಸಾವು

Mohammed Jaber Hussain: ವಿವಾಹವಾಗಿ ಕೇವಲ 17 ದಿನಗಳಲ್ಲೇ ಅಮೆರಿಕದಲ್ಲಿ ನೆಲೆಸಿದ್ದ ಹೈದರಾಬಾದ್‌ ಮೂಲದ ಸಿವಿಲ್ ಎಂಜಿನಿಯರ್ ಮೊಹಮ್ಮದ್ ಜಾಬರ್ ಹುಸೇನ್ (28) ತಮ್ಮ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮಗನ ದಿಢೀರ್ ಸಾವಿನ ಆಘಾತದಲ್ಲಿರುವ ಕುಟುಂಬವು, ಆತನ ಶರೀರವನ್ನು ಭಾರತಕ್ಕೆ ತರಲು ನೆರವಾಗುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ವಿನಂತಿ ಮಾಡಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 50 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್

Lokayukta Raid: ಬರೋಬ್ಬರಿ 1 ಕೋಟಿ ರೂಪಾಯಿ ಲಂಚಕಕೆ ಬೇಡಿಕೆ ಇಟ್ಟು, 50 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಲಂಚದ ಹಣ ಪಡೆಯುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇನ್ನೂ ರೇಷನ್ ಕಾರ್ಡ್​ ಇ-ಕೆವೈಸಿ ಮಾಡಿಸಿಲ್ಲವೆ? ಇಲ್ಲಿದೆ ಗುಡ್‌ನ್ಯೂಸ್‌; ದಿನಾಂಕ ವಿಸ್ತರಿಸಿದ ಸರ್ಕಾರ

ರೇಷನ್ ಕಾರ್ಡ್​ ಇ-ಕೆವೈಸಿ ಡೆಡ್‌ಲೈನ್‌ ವಿಸ್ತರಿಸಿದ ಸರ್ಕಾರ

Ration Card e-KYC: ರೇಷನ್‌ ಕಾರ್ಡ್‌ ಇ-ಕೆವೈಸಿ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ. ಸೆಪ್ಟೆಂಬರ್ 30ರವರೆಗೆ ಇದ್ದ ಕೊನೆ ದಿನಾಂಕವನ್ನು ಇದೀಗ ಅಕ್ಟೋಬರ್ 20ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ.

ʼʼಉಮರ್ ಖಾಲಿದ್​​ ದೇಶಪ್ರೇಮಿʼʼ: ವಿವಾದದ ಕಿಡಿ ಹೊತ್ತಿಸಿದ  ಬಿ.ಕೆ. ಹರಿಪ್ರಸಾದ್​​

ಉಮರ್ ಖಾಲಿದ್​​ ದೇಶಪ್ರೇಮಿ ಹೇಳಿಕೆ ಸಮರ್ಥಿಸಿಕೊಂಡ ಹರಿಪ್ರಸಾದ್​​

B.K. Hariprasad: ಜೈಲಿನಲ್ಲಿರುವ ಉಮರ್ ಖಾಲಿದ್ ದೇಶಪ್ರೇಮಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದು, ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ʼʼನಾನು ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ಅದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ‘ಹೈಫನೇಷನ್’ ಅಂತ್ಯ

ಪ್ರಧಾನಿ ಮೋದಿ ಮತ್ತು ‘ಹೈಫನೇಷನ್’ ಅಂತ್ಯ

Narendra Modi Birthday: ಇಂದು ಅಂದರೆ ಸೆಪ್ಟೆಂಬರ್ 17 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ. ಗುಜರಾತ್‌ ಮುಖ್ಯಮಂತ್ರಿ ಅದಾದ ಬಳಿಕ ಸತತ 3ನೇ ಬಾರಿ ಪ್ರಧಾನಿಯಾದ ಹೆಗ್ಗಳಿಕೆ ಅವರದ್ದು. ಅವರ ಜನ್ಮ ದಿನದ ಪ್ರಯುಕ್ತ ಮಾಜಿ ಸಂಸದರು ಮತ್ತು ಭಾರತ–ಇಸ್ರೇಲ್ ಸ್ನೇಹಕ್ಕೆ ಮೀಸಲಾಗಿರುವ ಭಾರತದ ‘ನಮಸ್ತೆ ಶಾಲೋಮ್’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ತರುಣ್ ವಿಜಯ್ ಬರೆದ ವಿಶೇಷ ಲೇಖನ ಇಲ್ಲಿದೆ.

''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

Dadasaheb Phalke Award: 'ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವʼʼ-ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಅನಂತ್‌ ನಾಗ್‌ಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ರೀತಿ ಇದು. ಸೆಪ್ಟೆಂಬರ್ 22ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

UPI Charges: ವ್ಯಾಪಾರಿಗಳು 2 ಸಾವಿರ ರೂಪಾಯಿಗಿಂತ ಅಧಿಕ ವ್ಯವಹಾರಕ್ಕೆ ಶುಲ್ಕ ಪಾವತಿಸಬೇಕು: ಸಾಮಾನ್ಯ ಗ್ರಾಹಕರಿಗೆ ಎಂದಿನಂತೆ ಉಚಿತ

ಯುಪಿಐ ಶುಲ್ಕ ಘೋಷಿಸಿದ ಕೇಂದ್ರ; ಯಾರಿಗೆಲ್ಲ ಅನ್ವಯ?

Merchant Discount Rate: ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಯುಪಿಐ ವ್ಯವಹಾರದ ನಿಯಮದಲ್ಲಿ ಹೊಸ ಬದಲಾವಣೆ ಘೋಷಿಸಿದೆ. ಮರ್ಚಂಟ್‌ ಡಿಸ್ಕೌಂಟ್‌ ರೇಟ್‌ನಡಿ ಯುಪಿಐ ವ್ಯವಹಾರಕ್ಕೆ ವ್ಯಾಪಾರಿಗಳು ಶುಲ್ಕ ಪಾವತಿಸಬೇಕು. ಅದಾಗ್ಯೂ ಸಾಮಾನ್ಯ ಗ್ರಾಹಕರು ಯಾವುದೇ ಶುಲ್ಕ ವಿಧಿಸಬೇಕಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿ ನಡುವಿನ ವ್ಯವಹಾರಕ್ಕೆ ಯಾವುದೇ ಫೀಸ್‌ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌; ನೇಹಾ ಕಕ್ಕರ್‌ಗಿಂತಲೂ ವಾಯ್ಸ್‌ ಚೆನ್ನಾಗಿದೆ ಎಂದು ಗಾಯಕಿಯ ಕಾಲೆಳೆದ ನೆಟ್ಟಿಗರು

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌

Sonu Nigam: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಹಿನ್ನಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಈ ವೇಳೆ ಹಾಡೊಂದನ್ನು ಏಕಕಾಲಕ್ಕೆ ಪುರುಷ ಮತ್ತು ಸ್ತ್ರೀ ಧ್ವನಿಯಲ್ಲಿ ಹಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಗಾಯಕನ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ದಳಪತಿ ವಿಜಯ್‌ ಫ್ಯಾನ್ಸ್‌ ಅತಿರೇಕದ ವರ್ತನೆ; ಗಣೇಶನ ರೂಪದಲ್ಲಿ ನಟನನ್ನು ನೋಡಿ ನೆಟ್ಟಿಗರು ಕಿಡಿ: ತಮಿಳುನಾಡಿನಲ್ಲಿ ಜೋರಾಯ್ತು ರಾಜಕೀಯ ಚರ್ಚೆ

ವಿಜಯ್‌ ರೂಪದಲ್ಲಿ ಗಣೇಶನನ್ನು ನೋಡಿ ನೆಟ್ಟಿಗರು ಕಿಡಿ

Vijay-Themed Ganesh Idols: ಗಣೇಶ ಚತುರ್ಥಿ ಪ್ರಯುಕ್ತ ತಮಿಳುನಾಡನಲ್ಲಿ ಮುಖ್ಯಮಂತ್ರಿ ಹಾಗೂ ನಟ ವಿಜಯ ರೂಪ ಹೋಲುವ ಗಣೇಶ ವಿಗ್ರಹಗಳು ತಯಾರಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ತಕ್ಷಣ ವಿಗ್ರಹಗಳನ್ನು ತೆರವುಗೊಳಿಸಬೇಕು ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್‌ ಮಂಗಳವಾರ ಒತ್ತಾಯಿಸಿದ್ದಾರೆ.

ʼಕಾಂತಾರ 3' ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ; ಚಿತ್ರ ಯಾವಾಗ ಆರಂಭ?

ʼಕಾಂತಾರ 3' ಬಂದೇ ಬರುತ್ತೆ: ರಿಷಬ್‌ ಶೆಟ್ಟಿ ಬಿಗ್‌ ಅಪ್‌ಡೇಟ್‌

Rishab Shetty: ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ʼಕಾಂತಾರʼ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿರುವವರಿಗಾಗಿ ರಿಷಬ್‌ ಶೆಟ್ಟಿ ಗುಡ್‌ನ್ಯೂಸ್‌ ನೀಡಿದ್ದಾರೆ. ಕೇರಳಂನ ತಿರುವನಂತಪುರಂಗೆ ಆಗಮಿಸಿದ ರಿಷಬ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ʼಕಾಂತಾರ 3ʼ ಸದ್ಯದಲ್ಲೇ ಆರಂಭವಾಗಲಿದೆ ಎಂದಿದ್ದಾರೆ.

3 ತಿಂಗಳ ಗರ್ಭಿಣಿ ಅಪ್ರಾಪ್ತೆಯನ್ನು ಕೊಂದು ತಲೆಯನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಎಸೆದ ಪತಿ; ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಅಂಶ

3 ತಿಂಗಳ ಗರ್ಭಿಣಿ ಅಪ್ರಾಪ್ತೆಯನ್ನು ಕೊಂದ ಪತಿ, ಮಾವ

Jharkhand Horror: ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಬಾಲಕಿಯ ತಲೆ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ. 3 ತಿಂಗಳ ಗರ್ಭಿಣಿಯಾಗಿದ್ದ ಈಕೆಯನ್ನು ಪತಿ ಮತ್ತು ಆಕೆಯ ಮಾವನೇ ಕೊಲೆ ಮಾಡೊದ್ದು ಗೊತ್ತಾಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Fact Check: ರೇಷನ್‌ ಕಾರ್ಡ್‌ ಹೊಂದಿರುವ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಉಚಿತ ಎಸಿ! ಪ್ರಧಾನಿ ನರೇಂದ್ರ ಮೋದಿಯಿಂದ ಹೊಸ ಯೋಜನೆ? ವೈರಲ್‌ ಪೋಸ್ಟ್‌ನ ಅಸಲಿಯತ್ತೇನು?

ರೇಷನ್‌ ಕಾರ್ಡ್‌ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಉಚಿತ ಎಸಿ?!

PIB Fact Check: ಕೇಂದ್ರ ಸರ್ಕಾರ ರೇಷನ್‌ ಕಾರ್ಡ್‌ದಾರರಿಗೆ ಉಚಿತ ಎಸಿ ಒದಗಿಸಲು ಚಿಂತನೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಯೋಜನೆ ಘೋಷಿಸಿದ್ದಾರೆ ಎಂದು ಹೇಳಲಾದ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು. ಎಐ ತಂತ್ರಜ್ಞಾನ ಬಳಸಿ ವಿಡಿಯೊ ಸೃಷ್ಟಿಸಿಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ ತಿಳಿಸಿದೆ.

BOB Recruitment 2026: ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 1,100 ಹುದ್ದೆ; ಯಾರೆಲ್ಲ ಅರ್ಜಿ ಸಲ್ಲಿಸಬಹುದು? ವಿದ್ಯಾರ್ಹತೆ ಏನು? ಇಲ್ಲಿದೆ ಇಂಚಿಂಚು ಮಾಹಿತಿ

ಬ್ಯಾಂಕ್‌ ಆಫ್‌ ಬರೋಡದಲ್ಲಿದೆ 1,100 ಹುದ್ದೆ; ಹೀಗೆ ಅಪ್ಲೈ ಮಾಡಿ

Bank Jobs: ಬ್ಯಾಂಕ್‌ ಆಫ್‌ ಬರೋಡ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 1,100 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವೆಲ್ತ್‌ ಎಕ್ಸಿಕ್ಯುಟೀವ್‌, ಕ್ರೆಡಿಟ್‌ ಅನಾಲಿಸ್ಟ್‌ ಹುದ್ದೆ ಇದಾಗಿದ್ದು, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 24.

SSC Recruitment 2026: 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌

1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Job Guide: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ದೇಶಾದ್ಯಂತ ಖಾಲಿ ಇರುವ 1,871 ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 30.

Pravasi Prapancha: ಬಾಗಿಲಿಲ್ಲದ ಭಗವಂತ; ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

ಬಾಗಿಲಿಲ್ಲದ ಭಗವಂತ: ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ

Bettada Ranganathaswamy Temple: ಬೆಟ್ಟದ ರಂಗನಾಥಸ್ವಾಮಿ ಕ್ಷೇತ್ರವನ್ನು ಜನರು ವಿಶೇಷವಾಗಿ ನೆನಪಿಸಿಕೊಳ್ಳುವುದು 'ಬಾಗಿಲಿಲ್ಲದ ದೇವರು' ಎಂಬ ಕಾರಣಕ್ಕೆ. ಒಮ್ಮೆ ದೇವಾಲಯವನ್ನು ನಿರ್ಮಿಸಿ ಬಾಗಿಲು ಹಾಕಿ ಪೂಜೆ ಸಲ್ಲಿಸಲಾಗುತ್ತಿತ್ತು ಎನ್ನುವುದು ಕ್ಷೇತ್ರದ ಇತಿಹಾಸದಲ್ಲಿದೆ. ಆದರೆ ಭಕ್ತರ ನಂಬಿಕೆಯ ಪ್ರಕಾರ 'ನನ್ನನ್ನು ನೋಡಲು ಬರುವ ಭಕ್ತರಿಗೆ ಸಮಯದ ಹಂಗೇಕೆ? ನನ್ನ ದರ್ಶನಕ್ಕೆ ಬಾಗಿಲಿನ ಬಂಧನವೇಕೆ?'ಎಂಬ ಭಾವದಿಂದ ರಂಗನಾಥಸ್ವಾಮಿಯೇ ಆ ಬಾಗಿಲುಗಳನ್ನು ಒದ್ದರೆಂದು ಹೇಳಲಾಗುತ್ತದೆ. ಆ ಬಾಗಿಲುಗಳು ಕುಣಿಗಲ್ ಕೆರೆಗೆ ಹೋಗಿ ಬಿದ್ದವು ಎಂಬುದು ಹಿರಿಯರು ಹೇಳಿಕೊಂಡು ಬಂದಿರುವ ನಂಬಿಕೆ.

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಸಾಕ್ಷ್ಯ ನಾಶಕ್ಕೆ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿ; ಹೃದಯಾಘಾತದಿಂದ ಪ್ರಾಣಬಿಟ್ಟ ಕಂದಮ್ಮ

6 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಗಲ್ಲು ಶಿಕ್ಷೆ

Chhattisgarh Horror: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಸಾಕ್ಷ್ಯ ನಾಶಕ್ಕೆ ಆಕೆಯ ಖಾಸಗಿ ಅಂಗಕ್ಕೆ ಟಾಯ್ಲೆಟ್‌ ಕ್ಲೀನರ್‌ ಎರಚಿದ ಪಾಪಿಗೆ ಛತ್ತೀಗಢದ ದುರ್ಗ ಜಿಲ್ಲೆಯ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ ಗಲ್ಲು ಸಿಕ್ಷೆ ವಿಧಿಸಿದೆ. ಘಟನೆ ನಡೆದು 17 ತಿಂಗಳಲ್ಲೇ ಮಹತ್ವದ ತೀರ್ಪು ಹೊರ ಬಿದ್ದಿದೆ.

Jaipur Horror: ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ; ಏನೂ ಆಗೇ ಇಲ್ಲವೆನ್ನುವಂತೆ ಚಹಾ ಮಾಡಿ ಕುಡಿದು ಎಸ್ಕೇಪ್‌

ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಕೊಂದ ಪಾಪಿ

Jaipur Shocker: ಜೈಪುರದಲ್ಲಿ ಕೌಟುಂಬಿಕ ಕಲಹ ಹಾಗೂ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭೀಕರ ಸಾಮೂಹಿಕ ಕೊಲೆ ನಡೆದಿದೆ. ವ್ಯಕ್ತಿಯೊಬ್ಬ ನಿದ್ರಿಸುತ್ತಿದ್ದ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯದ ಬಳಿಕ ಹಾಲಿನವನಿಂದ ಹಾಲು ಪಡೆದು ವೃದ್ಧ ತಂದೆಗೆ ಚಹಾ ಮಾಡಿಕೊಟ್ಟು ಪರಾರಿಯಾಗಿರುವ ಆರೋಪಿ ರಾಹುಲ್ ಝಾ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಕೇಂದ್ರದ ನಿರ್ಧಾರಕ್ಕೆ ಹೇಳಿದ್ದೇನು?

‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿಕೆಶಿ

DK Shivakumar: ರಾಷ್ಟ್ರಗಾನ 'ವಂದೇ ಮಾತರಂ'ನ ಎಲ್ಲ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಕೇಂದ್ರ ಸರ್ಕಾರ ಕಾಯ್ದೆ ಮಾಡಿದ್ದರೂ, ರಾಜ್ಯ ಸರ್ಕಾರ ಬರೀ 2 ಚರಣ ಹಾಡುವುದಾಗಿ ನಿರ್ಧರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಸರ್ಕಾರದ ನಿಲುವು ಸಮರ್ಥಿಸಿಕೊಂಡಿದ್ದಾರೆ.

ಪಾವಗಡದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ? ಪೀಪಲ್ಸ್ ವಾ‌ರ್ ಜನಶಕ್ತಿ ಪಾರ್ಟಿ ಕಾಮ್ರೇಡ್‌ ದೇವನ್ನ ದಳಂ ಹೆಸರಲ್ಲಿ 5 ಲಕ್ಷ ರೂಪಾಯಿಗೆ ಬೇಡಿಕೆ; ಗೇಟ್‌ನಲ್ಲಿ ಪತ್ರ ಪತ್ತೆ

ಪಾವಗಡದಲ್ಲಿ ಮತ್ತೆ ಆರಂಭವಾಯ್ತ ನಕ್ಸಲ್ ಚಟುವಟಿಕೆ?

Naxal Movement: ಕೇಂದ್ರ ನಕ್ಸಲ್‌ ಮುಕ್ತ ಭಾರತ ಘೋಷಣೆ ಮಾಡುತ್ತಿದ್ದರೆ ಇತ್ತ ಆಂಧ್ರ ಪ್ರದೇಶ ಹಾಗೂ ತುಮಕೂರಿನ ಪಾವಗಡ ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಶಂಕೆ ವ್ಯಕ್ತವಾಗಿದೆ. ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿಯ ಕಾಮ್ರೇಡ್‌ ದೇವನ್ನ ದಳಂ ಹೆಸರಿನ ಪತ್ರ ಪಾವಗಡದಲ್ಲಿಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Motivational Story: SBI ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೇರಿದ 65 ರೂಪಾಯಿ ಸಂಬಳಕ್ಕೆ ಶೌಚಾಲಯ ಶುಚಿಗೊಳಿಸುತ್ತಿದ್ದ ಮಹಿಳೆ; ಪ್ರತೀಕ್ಷಾ ಯಶೋಗಾಥೆ ಇದು

SBI ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗೇರಿದ ಕಸ ಗುಡಿಸುತ್ತಿದ್ದ ಮಹಿಳೆ

Pratiksha Tondwalkar: ಕೇವಲ 20ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು, 2 ವರ್ಷದ ಮಗನ ಹೊಟ್ಟೆ ತುಂಬಿಸಲು ತಿಂಗಳಿಗೆ 65 ರೂಪಾಯಿ ಸಂಬಳಕ್ಕೆ ಬ್ಯಾಂಕ್ ಶೌಚಾಲಯ ಸ್ವಚ್ಛಗೊಳಿಸುತ್ತಿದ್ದ ಮಹಿಳೆಯೊಬ್ಬರು ಇಂದು ಅದೇ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (AGM) ಹುದ್ದೆಗೆೇರಿ ಇಡೀ ದೇಶಕ್ಕೇ ಮಾದರಿಯಾಗಿದ್ದಾರೆ. ಮಹಾರಾಷ್ಟ್ರದ ಮುಂಬೈಯ ಪ್ರತೀಕ್ಷಾ ತೊಂಡವಲ್ಕರ್‌ ಅವರ ಯಶಸ್ಸಿನ ಕಥೆ ಇಲ್ಲಿದೆ.

ಬ್ಯಾಂಕ್‌ ಉದ್ಯೋಗಾಂಕ್ಷಿಗಳ ಗಮನಕ್ಕೆ: ಬ್ಯಾಂಕ್‌ ಆಫ್‌ ಬರೋಡದ 2,482 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಹೊಸ ವೇಳಾಪಟ್ಟಿ ಇಲ್ಲಿದೆ

ಬ್ಯಾಂಕ್‌ ಆಫ್‌ ಬರೋಡದ 2,482 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

BOB Recruitment 2026: ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,482 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದಬ್ಯಾಂಕ್‌ ಆಫ್‌ ಬರೋಡ ಇದೀಗ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಹಿಂದೆ ಅಪ್ಲೈ ಮಾಡಲು ಸೆಪ್ಟೆಂಬರ್‌ 7 ಕೊನೆಯ ದಿನಾಂಕ ಎನ್ನಲಾಗಿತ್ತು. ಇದೀಗ ಸೆಪ್ಟೆಂಬರ್‌ 17ರವರೆಗೆ ಅವಕಾಶ ಕಲ್ಪಿಸಲಾಗಿದೆ.

Loading...