Minister Shivaraj Thangadgi: ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ವಾಹನ ಅಪಘಾತ; ASIಗೆ ಗಂಭೀರ ಗಾಯ
ಸಚಿವ ಶಿವರಾಜ್ ತಂಗಡಗಿ ಅವರು ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಪ್ರಯಾಣಿಸುತ್ತಿದ್ದರು. ಸಕಲಾಪುರಹಟ್ಟಿ ಗೊಲ್ಲರಹಟ್ಟಿ ಕ್ರಾಸ್ ಬಳಿ ಅವರ ಬೆಂಗಾವಲು ವಾಹನವು ಓವರ್ ಟೇಕ್ ಮಾಡಿ ಮುಂದೆ ಬಂದಾಗ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ.
-
Rakshita Karkera
Jun 18, 2025 7:53 AM
ಕೊಪ್ಪಳ: ಸಚಿವ ಶಿವರಾಜ್ ತಂಗಡಗಿ(Minister Shivaraj Thangadgi) ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಎಎಸ್‌ಐಗೆ ಗಂಭೀರ ಗಾಯಗಳಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಈ ಘಡನೆ ನಡೆದಿದ್ದು, ಸಚಿವರು ಕನಕಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಚಿವ ಶಿವರಾಜ್ ತಂಗಡಗಿ ಅವರು ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಪ್ರಯಾಣಿಸುತ್ತಿದ್ದರು. ಸಕಲಾಪುರಹಟ್ಟಿ ಗೊಲ್ಲರಹಟ್ಟಿ ಕ್ರಾಸ್ ಬಳಿ ಅವರ ಬೆಂಗಾವಲು ವಾಹನವು ಓವರ್ ಟೇಕ್ ಮಾಡಿ ಮುಂದೆ ಬಂದಾಗ ಹೆದ್ದಾರಿ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಾಹನದ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಗಂಗಾವತಿಯಲ್ಲಿ ಸಂಜೆವರೆಗೂ ಕೆಡಿಪಿ ಸಭೆ ನಡೆಸಿದ ಸಚಿವರು ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಇನ್ನು ಗಾಯಾಳು ಎಎಸ್‌ಐ ಅನ್ನು ಹುಲಿಯಪ್ಪ ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಸಚಿವರು ದಾಖಲಿಸಲಾಗಿದೆ. ಇನ್ನು ವಾಹನದ ಚಾಲಕ ಅಮರೇಶ್ ಗೆ ಯಾವುದೇ ತೊಂದರೆಯಾಗಿಲ್ಲ. ಕೂಡ್ಲಿಗಿ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸಚಿವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಈ ಸುದ್ದಿಯನ್ನೂ ಓದಿ: ಎಚ್.ಡಿ.ಕೆ ಬೆಂಗಾವಲು ವಾಹನ ಅಪಘಾತ: ಮೂವರಿಗೆ ಗಾಯ