Karnataka Rain: ಈ ಮಳೆ ಟ್ರೇಲರ್ ಮಾತ್ರ, ಇನ್ನೂ 5 ದಿನ ಸುರಿಯಲಿದೆ ಸೈಕ್ಲೋನ್ ಮಳೆ!
Karnataka Rain News: ಚಂಡಮಾರುತ ವೈಪರೀತ್ಯದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಬಹುತೇಕ ಒಳನಾಡು ಜಿಲ್ಲೆಗಳ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಯ ಆರ್ಭಟ ಕೂಡ ಮುಂದುವರಿಯಲಿದೆ. ಮುಂದಿನ 5 ದಿನ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ

ಸಿಲ್ಕ್ ಬೋರ್ಡ್ ಜಲಾವೃತ

ಬೆಂಗಳೂರು: ಭಾನುವಾರ ರಾತ್ರಿಯಡೀ ಸುರಿದ ಭಾರೀ ಮಳೆಗೆ ಬೆಂಗಳೂರಿಗ (Bengaluru Rain) ತತ್ತರಿಸಿ ಹೋಗಿದ್ದಾನೆ. ಇಷ್ಟಕ್ಕೇ ಮುಗಿದಿಲ್ಲ, ಇನ್ನೂ 5 ದಿನ ಇದೇ ರೀತಿಯ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜ್ಯದಾದ್ಯಂತ ಮುಂಗಾರುಪೂರ್ವ ಮಳೆಯ (Karnataka rain news) ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾತ್ರಿಯಿಡಿ ಮಳೆ ಸುರಿದಿದೆ. ಚಂಡಮಾರುತದ (Cyclone) ಪರಿಣಾಮ ಇನ್ನು 5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.
ಭಾನುವಾರ ರಾತ್ರಿಯ ಮಳೆಗೆ ಇಡೀ ಬೆಂಗಳೂರೇ ಬೃಹತ್ ಕೆರೆಯಾಗಿಬಿಟ್ಟಿದೆ. ಸಿಲಿಕಾನ್ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳು ಜಲಾವೃತಗೊಂಡಿವೆ. ರಸ್ತೆಗಳು ನೀರಿನಲ್ಲಿ ಮುಳುಗಿ ವಾಹನ ಸವಾರರು ಕೈಚೆಲ್ಲಿದರು. ವೀಕೆಮಡ್ ರಜೆ ಮುಗಿಸಿ ಊರಿನಿಂದ ಬರುತ್ತಿದ್ದ ವಾಹನ ಸವಾರರು ಬೆಳ್ಳಂಬೆಳಗ್ಗೆಯೇ ನೆಲಮಂಗಲ, ಗೊರಗುಂಟೆಪಾಳ್ಯ, ಸಿಲ್ಕ್ ಬೋರ್ಡ್, ಮೈಸೂರು ರಸ್ತೆ ಜಂಕ್ಷನ್ ಮುಂತಾದ ಕಡೆ ಉಂಟಾದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದು ಪರದಾಡಿದರು.
ಚಂಡಮಾರುತ ವೈಪರೀತ್ಯದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಬಹುತೇಕ ಒಳನಾಡು ಜಿಲ್ಲೆಗಳ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಯ ಆರ್ಭಟ ಕೂಡ ಮುಂದುವರಿಯಲಿದೆ. ರಾಜ್ಯದ ವಿವಿಧೆಡೆ ಭಾರೀ ಮಳೆ ದಾಖಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆ ಮಳೆ ಹಾನಿ ಉಂಟಾಗಿದೆ. ಮುಂದಿನ 5 ದಿನ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ.
ಬೆಂಗಳೂರಿನಾದ್ಯಂತ ದಾಖಲೆಯ ಮಳೆಯಾಗಿದ್ದು, ರಾತ್ರಿಯಿಂದ ಬೆಳಿಗ್ಗೆ 5:30 ರವರೆಗೆ 104 ಮಿ.ಮೀ. ಮಳೆಯಾದುದು ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ದಾಖಲಾಗಿರುವ ಅತಿ ಹೆಚ್ಚು ಮಳೆ ಇದಾಗಿದೆ. ಹವಾಮಾನ ಇಲಾಖೆ ಮುಂದಿನ 5 ದಿನ ಮತ್ತಷ್ಟು ಮಳೆಯಾಗುವ ಎಚ್ಚರಿಕೆ ನೀಡಿದ್ದು, ನಗರದಲ್ಲಿ ರಾತ್ರಿ ಅಥವಾ ಸಂಜೆ ಬಳಿಕ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಕೂಡ ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕೆಂಗೇರಿ : 132mm
ವದೇರಹಳ್ಳಿ : 131mm
ಚಿಕ್ಕಬಾಣಾವರ : 127mm
ಕೊಡತಿ : 125mm
ಸೋಮಶೆಟ್ಟಿಹಳ್ಲಿ : 121mm
ಮಾದನಾಯಕನಹಳ್ಳಿ : 119mm
ಮಾದಾವರ : 106mm
ಯಲಹಂಕ : 103mm
ಕೊಡಿಗೆಹಳ್ಳಿ : 100mm
ಜಿಲ್ಲೆಗಳಿಗೂ ಅಲರ್ಟ್
ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಈ ಜಿಲ್ಲೆಗಳಿಗೆ ನಾಳೆ ನಾಡಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೆಲ ಭಾಗದಲ್ಲಿ ಆರೆಂಜ್ ಅಲರ್ಟ್ ನೀಡಿದ್ದು, ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Bengaluru Rain: ರಾತ್ರಿಯಿಡೀ ಧಾರಾಕಾರ ಮಳೆ, ತತ್ತರಿಸಿದ ಬೆಂಗಳೂರು, ಕೆರೆಗಳಾದ ರಸ್ತೆಗಳು