ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗುವುದೇ?
ಕಳೆದ 9 ವರ್ಷಗಳಿಂದ ಪಾಲಿಸಿಕೊಂಡು ಬಂದ ಸಂಸತ್ತಿನ ಸಂಪ್ರದಾಯವೊಂದು ಈ ಬಾರಿ ಮುರಿಯಲಾಗುತ್ತದೆಯೇ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ. ಯಾಕೆಂದರೆ ಈ ಬಾರಿಯ ಬಜೆಟ್ ಮಂಡನೆ ದಿನ ಭಾನುವಾರ ಬರಲಿದೆ. ಸಾಮಾನ್ಯವಾಗಿ ಭಾನುವಾರವನ್ನು ರಾಜಾ ದಿನವಾಗಿ ಪರಿಗಣಿಸಲಾಗಿದೆ. ಒಂದು ವೇಳೆ ಈ ದಿನ ಬಜೆಟ್ ಮಂಡನೆಯಾಗಲಿ ಅಥವಾ ಆಗದೇ ಇರಲಿ ಅದು ದಾಖಲೆಯಾಗಿ ಉಳಿಯಲಿದೆ.