ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysuru dasara 2025: ಚಾಮುಂಡಿ ದೇಗುಲ ಹಿಂದೂಗಳದ್ದು ಆಗಿರದಿದ್ದರೆ, ಮುಜರಾಯಿಗೆ ಸೇರುತ್ತಿರಲಿಲ್ಲ: ಪ್ರಮೋದಾದೇವಿ ಒಡೆಯರ್‌

Pramoda Devi Wadiyar: ಚಾಮುಂಡೇಶ್ವರಿ ದೇವಾಲಯವು ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರು, ಈ ರೀತಿಯ ಅಸಂವೇದನಶೀಲ, ಅನಗತ್ಯ ಹೇಳಿಕೆಗಳನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.

ಚಾಮುಂಡಿ ದೇಗುಲ ಹಿಂದೂಗಳದ್ದು ಆಗಿರದಿದ್ದರೆ, ಮುಜರಾಯಿಗೆ ಸೇರುತ್ತಿರಲಿಲ್ಲ

Prabhakara R Prabhakara R Aug 27, 2025 8:31 PM

ಬೆಂಗಳೂರು: ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಬಾನು ಮುಷ್ತಾಕ್‌ ಅವರ ಆಯ್ಕೆ ಬಗ್ಗೆ ಟೀಕೆಗಳು ಕೇಳಿಬರುತ್ತಿರುವ ಬಗ್ಗೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯ‌ರ್ (Pramoda Devi Wadiyar) ಅವರು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಕರ ಆಯ್ಕೆಗೆ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಸರ್ಕಾರ ನಡೆಸುವ ನಾಡಹಬ್ಬ ದಸರಾ (Mysuru dasara 2025) ಅಸಂಗತವಾದ ಕಾರಣಗಳಿಂದ ವಿವಾದಕ್ಕೀಡಾಗಿರುವುದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ಇನ್ನು ಚಾಮುಂಡೇಶ್ವರಿ ದೇವಾಲಯವು ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿರುವ ಅವರು, ಈ ರೀತಿಯ ಅಸಂವೇದನಶೀಲ, ಅನಗತ್ಯ ಹೇಳಿಕೆಗಳನ್ನು ತಪ್ಪಿಸಬಹುದಾಗಿತ್ತು. ಚಾಮುಂಡಿ ದೇಗುಲ ಹಿಂದೂ ದೇವಸ್ಥಾನವಾಗಿರದಿದ್ದರೆ, ಈಗ ಮುಜರಾಯಿ ಇಲಾಖೆ ಅಧೀನದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ದಸರಾ ಒಂದು ಸಾಂಸ್ಕೃತಿಕ ಆಚರಣೆ (cultural celebration) ಆಗಿದೆ. ಆದರೆ, ರಾಜ್ಯವು ತನ್ನ ಸ್ವಭಾವದಿಂದ, ಧಾರ್ಮಿಕ ಶುದ್ಧತೆ, ಸಂಪ್ರದಾಯ ಅಥವಾ ಪರಂಪರೆಗಳನ್ನು ಇಂತಹ ಹಬ್ಬವನ್ನು ಆಚರಿಸುವಾಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಸರಾ ಮಹೋತ್ಸವ ಸೇರಿ ಕರ್ನಾಟಕ ಸರ್ಕಾರವು ಆಯೋಜಿಸಿರುವ ಹಬ್ಬಗಳು ಧರ್ಮಶಾಸ್ತ್ರದಂತೆ ನಡೆಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇವೆಲ್ಲವು ವ್ಯವಸ್ಥಿತವಾಗಿ ಮಾತ್ರ ನಡೆಯುತ್ತವೆ. ಆದರೆ ನಾವು ಧಾರ್ಮಿಕ ಆಚರಣೆಗಳನ್ನು ಖಾಸಗಿಯಾಗಿ ಪ್ರಾಚೀನ ಧಾರ್ಮಿಕ ಸಂಪ್ರದಾಯಗಳು ಮತ್ತು ಆಚಾರಗಳಿಗೆ ಅನುಸಾರ ಮುಂದುವರಿಸುತ್ತಿದ್ದೇವೆ.

ಈ ಸುದ್ದಿಯನ್ನೂ ಓದಿ | Mysuru Dasara 2025: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದ ಡಿ.ಕೆ. ಶಿವಕುಮಾರ್‌!

ಮೈಸೂರು ಅರಮನೆ ಮುಂದೆ ಆಯೋಜಿಸುವ ದಸರಾ ನಮ್ಮ ಪರಂಪರೆ, ಆಚಾರಗಳಿಗೆ ಧಕ್ಕೆ ತರದಂತೆ ವ್ಯವಸ್ಥಿತವಾಗಿ ನಡೆಯಬೇಕು. ಗಣೇಶ್ ಚತುರ್ಥಿಯ ಹಬ್ಬವು ಎಲ್ಲಾ ಅಡಚಣೆಗಳು, ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳನ್ನು ಪರಿಹರಿಸುತ್ತವೆ ಮತ್ತು ಶೀಘ್ರದಲ್ಲೇ ಒಮ್ಮತ ಮೂಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.