New Year Celebration: ಹೊಸ ವರ್ಷದ ಆಚರಣೆಗೆ ಈ ತಾಣಗಳಿಗಿಲ್ಲ ಪ್ರವೇಶ
ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಬಂದ್ ಆಗಿರಲಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಪ್ರವಾಸಿತಾಣಗಳಿಗೆ ಡಿ.31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.
ನಂದಿ ಹಿಲ್ಸ್ -
ಬೆಂಗಳೂರು/ಚಿಕ್ಕಮಗಳೂರು, ಡಿ. 29: ಹೊಸ ವರ್ಷದ (New Year Celebration) ಹಿನ್ನೆಲೆಯಲ್ಲಿ ಪ್ರವಾಸಿಗರು ಕಿಕ್ಕಿರಿಯುವ ಸ್ಥಳಗಳಲ್ಲಿ ಪಾರ್ಟಿ ಮಾಡಲು ನೀವು ಹೊರಟಿದ್ದರೆ ಪ್ಲಾನ್ ಮರುಪರಿಶೀಲಿಸಿ. ಆ ಸ್ಥಳಗಳು ಅಂದು ಓಪನ್ ಇರುತ್ತಾ ಅಥವಾ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆಯಾ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಯಾಕೆಂದ್ರೆ ಬೆಂಗಳೂರು ಸಮೀಪದ ನಂದಿ ಗಿರಿಧಾಮ (Nandi hills), ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ (Mullayyanagiri) ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಟೂರಿಸ್ಟ್ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ನಂದಿ ಗಿರಿಧಾಮಕ್ಕಿಲ್ಲ ಪ್ರವೇಶ
ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿ ಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಬಂದ್ ಆಗಿರಲಿದೆ. ಅತಿಥಿಗೃಹ ಬುಕ್ ಮಾಡಿದವರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಿಷೇಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರರಿಂದ ಆದೇಶ ಮಾಡಿದ್ದಾರೆ. ಕುಡಿದು ಪ್ರವಾಸಿಗರ ಮೋಜು ಮಸ್ತಿ ಮಾಡೋದನ್ನು ತಡೆಯುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ನಿರ್ಬಂಧ
ನ್ಯೂ ಇಯರ್ ಆಚರಣೆಗೆ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಅಲರ್ಟ್ ಆಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಪ್ರವಾಸಿತಾಣಗಳಿಗೆ ಡಿ.31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ಸ್ಥಾಳಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರವಾಸಿತಾಣಗಳಲ್ಲಿ ಪಾರ್ಟಿ, ನ್ಯೂ ಇಯರ್ ಆಚರಣೆಗೂ ನಿರ್ಬಂಧ ಹೇರಲಾಗಿದೆ.
New Year: ಹೊಸ ವರ್ಷಕ್ಕೆ ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ?; ಇಲ್ಲಿದೆ ನೋಡಿ ಟಿಪ್ಸ್
ಬನ್ನೇರುಘಟ್ಟ ಮೃಗಾಲಯ ಓಪನ್
ಕ್ರಿಸ್ ಮಸ್ ಮತ್ತು ಹೊಸವರ್ಷಾಚರಣೆ ರಜೆ ಹಿನ್ನೆಲೆ ಮಂಗಳವಾರವೂ ಬನ್ನೇರುಘಟ್ಟ ಮೃಗಾಲಯ ಓಪನ್ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಝೂಗೆ ಭೇಟಿ ನೀಡುವ ಸಾಧ್ಯತೆ ಹಿನ್ನಲೆ ವಾಡಿಕೆಯ ರಜೆ ದಿನವೂ ಮೃಗಾಲಯ ಓಪನ್ ಇರಲಿದೆ. ಪ್ರವಾಸಿಗರಿಗೆ ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ನೋಡಲು ಅವಕಾಶ ಇರಲಿದ್ದು, ಆನ್ಲೈನ್ ಮೂಲಕವೂ ಡಿಕೆಟ್ ಪಡೆದುಕೊಳ್ಳಬಹುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ತಿಳಿಸಿದೆ.