Gururaj Gantihole: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರು ಅಪಘಾತ, ಮೂರು ವಾಹನ ಜಖಂ
Gururaj Gantihole: ಶಾಸಕರ ಕಾರಿನ ಮುಂದೆ ಚಲಿಸುತ್ತಿದ್ದ ಕಾರಿನ ಮುಂದೆ ಜಾನುವಾರು ಅಡ್ಡ ಬಂದ ಕಾರಣ ಅವಘಡ ನಡೆದಿದೆ. ಸರಣಿ ಅಪಘಾತದಲ್ಲಿ ಶಾಸಕರ ಕಾರು ಸೇರಿದಂತೆ 3 ಕಾರುಗಳು ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಶಾಸಕ ಗುರುರಾಜ್ ಗಂಟಿಹೊಳೆ ಕಾರು

ಶಿವಮೊಗ್ಗ : ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ (MLA Gururaj Gantihole) ಅವರ ಕಾರು ಅಪಘಾತಕ್ಕೀಡಾಗಿರುವ (Road Accident) ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ (Rippanpete) ಸಮೀಪದ ಕೋಡೂರಿನಲ್ಲಿ ನಡೆದಿದೆ. ನಿನ್ನೆ (ಜೂನ್ 20) ಸಂಜೆ ಅವರು ಉಡುಪಿ ಕಡೆಗೆ ತೆರಳುವ ವೇಳೆ ಅಪಘಾತ ನಡೆದಿದೆ.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರು ಸೇರಿ ಮೂರು ಕಾರುಗಳು ಶುಕ್ರವಾರ ಸಂಜೆ ಕೋಡೂರು ಬಳಿ ಅಪಘಾತಕ್ಕೀಡಾಗಿದೆ. ಶಾಸಕರ ಕಾರಿನ ಮುಂದೆ ಚಲಿಸುತ್ತಿದ್ದ ಕಾರಿನ ಮುಂದೆ ಜಾನುವಾರು ಅಡ್ಡ ಬಂದ ಕಾರಣ ಅವಘಡ ನಡೆದಿದೆ. ಸರಣಿ ಅಪಘಾತದಲ್ಲಿ ಶಾಸಕರ ಕಾರು ಸೇರಿದಂತೆ 3 ಕಾರುಗಳು ಸ್ವಲ್ಪ ಮಟ್ಟಿಗೆ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಶಾಸಕ ಗಂಟಿಹೊಳೆ ಅವರು ಉಡುಪಿಯತ್ತ ಪ್ರಯಾಣ ಮೊಟಕುಗೊಳಿಸಿ ಮತ್ತೊಂದು ಕಾರಿನಲ್ಲಿ ಬೈಂದೂರಿನ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ. ಗುರುರಾಜ್ ಗಂಟಿಹೊಳೆ ಅವರು ʼವಿಶ್ವವಾಣಿʼಯ ಅಂಕಣಕಾರರೂ ಆಗಿದ್ದಾರೆ.
ಇದನ್ನೂ ಓದಿ: Minister Shivaraj Thangadgi: ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ವಾಹನ ಅಪಘಾತ; ASIಗೆ ಗಂಭೀರ ಗಾಯ