ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

LPG ಇ-ಕೆವೈಸಿ ಪೂರ್ಣಗೊಳಿಸಲು ಇಂದೇ ಕೊನೆ ದಿನ; ಮಾಡದಿದ್ದರೆ ದುಬಾರಿಯಾಗಲಿದೆ ಸಿಲಿಂಡರ್!

ದೇಶೀಯ ಅಡುಗೆ ಅನಿಲ (LPG) ಗ್ರಾಹಕರು ತಮ್ಮ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂದು, ಸೆಪ್ಟೆಂಬರ್ 7, 2026 ಅಂತಿಮ ಗಡುವಾಗಿದೆ. . ಇನ್ನೂ ಕೆವೈಸಿ ಮಾಡಿಸಿಕೊಳ್ಳದವರು ತಕ್ಷಣವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

LPG ಇ-ಕೆವೈಸಿ ಪೂರ್ಣಗೊಳಿಸಲು ಇಂದೇ ಕೊನೆ ದಿನ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 7, 2026 8:37 AM

ಬೆಂಗಳೂರು: ದೇಶೀಯ ಅಡುಗೆ ಅನಿಲ (LPG) ಗ್ರಾಹಕರು ತಮ್ಮ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಆಧಾರಿತ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಂದು, ಸೆಪ್ಟೆಂಬರ್ 7, 2026 ಅಂತಿಮ ಗಡುವಾಗಿದೆ. . ಇನ್ನೂ ಕೆವೈಸಿ ಮಾಡಿಸಿಕೊಳ್ಳದವರು ತಕ್ಷಣವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದ್ದು, ಒಂದು ವೇಳೆ ಇಂದು ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಗ್ಯಾಸ್ ಸಬ್ಸಿಡಿ ತಡೆಹಿಡಿಯಲಾಗುವುದು ಮಾತ್ರವಲ್ಲದೆ, ಸಿಲಿಂಡರ್ ವಿತರಣೆಯಲ್ಲೂ ದೊಡ್ಡ ಮಟ್ಟದ ವ್ಯತ್ಯಯ ಎದುರಾಗಲಿದೆ ಎಂದು ಎಚ್ಚರಿಸಲಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ಸರ್ಕಾರ ಮತ್ತು ಗ್ಯಾಸ್ ಕಂಪನಿಗಳು ಹಲವು ಬಾರಿ ಗಡುವನ್ನು ವಿಸ್ತರಿಸುತ್ತಾ ಬಂದಿದ್ದವು. ಮೊದಲಿಗೆ ಆಗಸ್ಟ್ 16 ರಂದು ಕೊನೆಯ ದಿನ ಎನ್ನಲಾಗಿತ್ತು. ತದನಂತರ ಅದನ್ನು ಆಗಸ್ಟ್ 23, ಬಳಿಕ ಆಗಸ್ಟ್ 31 ಕ್ಕೆ ವಿಸ್ತರಿಸಲಾಯಿತು. ಆದರೆ ಲಕ್ಷಾಂತರ ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದ್ದರಿಂದ, ಗ್ಯಾಸ್ ಏಜೆನ್ಸಿಗಳ ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಸೆಪ್ಟೆಂಬರ್ 7ರ ತನಕ ಅಂತಿಮ ಅವಕಾಶ ನೀಡಲಾಗಿದೆ.

ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡುವುದು ಹೇಗೆ?

  • ನಿಗದಿತ ಆಪ್‌ ಬಳಕೆ ಮಾಡಿ
  • ಆಧಾರ್ ಸಂಖ್ಯೆ ಹಾಗೂ ಗ್ಯಾಸ್ ಸಂಪರ್ಕದ ವಿವರಗಳನ್ನು ನಮೂದಿಸಿ.
  • ಅಗತ್ಯವಿದ್ದರೆ Aadhaar Face RD ಡೌನ್‌ಲೋಡ್ ಮಾಡಿ.
  • ನಂತರ ಮುಖದ ಸ್ಕ್ಯಾನ್ ಪೂರ್ಣಗೊಳಿಸಿದ ಬಳಿಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಆಫ್‌ಲೈನ್‌ನಲ್ಲಿ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಕೆವೈಸಿ ಮಾಡಲು ಸಾಧ್ಯವಾಗದವರು ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ಆಧಾರ್ ಹಾಗೂ ಗ್ಯಾಸ್ ಪಾಸ್‌ಬುಕ್ ನೀಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನೀಡಿದ ಬಳಿಕ ಅಗತ್ಯವಿರುವ ಬಯೋಮೆಟ್ರಿಕ್ ಅಥವಾ ಮುಖದ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದಲ್ಲದೆ, ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕವೂ ಇ-ಕೆವೈಸಿ ಪೂರ್ಣಗೊಳಿಸುವ ಅವಕಾಶವಿದೆ.

ಎಲ್‌ಪಿಜಿ ಸಿಲಿಂಡರ್‌ ಬುಕಿಂಗ್‌ ನಿಯಮದಲ್ಲಿ ಬದಲಾವಣೆ; ಸಬ್ಸಿಡಿ ಪಡೆಯಲು ಇ-ಕೆವೈಸಿ ಕಡ್ಡಾಯ?

ಇ-ಕೆವೈಸಿ ಮಾಡದಿದ್ದರೆ ಏನಾಗಲಿದೆ?

ಗಡುವು ಮುಗಿದ ನಂತರವೂ ಇ-ಕೆವೈಸಿ ಮಾಡದ ಗ್ರಾಹಕರಿಗೆ ತೈಲ ಕಂಪನಿಗಳು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಿವೆ. ಗೃಹಬಳಕೆಯ ಸಿಲಿಂಡರ್‌ಗಳಿಗೆ ಸಿಗುವ ರಿಯಾಯಿತಿ ದರ ರದ್ದಾಗಿ, ಗ್ರಾಹಕರು ಕಮರ್ಷಿಯಲ್ (ವಾಣಿಜ್ಯ) ದರ ತೆರಬೇಕಾಗಬಹುದು.

ಸಬ್ಸಿಡಿ ಸ್ಥಗಿತ: ಸರ್ಕಾರದ ಕಡೆಯಿಂದ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣ ಸಂಪೂರ್ಣವಾಗಿ ನಿಲ್ಲುತ್ತದೆ.

ಖಾತೆ ಅಮಾನತು: ನಿಯಮ ಮೀರಿ ಇ-ಕೆವೈಸಿ ಮಾಡದ ಗ್ರಾಹಕರ ಸಂಪರ್ಕವನ್ನು ತಾತ್ಕಾಲಿಕವಾಗಿ ಅಮಾನತು (Suspend) ಮಾಡುವ ಅಧಿಕಾರವನ್ನು ವಿತರಕರಿಗೆ ನೀಡಲಾಗಿದೆ.