Farmers Protest: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ; ರೈತರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ
Tiptur News: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೋಸಿ ಹೋದ ಹಾಲ್ಕುರಿಕೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು, ಹಾಲ್ಕುರಿಕೆ ಪವರ್ ಸ್ಟೇಷನ್‌ಗೆ ಮುತ್ತಿಗೆ ಹಾಕಿದ್ದು, ಕಳೆದ ಎರಡು ತಿಂಗಳಿನಿಂದ ಸಮರ್ಪಕ ವಿದ್ಯುತ್ ನೀಡದೆ ರೈತರ ಬೆಳೆಗಳ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ -
ತಿಪಟೂರು, ಏ.25: ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೋಸಿ ಹೋದ ಹಾಲ್ಕುರಿಕೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು, ಹಾಲ್ಕುರಿಕೆ ಪವರ್ ಸ್ಟೇಷನ್‌ಗೆ ಮುತ್ತಿಗೆ ಹಾಕಿ (Farmers Protest) ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ತಿಂಗಳಿನಿಂದ ಸಮರ್ಪಕ ವಿದ್ಯುತ್ ನೀಡದೆ ರೈತರ ಬೆಳೆಗಳ ಜತೆ ಚೆಲ್ಲಾಟವಾಡುತ್ತಿದೆ ಬೆಸ್ಕಾಂ ಇಲಾಖೆ ಎಂದು ರೈತರು ದೂರಿದ್ದಾರೆ.
ತೆಂಗು, ಅಡಿಕೆ ಜತೆ ಅಲ್ಪಾವಧಿ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಪ್ರತಿ ದಿನ 7 ಗಂಟೆ ವಿದ್ಯುತ್ ಪೂರೈಸುತ್ತಿದ್ದ ಬೆಸ್ಕಾಂ ಇಲಾಖೆಯು ಕೆಲ ತಿಂಗಳುಗಳಿಂದ ಸರಿಯಾಗಿ ವಿದ್ಯುತ್ ಸರಬರಾಜು ಮಾಡದೆ ಬೆಳೆಗಳೆಲ್ಲ ಒಣಗಿ ಹೋಗುತ್ತಿರುವುದರಿಂದ ರೊಚ್ಚಿಗೆದ್ದ ರೈತರು ಹಾಲ್ಕುರಿಕೆ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಏ. 29ರಂದು ತಿಪಟೂರಿನ ಕೆಐಟಿ ಕಾಲೇಜಿನಲ್ಲಿ ʼಸಿಸ್ಕೋ ಎಕ್ಸಲೆನ್ಸ್ ಸೆಂಟರ್ʼ ಉದ್ಘಾಟನೆ
ತಿಪಟೂರು: ಜಾಗತಿಕ ತಂತ್ರಜ್ಞಾನ ದೈತ್ಯ ʼಸಿಸ್ಕೋʼ (Cisco) ಮತ್ತು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ (KIT) ಸಹಯೋಗದಲ್ಲಿ ನಿರ್ಮಾಣವಾಗಿರುವ ʼಸಿಸ್ಕೋ ಎಕ್ಸಲೆನ್ಸ್ ಸೆಂಟರ್ʼ (Cisco Centre of Excellence) ಏಪ್ರಿಲ್ 29ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಖಜಾಂಚಿ ಶಿವಪ್ರಸಾದ್ ತಿಳಿಸಿದರು. ಕಲ್ಪತರು ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯ ತಾಂತ್ರಿಕ ಶಿಕ್ಷಣ ವಿಭಾಗವು ನಮ್ಮ ಭಾಗದ ಎಂಜಿನಿಯರಿಂಗ್ ಶಿಕ್ಷಣದ ದಿಕ್ಕನ್ನೇ ಬದಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 1990 ರ ದಶಕದ ಆರಂಭದಲ್ಲಿ ಭಾರತಕ್ಕೆ ಪ್ರವೇಶಿಸಿದ ಸಿಸ್ಕೋ ಸಂಸ್ಥೆಯು ಇಂದು ನೆಟ್‌ವರ್ಕಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಬೆಳೆದಿದೆ. ಬೆಂಗಳೂರನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ಸಿಸ್ಕೋ, ಭಾರತವನ್ನು ತನ್ನ ಸಂಶೋಧನೆ ಮತ್ತು ಅಭಿವೃದ್ಧಿಯ (R&D) ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಸೈಬರ್ ಸೆಕ್ಯೂರಿಟಿ ಮತ್ತು ಕೌಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಸಿಸ್ಕೋ ಮಾಡುತ್ತಿರುವ ಅವಿಷ್ಕಾರಗಳು ಭಾರತದ ಡಿಜಿಟಲ್ ಕ್ರಾಂತಿಗೆ ಭದ್ರ ಬುನಾದಿ ಹಾಕಿದೆ ಎಂದರು.
ಕಲ್ಪತರು ತಾಂತ್ರಿಕ ಮಹಾವಿದ್ಯಾಲಯವು ಯಾವಾಗಲೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ, ಸಿಸ್ಕೋ ಅಂತಹ ಜಾಗತಿಕ ಸಂಸ್ಥೆಯು ನಮ್ಮ ಕಾಲೇಜಿನೊಂದಿಗೆ ಕೈ ಜೋಡಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಉದ್ಯಮದಲ್ಲಿ ಬಳಸುವ ನೈಜ ತಂತ್ರಜ್ಞಾನಗಳ ಮೇಲೆ ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ. ಸಿಸ್ಕೋ ಪ್ರಮಾಣೀಕೃತ ತರಬೇತಿಯು ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ನೆರವಾಗಲಿದೆ. ಕಾಲೇಜಿನಲ್ಲೇ ಅತ್ಯಾಧುನಿಕ ಲ್ಯಾಬ್ ಸೌಲಭ್ಯ ದೊರೆಯುವುದರಿಂದ ಹೊಸ ಆವಿಷ್ಕಾರಗಳಿಗೆ ಒಳ್ಳೆಯ ವೇದಿಕೆಯಾಗಲಿದೆ ಎಂದರು.
ಬೆಂಗಳೂರಿನಲ್ಲಿ ಕಟ್ಟಡಗಳ ಎತ್ತರದ ನಿರ್ಬಂಧ ಸಡಿಲಿಸಿ; ಕೇಂದ್ರ ರಕ್ಷಣಾ ಸಚಿವರಿಗೆ ಡಿ.ಕೆ.ಶಿವಕುಮಾರ್ ಮನವಿ
ಕಾರ್ಯಕ್ರಮದಲ್ಲಿ ಸಿಸ್ಕೋ ಸಂಸ್ಥೆಯು ಭಾರತ ಮತ್ತು ಸಾರ್ಕ್ ಮುಖ್ಯಸ್ಥ ಇಶ್ವಿಂದರ್ ಸಿಂಗ್, ಎಪಿಜೆಪಿ ಮುಖ್ಯಸ್ಥೆ ಪ್ರಿಯಾಂಕಾ ಭಗತ್, ಸಿಸ್ಕೋ ನೆಟ್‌ವರ್ಕ್ ಅಕಾಡೆಮಿಯ ದಿನೇಶ್ ಕುಮಾರ್ ಪಾಣಿಗ್ರಾಹಿ ಮತ್ತು ಎಡ್ ಕ್ರಿಯೇಟ್ ಫೌಂಡೇಶನ್‌ನ ರಾಮ್ ಗೌತಮ್ ಸೀಲ್ಡ್ ಭಾಗವಹಿಸಲಿದ್ದಾರೆ. ಸಂತೋಷದ ವಿಷಯವೇನೆಂದರೆ ನಮ್ಮ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ನಾಲ್ಕನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನಸಿ ಎಂ. ಎಂಬ ವಿದ್ಯಾರ್ಥಿನಿಯು ಕಾರ್ಬನ್ ಡೈಯಾಕ್ಸೈಡನ್ನು ಹೀರಿಕೊಳ್ಳುವ ಕೃತಕ ಮರವನ್ನು ಆವಿಷ್ಕಾರಗೊಳಿಸಲು ಜಪಾನ್ ದೇಶದ ವಕೀನೋವ ಯುನಿವರ್ಸಿಟಿಯು ಕರೆಸಿಕೊಳ್ಳುತ್ತಿರುವುದು ಸಂಸ್ಥೆಯ ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಟರಾಜ್, ಕಾರ್ಯದರ್ಶಿ ಸಂಗಮೇಶ್, ಬಸವರಾಜ್ ಬಾಗೇಪಲ್ಲಿ ನಟರಾಜು, ಉಮಾಶಂಕರ್, ಜಗದೀಶ್, ಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.