Russian woman rescued: ರಷ್ಯಾ ಮಹಿಳೆ ಮತ್ತು ಮಕ್ಕಳನ್ನು ನೋಡಲು ತುಮಕೂರಿಗೆ ಬಂದ ಪತಿಗೆ ನಿರಾಸೆ
Russian woman rescued: ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳು ಸದ್ಯ ತುಮಕೂರಿನ ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿದ್ದಾರೆ. ಪತ್ನಿ ನೀನಾ ಕುಟೀನಾ ಹಾಗೂ ಮಕ್ಕಳನ್ನು ಭೇಟಿಯಾಗಲು ಪತಿ ಡ್ರೋರ್ ಗೋಲ್ಡ್‌ಸ್ಟೆನ್‌ಗೆ ಅಧಿಕಾರಿಗಳು ಅವಕಾಶ ನೀಡಿಲ್ಲ. ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.


ತುಮಕೂರು: ಗೋಕರ್ಣದ ರಾಮತೀರ್ಥ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ನಗರದ ಅಕ್ರಮ ವಲಸಿಗರ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಇದೀಗ ಪತ್ನಿ ಮತ್ತು ಮಕ್ಕಳ (Russian woman rescued) ಭೇಟಿಗೆ ಬಂದ ಪತಿಗೆ ನಿರಾಸೆಯಾಗಿದೆ. ಪತ್ನಿ ನೀನಾ ಕುಟಿನಾ ಹಾಗೂ ಮಕ್ಕಳನ್ನು ಭೇಟಿಯಾಗಲು ಪತಿ ಡ್ರೋರ್ ಗೋಲ್ಡ್‌ಸ್ಟೆನ್‌ಗೆ ಅಧಿಕಾರಿಗಳು ಅವಕಾಶ ನೀಡಿಲ್ಲ. ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಜುಲೈ 11 ರಂದು ಗೋಕರ್ಣ ಬಳಿಯ ಗುಹೆಯಲ್ಲಿ ಎರಡು ಮಕ್ಕಳ ಜತೆಗೆ ರಷ್ಯಾ ಮೂಲದ ಮಹಿಳೆ ಪತ್ತೆಯಾಗಿದ್ದಳು. ಮಹಿಳೆ ನಿನಾ ಕುಟಿನಾಳನ್ನು ರಕ್ಷಣೆ ಮಾಡಿ ತುಮಕೂರು ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಈ ವಿಚಾರ ತಿಳಿದ ನಿನಾ ಪತಿ ಡ್ರೋರ್, ಹುಡುಕಿಕೊಂಡು ತುಮಕೂರಿಗೆ ಬಂದಿದ್ದಾರೆ. ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿ ವಿವಿಧ ದೇಶದ ಮಹಿಳೆಯರೇ ಇರುವುದರಿಂದ ಪತಿ ಒಳಗೆ ಹೋಗಲು ಅವಕಾಶ ನೀಡಿಲ್ಲೆ ಎನ್ನಲಾಗಿದೆ.
7 ವರ್ಷ ಲಿವ್ ಇನ್ ಬಳಿಕ ಗುಹೆ ಸೇರಿದ್ದ ರಷ್ಯಾ ಮಹಿಳೆ!
ಗೋಕರ್ಣದ ರಾಮತೀರ್ಥ ದಟ್ಟಾರಣ್ಯದ ಗುಹೆಯಲ್ಲಿ ವಾಸವಿದ್ದ ರಷ್ಯಾ (Russia) ಮಹಿಳೆ ಕುರಿತು ದಿನಕ್ಕೊಂದು ಅಚ್ಚರಿ ವಿಚಾರಗಳು ಬಯಲಾಗುತ್ತಿದೆ. ಮಹಿಳೆ ನೀನಾ ಕುಟಿನಾ ರಷ್ಯಾ ಪ್ರಜೆಯಾಗಿದ್ದು, ಈಕೆ ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್‌ಸ್ಟೆನ್ ಎಂಬಾತನ ಜತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ.
ಮಾಧ್ಯಮಗಳೊಂದಿಗೆ ಇತ್ತೀಚೆಗೆ ಮಾತನಾಡಿದ್ದ ಪತಿ ಗೋಲ್ಡ್‌ಸ್ಟೆನ್, ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರವರೆಗೂ ನಾವಿಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದೆವು. ವರ್ಷದಲ್ಲಿ ಆರು ತಿಂಗಳು ಗೋವಾದಲ್ಲಿ ಇರುತ್ತಿದ್ದೆವು. ಇಬ್ಬರೂ ಮಕ್ಕಳೊಂದಿಗೆ ದೊಡ್ಡದಾದ ವಿಲ್ಲಾದಲ್ಲಿ ವಾಸವಾಗಿದ್ದೆವು. 2019ರಿಂದಲೂ ನಾನು ಆಕೆಗೆ ಪ್ರತಿ ತಿಂಗಳು 400 ಡಾಲರ್ (3.5 ಲಕ್ಷ) ಹಣವನ್ನು ಕೊಡುತ್ತಿದ್ದೆ. ಆದರೆ 2024ರ ಡಿಸೆಂಬರ್‌ನಲ್ಲಿ ನೀನಾ ಯಾವುದೇ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು. ಬಳಿಕ ನಾನು ಪಣಜಿಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿದೆ. ಬಳಿಕ ಮಾರ್ಚ್ ತಿಂಗಳಲ್ಲಿ ಆಕೆ ಮಕ್ಕಳ ಜೊತೆಗೆ ಗೋಕರ್ಣದಲ್ಲಿ ಇರುವುದು ಗೊತ್ತಾಗಿದೆ ಎಂದು ತಿಳಿಸಿದ್ದರು.
ನನ್ನ ಮಕ್ಕಳನ್ನು ನನಗೆ ಕೊಡಿ, ಸುರಕ್ಷಿತವಾದ ಜಾಗದಲ್ಲಿ ನನ್ನ ಮಕ್ಕಳು ಬೆಳೆಯಬೇಕು. ಆರು ವರ್ಷವಾದರೂ ಶಿಕ್ಷಣ ಕೊಡಿಸಿಲ್ಲ. ಶಾಲೆಗೆ ಕಳುಹಿಸಬೇಕು ಎಂದಿದ್ದಾರೆ. ಆದರೆ ಮಹಿಳೆ ಪ್ರಿಯಕರನ ಜತೆ ಮಕ್ಕಳನ್ನು ಕಳಿಸಲು ನಿರಾಕರಿಸುತ್ತಿದ್ದು, ಮಕ್ಕಳು ಪರಿಸರದಲ್ಲೇ ಬೆಳೆಯಬೇಕು ಎಂದು ವಾದ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ, ನೀನಾ ಗುಹೆಯಲ್ಲಿದ್ದಾಗ ಒಂದು ಮಗುವಿಗೆ ಜನ್ಮ ನೀಡಿದ್ದು, ಈ ಎರಡು ಮಕ್ಕಳ ಹೊರತಾಗಿ ರಷ್ಯಾದಲ್ಲಿ ಇನ್ನೊಂದು ಮಗುವಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ | Russian woman rescued: ಗೋಕರ್ಣದ ದಟ್ಟಾರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾ ಮಹಿಳೆಯ ರಕ್ಷಣೆ!
ಇತ್ತೀಚಿಗೆ ಮಾತನಾಡಿದ್ದ ಮಹಿಳೆ ನೀನಾ, ನನ್ನ ದೊಡ್ಡ ಮಗ ಸಾವನ್ನಪ್ಪಿದ್ದ. ಹೀಗಾಗಿ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ವೀಸಾ ಅವಧಿ ಮುಗಿದಿತ್ತು. ಅದಕ್ಕಾಗಿ ನಾನು 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆ. ಪ್ರಕೃತಿಯ ಜತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ. ಬದುಕಿನಲ್ಲಿ ಚಂದದ ಅನುಭವ ಸಿಗಬೇಕು ಎನ್ನುವ ಕಾರಣಕ್ಕೆ ಗುಹೆಯಲ್ಲಿ ಪ್ರಕೃತಿಯ ಮಧ್ಯೆ ವಾಸವಾಗಿದ್ದೆ. ಇನ್ನೂ ನನ್ನ ಮಕ್ಕಳು ಯಾವತ್ತೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಒಳ್ಳೊಳ್ಳೆ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದೆವು ಎಂದಿದ್ದರು.