Digital India: ರೀಲ್ಸ್ ಮಾಡಿ ಬಹುಮಾನ ಗೆಲ್ಲುಲು ಇದೆ ಅವಕಾಶ: ಭಾರತ ಸರ್ಕಾರದಿಂದಲೇ ಆಫರ್
ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ಏನಿದ್ದರೂ ರೀಲ್ಸ್ (reels) ಗಳದ್ದೇ ಕಾರುಬಾರು. ಒಂದು ಕಡೆ ರೀಲ್ಸ್ ಮಾಡಿ ಹಣ ಸಂಪಾದಿಸುವವರು ಕೆಲವರಾದರೆ, ಇನ್ನೊಂದು ಕಡೆ ಇಂತವರಿಂದ ರೀಲ್ಸ್ ಮಾಡಿಸಿ ಲಾಭ ಮಾಡಿಕೊಳ್ಳುವವರು. ಇವರಿಗೆಲ್ಲ ಸರ್ಕಾರದಿಂದ (Digital India) ಈವರೆಗೆ ಯಾವ ಅವಕಾಶವೂ ಸಿಕ್ಕಿಲ್ಲ. ಆದರೆ ಈಗ ಭಾರತ ಸರ್ಕಾರವೇ (Indian Govt) ರೀಲ್ಸ್ ಮಾಡಿ ಹಣ ಸಂಪಾದಿಸಲು ಅವಕಾಶ ಮಾಡಿಕೊಟ್ಟಿದೆ. ರೀಲ್ಸ್ ಮಾಡುವ ಕ್ರೇಜ್ ಇರುವವರು ಇದರ ಸದುಪಯೋಗ ಪಡೆಯಬಹುದು. ವಿಶೇಷ ರೀಲ್ಸ್ (digital india) ತಯಾರಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 15,000 ರೂ. ವರೆಗೆ ನಗದು ಬಹುಮಾನ ಗೆಲ್ಲುವ ಅವಕಾಶವಿದೆ.


ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ಏನಿದ್ದರೂ ರೀಲ್ಸ್ (reels) ಗಳದ್ದೇ ಕಾರುಬಾರು. ಒಂದು ಕಡೆ ರೀಲ್ಸ್ ಮಾಡಿ ಹಣ ಸಂಪಾದಿಸುವವರು ಕೆಲವರಾದರೆ, ಇನ್ನೊಂದು ಕಡೆ ಇಂತವರಿಂದ ರೀಲ್ಸ್ ಮಾಡಿಸಿ ಲಾಭ ಮಾಡಿಕೊಳ್ಳುವವರು. ಇವರಿಗೆಲ್ಲ ಸರ್ಕಾರದಿಂದ ಈವರೆಗೆ ಯಾವ ಅವಕಾಶವೂ ಸಿಕ್ಕಿರಲಿಲ್ಲ. ಆದರೆ ಈಗ ಭಾರತ ಸರ್ಕಾರವೇ (Indian Govt) ರೀಲ್ಸ್ ಮಾಡಿ ಹಣ ಸಂಪಾದಿಸಲು ಅವಕಾಶ ಮಾಡಿಕೊಟ್ಟಿದೆ. ರೀಲ್ಸ್ ಮಾಡುವ ಕ್ರೇಜ್ ಇರುವವರು ಇದರ ಸದುಪಯೋಗ ಪಡೆಯಬಹುದು. ವಿಶೇಷ ರೀಲ್ಸ್ (digital india) ತಯಾರಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 15,000 ರೂ. ವರೆಗೆ ನಗದು ಬಹುಮಾನ (Digital India Reel Contest) ಗೆಲ್ಲುವ ಅವಕಾಶವಿದೆ.
ಡಿಜಿಟಲ್ ಇಂಡಿಯಾ ಯೋಜನೆ ಹತ್ತನೇ ವರ್ಷದ ಸಂಭ್ರಮದಲ್ಲಿದೆ ಭಾರತ ಸರ್ಕಾರ. ಇದರ ಅಂಗವಾಗಿ ವಿಶೇಷ ಅವಕಾಶವೊಂದನ್ನು ಭಾರತೀಯ ನಾಗರಿಕರಿಗೆ ಒದಗಿಸಿಕೊಟ್ಟಿದೆ. ಈ ಮೂಲಕ ನಗದು ಬಹುಮಾನವನ್ನೂ ಕೂಡ ಪಡೆಯಬಹುದು.
ಡಿಜಿಟಲ್ ಇಂಡಿಯಾ ಯೋಜನೆಯ 10ನೇ ವರ್ಷಾಚರಣೆಯ ಅಂಗವಾಗಿ ವಿಶೇಷ ರೀಲ್ಸ್ ತಯಾರಿಕಾ ಸ್ಪರ್ಧೆಯನ್ನು ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದವರಿಗೆ 15,000 ರೂ. ವರೆಗೆ ಬಹುಮಾನ ಗೆಲ್ಲುವ ಅವಕಾಶವಿದೆ. ಈ ಸ್ಪರ್ಧೆ ಈಗಾಗಲೇ ಆರಂಭಗೊಂಡಿದ್ದು, ರೀಲ್ಸ್ ಮಾಡಿ ಕಳುಹಿಸಲು ಆಗಸ್ಟ್ 1ರವರೆಗೆ ಅವಕಾಶವಿದೆ.
ಈ ಸ್ಪರ್ಧೆಯ ಮುಖ್ಯ ಉದ್ದೇಶ ಡಿಜಿಟಲ್ ಇಂಡಿಯಾ ಯೋಜನೆಯ ಮೂಲಕ ತಂತ್ರಜ್ಞಾನವು ಜನರ ಜೀವನದಲ್ಲಿ ತಂದಿರುವ ಬದಲಾವಣೆಗಳನ್ನು ತೋರಿಸುವುದಾಗಿದೆ. ಇದೇ ಈ ಸ್ಪರ್ಧೆಗೆ ಇರುವ ವಿಷಯ.
ಇದನ್ನೂ ಓದಿ: EV insurance: ಟೆಸ್ಲಾ ಕಾರುಗಳಿಗೆ ಹೆಚ್ಚಿನ ರಕ್ಷಣೆ ನೀಡಲು ಲಿಬರ್ಟಿಯಿಂದ ವಿಮೆ ಘೋಷಣೆ
ಇದರಲ್ಲಿ ಭಾರತದ ಯಾವುದೇ ನಾಗರಿಕರು ಭಾಗವಹಿಸಬಹುದು. ರೀಲ್ಸ್ ತಯಾರಿಸುವವರು, ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.
ರೀಲ್ಸ್ ತಯಾರಿಸುವಾಗ ಡಿಜಿಟಲ್ ತಂತ್ರಜ್ಞಾನವು ಜನರ ಜೀವನದಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆಗಳನ್ನು ತೋರಿಸಬೇಕು. ರೀಲ್ಸ್ ನ ಗಾತ್ರ 30 ರಿಂದ 60 ಸೆಕೆಂಡ್ ಗಳ ನಡುವೆ ಇರಬೇಕು.
ಈ ಸುದ್ದಿಯನ್ನೂ ಓದಿ: Viral Video: ಅಶ್ಲೀಲ ರೀಲ್‌ಗಳೇ ಇವರ ಬಂಡವಾಳ; ಇಬ್ಬರು ಇನ್‌ಸ್ಟಾಗ್ರಾಂ ಇನ್‌ಫ್ಲುವೆನ್ಸರ್ಸ್ ಅರೆಸ್ಟ್!
ರೀಲ್ಸ್ ಪೂರ್ಣಗೊಳಿಸಿದ ಮೇಲೆ https://www.mygov.in/ ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ ಸಲ್ಲಿಸಬಹುದಾಗಿದೆ. ಈ ಸ್ಪರ್ಧೆಯ ಮೊದಲ ಹತ್ತು ವಿಜೇತರಿಗೆ 15,000 ರೂ., ದ್ವಿತೀಯ ಬಹುಮಾನವಾಗಿ 25 ವಿಜೇತರಿಗೆ 10,000 ರೂ. ಹಾಗೂ ತೃತೀಯ ಬಹುಮಾನವಾಗಿ 50 ವಿಜೇತರಿಗೆ 5,000 ರೂ. ನಗದು ಪುರಸ್ಕಾರ ನೀಡಲಾಗುವುದು.