Chandrashekhar Siddi: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು
Chandrashekhar Siddi: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚಿದ ನಂತರ ಚಂದ್ರಶೇಖರ್ ಸಿದ್ದಿ ಅವರಿಗೆ ಇನ್ನಷ್ಟು ಅವಕಾಶಗಳು ಅರೆಸಿಬಂದಿದ್ದವು. ಕೆಲ ಧಾರಾವಾಹಿಗಳಲ್ಲಿ ಸಹ ಪಾತ್ರ ನಿಭಾಯಿಸಿದ್ದ ಅವರು, ಸ್ಥಳೀಯವಾಗಿ ಸಹ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು.


ಕಾರವಾರ: `ಕಾಮಿಡಿ ಕಿಲಾಡಿಗಳು' ಶೋ ಖ್ಯಾತಿಯ ಚಂದ್ರಶೇಖರ್ ಸಿದ್ದಿ (Chandrashekar Siddhi) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾನಸಿಕ ಆರೋಗ್ಯ ಹದಗೆಟ್ಟಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು. ಇಲ್ಲಿನ ತೆಲಂಗಾರ್ ಬಳಿಯ ಚಿಮ್ನಳ್ಳಿಯಲ್ಲಿ ವಾಸವಾಗಿದ್ದ ಅವರ ಪ್ರತಿಭೆಗೆ ಕಾಮಿಡಿ ಕಿಲಾಡಿಯಲ್ಲಿ ಸೂಕ್ತ ವೇದಿಕೆ ಸಿಕ್ಕಿತ್ತು. ನವಿರಾದ ಹಾಸ್ಯದ ಮೂಲಕ ಚಂದ್ರಶೇಖರ ಸಿದ್ದಿ ಜನರ ಮನ ಗೆದ್ದಿದ್ದರು.
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೂನಲ್ಲಿ ಮಿಂಚಿದ ನಂತರ ಅವರಿಗೆ ಇನ್ನಷ್ಟು ಅವಕಾಶಗಳು ಅರೆಸಿಬಂದಿದ್ದವು. ಕೆಲ ಧಾರಾವಾಹಿಗಳಲ್ಲಿ ಸಹ ಪಾತ್ರ ನಿಭಾಯಿಸಿದ್ದರು. ಸ್ಥಳೀಯವಾಗಿ ಸಹ ಉತ್ತಮ ಕಲಾವಿದರಾಗಿ ಚಂದ್ರಶೇಖರ ಸಿದ್ದಿ ಗುರುತಿಸಿಕೊಂಡಿದ್ದರು.
ಅದಾದ ನಂತರ ಪರದೆಯ ಹಿಂದೆ ಸರಿದ ಚಂದ್ರಶೇಖರ ಸಿದ್ದಿ ಊರ ಕಡೆ ಕೃಷಿ ಕೆಲಸ ಮಾಡಿಕೊಂಡಿದ್ದರು. ಉತ್ತಮ ಯೋಗಪಟುವಾಗಿದ್ದ ಅವರು ಕೂಲಿ ಕೆಲಸದಲ್ಲಿಯೂ ಮುಂದಿದ್ದರು. ತೇಲಂಗಾರಿನ ಮೈತ್ರಿ ಕಲಾ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿ ಸೇವೆ ಸಲ್ಲಿಸುತ್ತಿದ್ದರು.
ಈ ಸುದ್ದಿಯನ್ನೂ ಓದಿ | Self Harming: ಜನ್ಮದಿನದಂದೇ ನೇಣಿಗೆ ಶರಣಾದ ಕಲಬುರಗಿ ಕೇಂದ್ರೀಯ ವಿವಿ ವಿದ್ಯಾರ್ಥಿನಿ
ನಟನೆಯಲ್ಲಿ ಉತ್ತಮ ಭವಿಷ್ಯದ ಕನಸು ಕಂಡಿದ್ದ ಅವರು ಕಳೆದ ಕೆಲ ತಿಂಗಳುಗಳಿಂದ ಮಾನಸಿಕವಾಗಿ ಕುಗ್ಗಿದ್ದರು. ಸಣ್ಣಪುಟ್ಟ ಪಾತ್ರ ಅಭಿನಯನದ ಅವಕಾಶ ಸಿಕ್ಕರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಶುಕ್ರವಾರ ದಿಢೀರ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.