Rahul Gandhi: ಹಕ್ಕು ಪತ್ರ ವಿತರಣೆ ಮೂಲಕ 6ನೇ ಗ್ಯಾರಂಟಿ ಜಾರಿ: ರಾಹುಲ್ ಗಾಂಧಿ
Sadhana Samavesha: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2 ವರ್ಷಗಳ ಆಡಳಿತ ಪೂರೈಸಿದೆ. ಚುನಾವಣೆಯ ವೇಳೆಯಲ್ಲಿ ತಮಗೆ 5 ಗ್ಯಾರಂಟಿಗಳನ್ನು ಕೊಡುವ ಆಶ್ವಾಸನೆ ನೀಡಿದ್ದೆವು. ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಪ್ರಧಾನಮಂತ್ರಿಗಳು ಇದನ್ನೇ ಪುನರುಚ್ಚರಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಕರ್ನಾಟಕದ ಜನರು ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.


ವಿಜಯನಗರ: ನಾವು ಪ್ರಸ್ತುತ ಐದು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ದಲಿತರು, ಬುಡಕಟ್ಟು ಜನ ಇರುವ ಹಲವು ಪ್ರದೇಶಗಳು ಈವರೆಗೆ ಕಂದಾಯ ಗ್ರಾಮಗಳಾಗಿರಲಿಲ್ಲ. ಲಕ್ಷಾಂತರ ಪರಿಶಿಷ್ಟ ಜನಾಂಗ ಭೂಮಿ ಬಳಸುತ್ತಿದ್ದರೂ ಮಾಲೀಕತ್ವದ ಹಕ್ಕು ಇರಲಿಲ್ಲ. ಈ ವಿಷಯದ ಬಗ್ಗೆ ನಾನು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಗಮನಕ್ಕೆ ತಂದಿದ್ದೆ. ಭೂಮಿ ಅನುಭವದಲ್ಲಿರುವ ಎಲ್ಲರಿಗೂ ಹಕ್ಕು ಪತ್ರ ನೀಡುವುದು ನನ್ನ ಉದ್ದೇಶ ಆಗಿತ್ತು. ಭೂ ಮಾಲೀಕತ್ವದ ಗ್ಯಾರಂಟಿಯನ್ನು ಜಾರಿ ಮಾಡುವ ನಮ್ಮ ಉದ್ದೇಶವೇನಿತ್ತೋ, ಅದು ಇವತ್ತು ಈಡೇರಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರು.
ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು 1 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರ ಹಕ್ಕು ಪತ್ರಗಳನ್ನು ವರ್ಗಾವಣೆ ಮಾಡಿದೆ. ಇಂದಿರಾಗಾಂಧಿ ಅವರ ಕನಸು ಕೂಡ ಇದಾಗಿತ್ತು. ಅಲ್ಲದೇ 2000 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ.
ಮತ್ತೊಂದು ಅಂಶವೇನೆಂದರೆ ಬಡ ಕುಟುಂಬಗಳ ಜನರಿಗೆ ತಮ್ಮ ಕಂದಾಯ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳಲು ಕಷ್ಟವಾಗಿದೆ. ಹೀಗಾಗಿ ಎಲ್ಲಾ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ನಿರ್ದೇಶನ ನೀಡಲಾಗಿದೆ. ಇದರಿಂದ ಯಾವಾಗ ಬೇಕಿದ್ದರೂ ಡಿಜಿಟಲ್ ಕಾಪಿ ತೆಗೆದುಕೊಳ್ಳಹುದು. ಇವತ್ತು 6ನೇ ಗ್ಯಾರಂಟಿಯಿಂದ ದಲಿತ, ಬುಡುಕಟ್ಟ ಸಮುದಾಯಗಳಿಗೆ ಸಾಕಷ್ಟು ನೆರವಾಗಿದೆ. ಅದೇ ರೀತಿ ಇವತ್ತಿಗೂ ಹಕ್ಕುಪತ್ರ ಕೈಗೆ ಸಿಗದ 50 ಸಾವಿರ ಕುಟುಂಬಗಳಿವೆ. ಅವರಿಗೆ ಮುಂದಿನ ಆರು ತಿಂಗಳೊಳಗೆ ಸರ್ಕಾರದಿಂದ ಹಕ್ಕುಪತ್ರ ನೀಡುವ ಆಶ್ವಾಸನೆ ನೀಡುತ್ತೇವೆ ಎಂದರು.
ಈಗ 2000 ಹಳ್ಳಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ಆದರೆ, ನಮ್ಮ ಗುರಿ ಇರುವುದು ರಾಜ್ಯದಲ್ಲಿ ಇನ್ನೂ 500 ನೂತನ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವುದು. ರಾಜ್ಯದಲ್ಲಿ ಎಲ್ಲರಿಗೂ ಹಕ್ಕುಪತ್ರ ಇರಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಈ ಸುದ್ದಿಯನ್ನೂ ಓದಿ | Sadhana Samavesha: ಒಂದೇ ದಿನ 1,11,111 ಕುಟುಂಬಕ್ಕೆ ಹಕ್ಕುಪತ್ರ ವಿತರಿಸಿದ ಸಿಎಂ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2 ವರ್ಷಗಳ ಆಡಳಿತ ಪೂರೈಸಿದೆ. ಚುನಾವಣೆಯ ವೇಳೆಯಲ್ಲಿ ತಮಗೆ 5 ಗ್ಯಾರಂಟಿಗಳನ್ನು ಕೊಡುವ ಆಶ್ವಾಸನೆ ನೀಡಿದ್ದೆವು. ಈ ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿಗರು ಹೇಳಿದ್ದರು. ಪ್ರಧಾನಮಂತ್ರಿಗಳು ಇದನ್ನೇ ಪುನರುಚ್ಚರಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳ ಪ್ರಯೋಜನವನ್ನು ಕರ್ನಾಟಕದ ಜನರು ಅನುಭವಿಸುತ್ತಿದ್ದಾರೆ, ಕೋಟ್ಯಂತರ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಹೋಗುತ್ತಿದೆ. ಜನರ ಹಣ ಮರಳಿ ಜನರಿಗೆ ಜಮೆ ಆಗುತ್ತಿದೆ, ಇದೇ ನಮ್ಮ ಉದ್ದೇಶವೂ ಆಗಿತ್ತು, ಕರ್ನಾಟಕದಲ್ಲಿ ನಮ್ಮ ಉದ್ದೇಶ ಸಾಕಾರಗೊಂಡಿದೆ ಎಂದು ಹೇಳಿದರು.