ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Murder case: ಕಾರಿಗೆ ಟಿಪ್ಪರ್‌ ಗುದ್ದಿಸಿ, ಗುಂಡು ಹಾರಿಸಿ ಗ್ರಾಮ ಪಂಚಾಯತ್‌ ಸದಸ್ಯನ ಕೊಲೆ

ಕಾರಿನಲ್ಲಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು ಖರೆ ಮೇಲೆ ಆರೋಪಿಗಳು ಬರೋಬ್ಬರಿ ಆರು ಸುತ್ತು ಗುಂಡು ಹಾರಿಸಿದ್ದಲ್ಲದೇ, ಕೊನೆಗೆ ಕಲ್ಲು ಎತ್ತಿ ಹಾಕಿ ಕೊಲೆ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವಿಜಯಪುರದ ಹೊರಭಾಗದ ಅಲಿಯಾಬಾದ್ ಬಳಿ ನಡೆದಿದೆ.

ಕಾರಿಗೆ ಟಿಪ್ಪರ್‌ ಗುದ್ದಿಸಿ, ಗುಂಡು ಹಾರಿಸಿ ಗ್ರಾಮ ಪಂಚಾಯತ್‌ ಸದಸ್ಯನ ಕೊಲೆ

ಮೃತ ರಾಜು ಖರೆ -

ಹರೀಶ್‌ ಕೇರ
ಹರೀಶ್‌ ಕೇರ Apr 15, 2026 7:39 AM

ವಿಜಯಪುರ, ಏ. 15: ನಗರದಲ್ಲಿ (vijayapura) ಮತ್ತೆ ಗುಂಡಿನ ಸದ್ದು (Gun Fire) ಕೇಳಿ ಬಂದಿದೆ. 6 ಸುತ್ತು ಗುಂಡು ಹಾರಿಸಿದ್ದಲ್ಲದೆ ಕಲ್ಲು ಎತ್ತಿಹಾಕಿ ಗ್ರಾಮ ಪಂಚಾಯಿತಿ ಸದಸ್ಯನನ್ನು ದುರುಳರು ಭೀಕರವಾಗಿ ಹತ್ಯೆ (murder case) ಮಾಡಿರುವ ಘಟನೆ ವಿಜಯಪುರದ ಹೊರಭಾಗದ ಅಲಿಯಾಬಾದ್ ಬಳಿ ನಡೆದಿದೆ. ತಾಂಗರುನ ದೊಡ್ಡಿ ನಿವಾಸಿ ರಾಜು ಹತ್ಯೆಗೊಳಗಾದ ವ್ಯಕ್ತಿ.

ಗ್ರಾಮ ಪಂಚಾಯಿತಿ ಸದಸ್ಯ ರಾಜು ಖರೆ ಕಾರು ಚಲಾಯಿಸುತ್ತಿರುವ ವೇಳೆ ನಡುರಸ್ತೆಯಲ್ಲಿ ದುಷ್ಕರ್ಮಿಗಳು ಅಟ್ಯಾಕ್​ ಮಾಡಿದ್ದಾರೆ. ಕಾರಿನಲ್ಲಿದ್ದ ರಾಜು ಖರೆ ಮೇಲೆ ಆರೋಪಿಗಳು ಬರೋಬ್ಬರಿ ಆರು ಸುತ್ತು ಗುಂಡು ಹಾರಿಸಿದ್ದಲ್ಲದೇ, ಕೊನೆಗೆ ಕಲ್ಲು ಎತ್ತಿ ಹಾಕಿ ಕೊಲೆ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿಪ್ಪರ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೊದಲು ಥಾರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಟಿಪ್ಪರ್​ನಿಂದ ಇಳಿದ ಆರೋಪಿಗಳು ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಕಾರ್ ಡೋರ್ ಓಪನ್ ಆಗದಿದ್ದಕ್ಕೆ ಕಲ್ಲು ಎತ್ತಿ ಹಾಕಿದ್ದಾರೆ. ರಾಜು ಖರೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಎಸ್​ಪಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು: 17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್ (Whitefield) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 40 ವರ್ಷದ ಸುವರ್ಣ ಮಗಳನ್ನ ಕೊಲೆ ಮಾಡಿ ಆತ್ಮಹತ್ಯೆ ಶರಣಾಗಿರುವ ತಾಯಿ. ಕಾರುಣ್ಯ ತಾಯಿಯಿಂದ ಹತ್ಯೆಯಾದ ಮಗಳು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆ ರಹಸ್ಯ ಭೇದಿಸಿದ ರಸ್ತೆ ಬದಿ ಬಿದ್ದಿದ್ದ ಮದ್ಯದ ಬಾಟಲ್‌; ಏನಿದು ಥ್ರಿಲ್ಲರ್‌ ಸಿನಿಮಾವನ್ನೂ ಮೀರಿಸುವ ರೋಚಕ ಘಟನೆ?