ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Carlos Alcaraz: ಕೆನಡಿಯನ್ ಓಪನ್‌ನಿಂದ ಹಿಂದೆ ಸರಿದ ಅಲ್ಕರಾಜ್

Canadian Open 2025:"ಕಾರ್ಲೋಸ್‌ ಅಲ್ಕರಾಜ್ ಅವರಂತೆ ಬಲಿಷ್ಠ ಆಟಗಾರನನ್ನು ಕಳೆದುಕೊಂಡಿರುವುದು ನಿರಾಶಾದಾಯಕವಾಗಿದೆ, ಏಕೆಂದರೆ ನಮ್ಮ ಅಭಿಮಾನಿಗಳು ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದರು ಎಂದು ನಮಗೆ ತಿಳಿದಿದೆ" ಎಂದು ಪಂದ್ಯಾವಳಿಯ ನಿರ್ದೇಶಕ ಕಾರ್ಲ್ ಹೇಲ್ ಹೇಳಿದರು.

ಕೆನಡಿಯನ್ ಓಪನ್‌ನಿಂದ ಹಿಂದೆ ಸರಿದ ಅಲ್ಕರಾಜ್

Profile Abhilash BC Jul 22, 2025 1:29 PM

ಮಾಂಟ್ರಿಯಲ್‌: ಐದು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಚಾಂಪಿಯನ್ ಆಗಿರುವ ವಿಶ್ವದ ಎರಡನೇ ಶ್ರೇಯಾಂಕಿತ ಕಾರ್ಲೋಸ್ ಅಲ್ಕರಾಜ್(Carlos Alcaraz) ಅವರು ವಿಂಬಲ್ಡನ್‌ನಿಂದ ಚೇತರಿಸಿಕೊಳ್ಳುವ ಸಲುವಾಗಿ ಮುಂದಿನ ವಾರ ಟೊರೊಂಟೊದಲ್ಲಿ ನಡೆಯಲಿರುವ ನ್ಯಾಶನಲ್‌ ಬ್ಯಾಂಕ್‌ ಓಪನ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಿಂದ(Canadian Open) ಹಿಂದೆ ಸರಿದಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಇದಕ್ಕೂ ಮುನ್ನ ನೊವಾಕ್ ಜೊಕೊವಿಕ್, ಜಾನಿಕ್ ಸಿನ್ನರ್ ಮತ್ತು ಜ್ಯಾಕ್ ಡ್ರೇಪರ್, ಮಹಿಳಾ ಆಟಗಾರ್ತಿ ಅರಿನಾ ಸಬಲೆಂಕಾ ಟೂರ್ನಿಯಿಂದ ಹಿಂದೆ ಸರಿದಿದ್ದರು. ಒಟ್ಟಾರೆ ಈ ಬಾರಿ ಸ್ಟಾರ್‌ ಆಟಗಾರರ ಅಲಭ್ಯತೆಯಲ್ಲಿ ಟೂರ್ನಿ ನಡೆಯಲಿದೆ.

22 ವರ್ಷದ ಸ್ಪೇನ್‌ನ ಅಲ್ಕರಾಜ್ ಈ ತಿಂಗಳ ಆರಂಭದಲ್ಲಿ ನಡೆದ ವಿಂಬಲ್ಡನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಜಾನಿಕ್ ಸಿನ್ನರ್ ವಿರುದ್ಧ ಸೋಲು ಕಂಡಿದ್ದರು. ಗ್ರಾಸ್-ಕೋರ್ಟ್ ಕ್ಲಾಸಿಕ್‌ನಲ್ಲಿ ಸತತ ಮೂರನೇ ಕಿರೀಟವನ್ನು ಪಡೆಯುವ ಪ್ರಯತ್ನದಲ್ಲಿ ಅವರು ಈ ಸೋಲನ್ನು ಅನುಭವಿಸಿದ್ದರು.

"ಟೊರೊಂಟೊದಲ್ಲಿ ನಡೆದ ನ್ಯಾಷನಲ್ ಬ್ಯಾಂಕ್ ಓಪನ್ ಅನ್ನು ಕಳೆದುಕೊಳ್ಳಬೇಕಾಗಿ ಬಂದಿರುವುದು ನನಗೆ ನಿಜವಾಗಿಯೂ ದುಃಖ ತಂದಿದೆ" ಎಂದು ಅಲ್ಕರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಟೂರ್ನಿಯಲ್ಲಿ ಆಡಲು ನನಗೆ ತುಂಬಾ ಇಷ್ಟವಾದ್ದರಿಂದ ಅದಕ್ಕೆ ಸಿದ್ಧವಾಗಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಆದರೆ ವಿಂಬಲ್ಡನ್ ನಂತರ ನಾನು ಚೇತರಿಸಿಕೊಳ್ಳುತ್ತಿರುವುದರಿಂದ ಸಾಧ್ಯವಾಗಲಿಲ್ಲ. ನಾನು ಈ ಟೂರ್ನಿಗೆ ಶುಭ ಹಾರೈಸುತ್ತೇನೆ ಮತ್ತು ಮುಂದಿನ ವರ್ಷ ಕೆನಡಾದ ಅಂಗಳಕ್ಕೆ ಮರಳಲು ಎದುರು ನೋಡುತ್ತಿದ್ದೇನೆ" ಎಂದು ಅಲ್ಕರಾಜ್ ಹೇಳಿದರು. 2023 ರಲ್ಲಿ ಅಲ್ಕರಾಜ್ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರೂ, ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಟಾಮಿ ಪಾಲ್ ವಿರುದ್ಧ ಸೋಲು ಕಂಡಿದ್ದರು.

ಇದನ್ನೂ ಓದಿ IND vs ENG: 4ನೇ ಪಂದ್ಯದ ಪಿಚ್‌ ರಿಪೋರ್ಟ್‌; ಹವಾಮಾನ ವರದಿ ಹೀಗಿದೆ

"ಕಾರ್ಲೋಸ್‌ ಅವರಂತೆ ಬಲಿಷ್ಠ ಆಟಗಾರನನ್ನು ಕಳೆದುಕೊಂಡಿರುವುದು ನಿರಾಶಾದಾಯಕವಾಗಿದೆ, ಏಕೆಂದರೆ ನಮ್ಮ ಅಭಿಮಾನಿಗಳು ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದರು ಎಂದು ನಮಗೆ ತಿಳಿದಿದೆ" ಎಂದು ಪಂದ್ಯಾವಳಿಯ ನಿರ್ದೇಶಕ ಕಾರ್ಲ್ ಹೇಲ್ ಹೇಳಿದರು.