ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಭಾರತ ತಂಡದ ಪ್ಲೇಯಿಂಗ XI ಆರಿಸಿದ ಆರ್‌ ಅಶ್ವಿನ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಪ್ರಕಟಿಸಿದ್ದಾರೆ. ಕರುಣ್‌ ನಾಯರ್‌ ವೈಫಲ್ಯದಿಂದಾಗಿ ಮೂರನೇ ಕ್ರಮಾಂಕಕ್ಕೆ ವಾಷಿಂಗ್ಟನ್‌ ಸುಂದರ್‌ಗೆ ಅವಕಾಶವನ್ನು ನೀಡಿದ್ದಾರೆ.

ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಆರ್‌ ಅಶ್ವಿನ್‌!

ಭಾರತ ತಂಡದ ಪ್ಲೇಯಿಂಗ್‌ XI ಆರಿಸಿದ ಆರ್‌ ಅಶ್ವಿನ್‌.

Profile Ramesh Kote Jul 22, 2025 7:31 PM

ಮ್ಯಾಂಚೆಸ್ಟರ್‌: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ (IND vs ENG) ಜುಲೈ 23 ರಂದು ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ XIಅನ್ನು ಈಗಾಗಲೇ ಪ್ರಕಟಿಸಲಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಕೂಡ ಭಾರತ ತಂಡದ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿರುವ ಕರುಣ್‌ ನಾಯರ್‌ ಅವರ ಮೂರನೇ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ಗೆ (Washington Sundar) ಅಶ್ವಿನ್‌ ಅವಕಾಶ ಕಲ್ಪಿಸಿದ್ದಾರೆ.

ಭಾರತ ತಂಡಕ್ಕೆ ಬ್ಯಾಟಿಂಗ್‌ ಡೆಪ್ತ್‌ ಹೆಚ್ಚಿಸಲು ಆರ್‌ ಅಶ್ವಿನ್‌ ಅವರು ವಾಷಿಂಗ್ಟನ್‌ ಸುಂದರ್‌ ಅವರನ್ನು ಮೂರನೇ ಕ್ರಮಾಂಕಕ್ಕೆ ಸೂಚಿಸಿದ್ದಾರೆ. ಆ ಮೂಲಕ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಅವರಿಗೆ ಪ್ಲೇಯಿಂಗ್‌ XIನಲ್ಲಿ ಅಶ್ವಿನ್‌ ಅವಕಾಶ ನೀಡಿದ್ದಾರೆ. ಕುಲ್ದೀಪ್‌ ಯಾದವ್‌ ಅವರನ್ನು ನಾಲ್ಕನೇ ಸೀಮರ್‌ ಜಾಗದಲ್ಲಿ ಕುಲ್ದೀಪ್‌ ಯಾದವ್‌ ಅವರಿಗೆ ಅಶ್ವಿನ್‌ ಅವಕಾಶ ನೀಡಿದ್ದಾರೆ.

IND vs ENG: ನಾಲ್ಕನೇ ಟೆಸ್ಟ್‌ಗೂ ಮುನ್ನ ಜಸ್‌ಪ್ರೀತ್‌ ಬುಮ್ರಾಗೆ ಇರ್ಫಾನ್‌ ಪಠಾಣ್‌ ಸಂದೇಶ!

ತಮ್ಮ ಯೂಟ್ಯೂಬ್‌ ಚಾನೆಲ್‌ ʻಆಶ್‌ ಕಿ ಬಾತ್‌ʼನಲ್ಲಿ ಮಾತನಾಡಿದ ಆರ್‌ ಅಶ್ವಿನ್‌, "ವಾಷಿಂಗ್ಟನ್‌ ಸಂದರ್‌ ಅವರ ಮೇಲೆ ನಿಮಗೆ ಕಾಳಜಿ ಇದ್ದರೆ, ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಬೇಕು. ನೀವು ಕರುಣ್‌ ನಾಯರ್‌ ಅವರ ಸ್ಥಾನಕ್ಕೆ ಸಾಯಿ ಸುದರ್ಶನ್‌ ಅವರನ್ನು ಆಡಿಸಿ ಅಥವಾ ವಾಷಿಂಗ್ಟನ್‌ ಸುಂದರ್‌ ಅವರನ್ನು ಆಡಿಸಬೇಕು. ವಾಷಿಂಗ್ಟನ್‌ ಸುಂದರ್‌ ಅವರನ್ನು ಆಡಿಸಬೇಕೆಂದು ನಾನು ಹೇಳುತ್ತೇನೆ. ಏಕೆಂದರೆ ರವೀಂದ್ರ ಜಡೇಜಾ ಇದ್ದಾರೆ, ಸಾಯಿ ಸುದರ್ಶನ್‌ ಅಥವಾ ಧ್ರುವ್‌ ಜುರೆಲ್‌ ಇದ್ದಾರೆ. ಇದರ ಜೊತೆಗೆ ನೀವು ವಿಶೇಷ ಸ್ಪಿನ್ನರ್‌ ಅನ್ನು ಆಡಿಸಬೇಕು. ನಾಲ್ಕನೇ ವೇಗದ ಬೌಲರ್‌ ಜಾಗದಲ್ಲಿ ನೀವು ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಬೇಕು," ಎಂದು ಸಲಹೆ ನೀಡಿದ್ದಾರೆ.

IND vs ENG: 8 ವರ್ಷಗಳ ಬಳಿಕ ಇಂಗ್ಲೆಂಡ್‌ ತಂಡಕ್ಕೆ ಮರಳಿದ ಲಿಯಾಮ್‌ ಡಾಸನ್‌ ಯಾರು?

"ಮೂರನೇ ಕ್ರಮಾಂಕಕ್ಕೆ ಅಥವಾ ಆರಂಭಿಕ ಸ್ಥಾನಕ್ಕೆ ಸಾಯಿ ಸುದರ್ಶನ್‌ ಅವರನ್ನು ನೀವು ನೋಡುತ್ತಿಲ್ಲವಾದರೆ, ಮೊದಲನೇ ಟೆಸ್ಟ್‌ನಲ್ಲಿ ನೀವು ಅವರನ್ನು ಮೂರನೇ ಕಮಾಂಕದಲ್ಲಿ ಆಡಿಸಬಾರದಿತ್ತು. ಕರುಣ್‌ ನಾಯರ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಬೇಕೆಂದು ನೀವು ಬಯಸಿದ್ದರೆ, ಮೊದಲನೇ ಟೆಸ್ಟ್‌ನಲ್ಲಿಯೇ ನೀವು ಆಡಿಸಬೇಕಾಗಿತ್ತು. ಸುದರ್ಶನ್‌ ಅವರನ್ನು ಮೊದಲನೇ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿಸಿ, ನಂತರ ಎರಡು ಪಂದ್ಯಗಳಲ್ಲಿ ತೆಗೆಯಲಾಯಿತು ಹಾಗೂ ಕರುಣ್‌ಗೆ ಚಾನ್ಸ್‌ ನೀಡಲಾಗಿತ್ತು. ಔಟ್‌ ಆಗುವವರೆಗೂ ಕರುಣ್‌ ಚೆನ್ನಾಗಿ ಬ್ಯಾಟ್‌ ಮಾಡುತ್ತಿದ್ದರು. ಅವರು ಒತ್ತಡದಲ್ಲಿ ಇರುವ ರೀತಿ ಕಾಣುತ್ತಿರಲಿಲ್ಲ. ಅವರು ದೊಡ್ಡ ಮೊತ್ತವನ್ನು ಗಳಿಸಿ, ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಅವರು ಐದೂ ಟೆಸ್ಟ್‌ ಆಡಬೇಕೆಂದು ನಾನು ಬಯಸುತ್ತೇನೆ," ಎಂದು ಅಶ್ವಿನ್‌ ತಿಳಿಸಿದ್ದಾರೆ.

ನಿತೀಶ್‌ ಸ್ಥಾನಕ್ಕೆ ಶಾರ್ದುಲ್‌

"ನಮ್ಮ ಬ್ಯಾಟಿಂಗ್‌ ಕ್ರಮಾಂಕದ ಮುಂದುವರಿಕೆ ಬಗ್ಗೆ ನಾನು ಸ್ವಲ್ಪ ಗೊಂದಲದಲ್ಲಿದ್ದೇನೆ. ನಿತೀಶ್‌ ಕುಮಾರ್‌ ರೆಡ್ಡಿ ಅವರ ಸ್ಥಾನಕ್ಕೆ ಶಾರ್ದುಲ್‌ ಠಾಕೂರ್‌ ಅವರನ್ನು ಆಡಿಸುವ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಅದರಲ್ಲಿಯೂ ನಾಲ್ಕನೇ ಟೆಸ್ಟ್‌ನಲ್ಲಿ ನಿತೀಶ್‌ ರೆಡ್ಡಿ ಅವರ ಸ್ಥಾನಕ್ಕೆ ಶಾರ್ದುಲ್‌ ಆಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ," ಎಂದು ಸ್ಪಿನ್‌ ದಿಗ್ಗಜ ಹೇಳಿದ್ದಾರೆ.

ನಾಲ್ಕನೇ ಟೆಸ್ಟ್‌ಗೆ ಅಶ್ವಿನ್‌ ಆಯ್ಕೆಯ ಭಾರತದ ಪ್ಲೇಯಿಂಗ್‌ xi

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ವಾಷಿಂಗ್ಟನ್‌ ಸುಂದರ್‌, ಶುಭಮನ್‌ ಗಿಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಶಾರ್ದುಲ್‌ ಠಾಕೂರ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ ದೀಪ್‌.