ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌: ಕಂಚಿನ ಪದಕ ಗೆದ್ದಿದ್ದ ರಮೇಶ್‌ ಬೂದಿಗಾಳರನ್ನು ಅಭಿನಂದಿಸಿದ ಸಿದ್ದರಾಮಯ್ಯ!

ತಮಿಳುನಾಡಿನ ಮಹಾಬಲಿಪುರಂನ ಕಡಲ ತೀರದಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2025ರ ಏಷ್ಯನ್‌ ಸರ್ಫಿಂಗ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಕರ್ನಾಟಕ ಗದಗ ಜಿಲ್ಲೆಯ ಮೂಡರಗಿ ತಾಲೂಕಿನ ಯುವಕ ರಮೇಶ್‌ ಬೂದಿಹಾಳ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

ಕಂಚಿನ ಪದಕ ಗೆದ್ದಿದ್ದ ರಮೇಶ್‌ ಬೂದಿಗಾಳರನ್ನು ಅಭಿನಂದಿಸಿದ ಸಿದ್ದರಾಮಯ್ಯ!

ರಮೇಶ್‌ ಬೂದಿಹಾಳ ಅವರನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ.

Profile Ramesh Kote Aug 18, 2025 5:05 PM

ನವದೆಹಲಿ: ಇತ್ತೀಚೆಗೆ ನಡೆದಿದ್ದ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್ (Asian Surfing Championships 2025) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಪ್ರಪ್ರಥಮ‌ ಸರ್ಫರ್, ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮುರುಡಿ ತಾಂಡಾದ ಯುವಕ ರಮೇಶ್ ಬೂದಿಹಾಳ (Ramesh Budihal) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM SIddaramaih) ಅವರು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ನೀವು ಇನ್ನಷ್ಡು ಸಾಧನೆ ಮಾಡಬೇಕು ಎಂದು ಸರ್ಫರ್ ರಮೇಶ್ ಬೂದಿಹಾಳ ಅವರಿಗೆ ಮುಖ್ಯಮಂತ್ರಿಗಳು ಶುಭ ಹಾರೈಸಿದ್ದಾರೆ.

ತಮಿಳುನಾಡಿನ ಮಹಾಬಲಿಪುರಂನ ಕಡಲತೀರಗಳಲ್ಲಿ ಭಾನುವಾರ ನಡೆದಿದ್ದ 2025ರ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಶಿಪ್ ಪುರುಷರ ಮುಕ್ತ ಸ್ಪರ್ಧೆಯಲ್ಲಿ ರಮೇಶ್ ಬುದಿಹಾಲ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಆ ಮೂಲಕ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಸರ್ಫರ್‌ ಆಗಿದ್ದಾರೆ.

Hebbala Flyover: ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಭಾನುವಾರ ನಾಲ್ವರು ಆಟಗಾರರ ಫೈನಲ್ ಸ್ಪರ್ಧೆಯಲ್ಲಿ ರಮೇಶ್ ಬುದಿಹಾಲ್ 12.60 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು, ಇಂಡೋನೇಷ್ಯಾದ ಮೆಗಾ ಅರ್ತಾನಾ (9.97) ಅವರನ್ನು ಹಿಂದಿಕ್ಕಿ ತಮ್ಮ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಾಬಲಿಪುರಂನಲ್ಲಿ ನಡೆದಿದ್ದ ಓಪನ್ ಪುರುಷರ ವಿಭಾಗದಲ್ಲಿ ಕೊರಿಯಾ ಗಣರಾಜ್ಯದ ಕನೋವಾ ಹೀಜೆ (15.17) ಚಿನ್ನ ಗೆದ್ದರೆ, ಇಂಡೋನೇಷ್ಯಾದ ಪಜರ್ ಅರಿಯಾನಾ (14.57) ಬೆಳ್ಳಿ ಪದಕ ಗೆದ್ದಿದ್ದರು.

ಕೇರಳದ ಕೋವಲಂನಲ್ಲಿ ಐದನೇ ವಯಸ್ಸಿನಲ್ಲಿ ಸರ್ಫಿಂಗ್ ಆರಂಭಿಸಿದ್ದ ಬೂದಿಹಾಳ್‌, ಸೆಮಿಫೈನಲ್‌ನ ಹೀಟ್ ಒಂದರಲ್ಲಿ ಡ್ರಾ ಮಾಡಿಕೊಂಡಿದ್ದರೂ 11.43 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದು ಪದಕ ಸುತ್ತಿಗೆ ತಲುಪಿದ್ದರು. ಆದರೆ ಭಾರತದ ನಂ. 1 ಸರ್ಫರ್‌ ಕಿಶೋರ್ ಕುಮಾರ್ 8.10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಟೂರ್ನಿಯಿಂದ ಹೊರನಡೆದರು.

ನಾಲ್ಕನೇ ಆವೃತ್ತಿಯ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಭಾರತೀಯ ಶ್ರೀಕಾಂತ್ ಡಿ. ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದರು.

ರಮೇಶ್‌ ಬೂದಿಹಾಳ್‌ ಪ್ರತಿಕ್ರಿಯೆ

"ನನಗೆ ಹೇಳಲು ಹೆಚ್ಚೇನೂ ಇಲ್ಲ. ನಮ್ಮಲ್ಲಿ ಒಬ್ಬರು ಫೈನಲ್‌ಗೆ ತಲುಪಿರುವುದು ಎಲ್ಲರಿಗೂ ಹೆಮ್ಮೆಯ ಕ್ಷಣ ಮತ್ತು ಇಲ್ಲಿನ ಜನರ ಬೆಂಬಲವು ಕ್ರೀಡೆಯನ್ನು ಬೆಳೆಸಲು ಸಹಾಯ ಮಾಡುತ್ತದೆ," ಎಂದು ಕಳೆದ ವರ್ಷ ಮಾಲ್ಡೀವ್ಸ್‌ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದ ಬೂದಿಹಾಳ್‌ ಪದಕ ಗೆದ್ದ ನಂತರ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದ್ದರು.