Asia Cup 2025: ಶುಭಮನ್ ಗಿಲ್ ಅಲ್ಲ! ಭಾರತ ತಂಡಕ್ಕೆ ನೇರವಾಗಿ ಆಯ್ಕೆಯಾಗಬಲ್ಲ ಆಟಗಾರರನ್ನು ಆರಿಸಿದ ಆರ್ ಅಶ್ವಿನ್
ಮುಂಬರುವ ಏಷ್ಯಾ ಕಪ್ ಟೂರ್ನಿಯ ಭಾರತ ತಂಡವನ್ನು ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಗಸ್ಟ್ 19 ರಂದು ಪ್ರಕಟಿಸಲಾಗುವುದು. ಅಂದ ಹಾಗೆ ಭಾರತ ತಂಡದಲ್ಲಿ ಶುಭಮನ್ ಗಿಲ್ ಬದಲು ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ಪಡೆಯಲಿದ್ದಾರೆಂದು ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

ಶುಭಮನ್ ಗಿಲ್‌ಗೆ ಅವಕಾಶ ನೀಡುವುದು ಅನುಮಾನ ಎಂದ ಆರ್ ಅಶ್ವಿನ್.

ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಭಾರತ ತಂಡವನ್ನು ಆಗಸ್ಟ್ 19 ರಂದು ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸಲಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿ (T20 World Cup) ಇರುವ ಕಾರಣ ಈ ಬಾರಿ ಏಷ್ಯಾ ಕಪ್ ಟೂರ್ನಿಯನ್ನೂ 20 ಓವರ್‌ಗಳ ಸ್ವರೂಪದಲ್ಲಿ ಆಡಿಸಲಾಗುತ್ತಿದೆ. ಏಷ್ಯಾ ಕಪ್ ಭಾರತ ತಂಡದಲ್ಲಿ ಶುಭಮನ್ ಗಿಲ್‌ಗೆ (Shubman Gill) ಅವಕಾಶ ನೀಡಲಾಗುವುದಿಲ್ಲವೆಂದು ವರದಿಯಾಗಿದೆ. ಇವರನ್ನು 2024ರಲ್ಲಿ ವೈಟ್ ಬಾಲ್ ತಂಡಕ್ಕೆ ಉಪ ನಾಯಕನನ್ನಾಗಿ ನೇಮಿಸಲಾಗಿತ್ತು.
ತಮ್ಮ ಅಧೀಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, ಏಷ್ಯಾ ಕಪ್ ಭಾರತ ತಂಡದಲ್ಲಿ ನೇರವಾಗಿ ಆಯ್ಕೆಯಾಗಬಲ್ಲ ಆಟಗಾರರನ್ನು ಆರಿಸಿದ್ದಾರೆ. ಅಂದ ಹಾಗೆ ಶುಭಮನ್ ಗಿಲ್ ಬಗ್ಗೆ ಅವರು ಮಾತನಾಡುತ್ತಿಲ್ಲ. ಅವರು ಯಶಸ್ವಿ ಜೈಸ್ವಾಲ್ ಅವರ ಬಗ್ಗೆ ಹೇಳುತ್ತಿದ್ದಾರೆ.
Asia Cup 2025: ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್‌ಗೆ ಸ್ಥಾನ ನೀಡಬೇಕೆಂದ ಆಕಾಶ್ ಚೋಪ್ರಾ!
"ಏಷ್ಯಾ ಕಪ್ ಟೂರ್ನಿಯ ಬಗ್ಗೆ ಕೆಲವು ಮಾತನಾಡುವ ಅಂಶಗಳಿವೆ. ಎಲ್ಲರ ಮನಸ್ಸಿನಲ್ಲಿ ಬರುವ ಮೊದಲ ಪ್ರಶ್ನೆಯೆಂದರೆ ಶುಭಮನ್ ಗಿಲ್ ಟಿ20 ಯೋಜನೆಗಳಿಗೆ ಹೊಂದಿಕೊಳ್ಳುತ್ತಾರೆಯೇ ಎಂಬುದು, ಏಕೆಂದರೆ ಕಳೆದ ವಿಶ್ವಕಪ್ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಕಪ್ ಓಪನರ್ ಆಗಿದ್ದರು. ಆದ್ದರಿಂದ ಜೈಸ್ವಾಲ್‌ಗೆ ಆಟೋಮ್ಯಾಟಿಕ್ ಆಗಿ ತಂಡದಲ್ಲಿ ಸ್ಥಾನ ಸಿಗಲಿದೆ. ರೋಹಿತ್ ಶರ್ಮಾ ಆ ತಂಡದಲ್ಲಿ ಆಡುವುದಿಲ್ಲ, ಆದ್ದರಿಂದ ಜೈಸ್ವಾಲ್‌ಗೆ ಸ್ವಯಂಚಾಲಿತವಾಗಿ ಸ್ಥಾನ ಸಿಗಲಿದೆ," ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
"ಇದೀಗ, ಆ ಮತ್ತೊಬ್ಬ ಆರಂಭಿಕ ಆಟಗಾರ ಯಾರು? ಶುಭಮನ್ ಗಿಲ್ ಅತ್ಯುತ್ತಮ ಸರಣಿಯನ್ನು ಆಡಿದ್ದರು. ಅವರು ತಂಡಕ್ಕೆ ಮರಳಬಹುದೇ? ಸಂಜು ಸ್ಯಾಮ್ಸನ್ ಭಾರತ ಪರ ಟಿ20 ಆರಂಭಿಕ ಆಟಗಾರನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ," ಎಂದಿದ್ದಾರೆ.
Asia Cup 2025: ಭಾರತ ತಂಡದ ಆಯ್ಕೆಗೆ ಜಸ್‌ಪ್ರೀತ್ ಬುಮ್ರಾ ಲಭ್ಯ! ವರದಿ
ಯಶಸ್ವಿ ಜೈಸ್ವಾಲ್ 2024ರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಆದರೆ, ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಅವರು 23 ಟಿ20ಐಗಳಲ್ಲಿ 723 ರನ್ ಗಳಿಸಿದ್ದಾರೆ. 164.31ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 38 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಇನ್ನು ಶುಭಮನ್ ಗಿಲ್ ಅವರು ಆಡಿದ 21 ಟಿ20ಐ ಪಂದ್ಯಗಳ 578 ರನ್‌ಗಳನ್ನು ಬಾರಿಸಿದ್ದಾರೆ. ಅವರು ಚುಟುಕು ಕ್ರಿಕೆಟ್‌ನಲ್ಲಿ 139.27ರ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. 2024ರ ಜುಲೈ ಬಳಿಕ ಗಿಲ್ ಭಾರತ ತಂಡದ ಪರ ಯಾವುದೇ ಟಿ20ಐ ಪಂದ್ಯವನ್ನು ಆಡಿಲ್ಲ.
ಸೂರ್ಯಕುಮಾರ್ ಯಾದವ್ ಫಿಟ್ ಇದ್ದಾರಾ?
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಹಾಗಾಗಿ ಅವರು ಭಾರತ ಟಿ20ಐ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ದುಲೀಪ್ ಟ್ರೋಫಿ ಪಶ್ಚಿಮ ವಲಯ ತಂಡಕ್ಕೆ ಸೂರ್ಯ ಹೆಸರನ್ನು ಪರಿಗಣಿಸಿಲ್ಲ, ಆದರೆ, ಅವರು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಸೂರ್ಯ ಮುನ್ನಡೆಸುವುದು ಬಹುತೇಕ ಖಚಿತ.