ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

FIDE Women's World Cup: ಚೆಸ್‌ ವಿಶ್ವಕಪ್‌ ಗೆದ್ದ ದಿವ್ಯಾ ದೇಶ್‌ಮುಖ್‌ಗೆ ಸಿಕ್ಕ ನಗದು ಬಹುಮಾನವೆಷ್ಟು?

2025ರ ಎಫ್‌ಐಡಿಇ ಮಹಿಳಾ ಚೆಸ್‌ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ದಿವ್ಯಾ ದೇಶಮುಖ್ ಕೊನೆರು ಹಂಪಿ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದರು. ಈ ಗೆಲುವಿನೊಂದಿಗೆ ದಿವ್ಯಾ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವಕಪ್‌ ಗೆದ್ದ ದಿವ್ಯಾ ದೇಶ್‌ಮುಕ್‌ಗೆ ನಗದು ಬಹುಮಾನದ ವಿವರವನ್ನು ಇಲ್ಲಿ ವಿವರಿಸಲಾಗಿದೆ.

ಚೆಸ್‌ ವಿಶ್ವಕಪ್‌ ಗೆದ್ದ ದಿವ್ಯಾ ದೇಶ್‌ಮುಖ್‌ಗೆ ಸಿಕ್ಕ ನಗದು ಬಹುಮಾನ!

ಚೆಸ್‌ ವಿಶ್ವಕಪ್‌ ಗೆದ್ದ ದಿವ್ಯಾ ದೇಶ್‌ಮುಖ್‌ಗೆ ಸಿಕ್ಕ ನಗದು ಬಹುಮಾನದ ವಿವರ.

Profile Ramesh Kote Jul 28, 2025 8:27 PM

ನವದೆಹಲಿ: ಎಫ್‌ಐಡಿಇ ಮಹಿಳಾ ಚೆಸ್‌ ವಿಶ್ವಕಪ್‌ (FIDE Women's World Cup) ಟೂರ್ನಿಯ ಫೈನಲ್‌ನಲ್ಲಿ ರೋಮಾಂಚಕ ಗೆಲುವು ಸಾಧಿಸುವ ಮೂಲಕ ಭಾರತದ ದಿವ್ಯಾ ದೇಶಮುಖ್ (Divya Deshmukh) ಇತಿಹಾಸ ನಿರ್ಮಿಸಿದ್ದಾರೆ. 19ನೇ ವಯಸ್ಸಿನ ದಿವ್ಯಾ ದೇಶ್‌ಮುಖ್‌ ಫೈನಲ್‌ ಹಣಾಹಣಿಯಲ್ಲಿ ತಮ್ಮ ದೇಶದ ಮತ್ತು ಅನುಭವಿ ಚೆಸ್‌ ಪಟು ಕೊನೆರು ಹಂಪಿ ಅವರನ್ನು ಎದುರಿಸಿದರು. ದಿವ್ಯಾ ಮತ್ತು ಹಂಪಿ ನಡುವಿನ ಮೊದಲ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದ್ದವು. ಆದರೆ, ಸೋಮವಾರ ದಿವ್ಯಾ, ಹಂಪಿಯನ್ನು ಟೈ ಬ್ರೇಕರ್ ಪಂದ್ಯದಲ್ಲಿ ಸೋಲಿಸಿ ವಿಶ್ವಕಪ್ ಗೆದ್ದು ಬೀಗಿದರು. ಈ ರೀತಿಯಾಗಿ ದಿವ್ಯಾ ವಿಶ್ವ ಚಾಂಪಿಯನ್ ಆದರು. ಇದರ ನಡುವೆ ವಿಶ್ವ ಚಾಂಪಿಯನ್‌ ದಿವ್ಯಾ ದೇಶಮುಖ್‌ ಹಾಗೂ ರನ್ನರ್‌ ಕೊನೆರು ಹಂಪಿಗೆ (Koneru Humpy) ಸಿಕ್ಕ ನಗದು ಬಹುಮಾನದ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

2025ರ ಚೆಸ್‌ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ನಗದು ಬಹುಮಾನದ ಮೊತ್ತ ಯುಎಸ್‌ ಡಾಲರ್‌ 691,250 ಮಿಲಿಯನ್ ಇಡಲಾಗಿತ್ತು. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 5 ಕೋಟಿ 99 ಲಕ್ಷ ರು ಆಗಿದೆ. ಈ ಬಹುಮಾನದ ಹಣವನ್ನು ಸ್ಪರ್ಧೆಯ ವಿವಿಧ ಸುತ್ತುಗಳನ್ನು ತಲುಪಿದ ಆಟಗಾರರಿಗೆ ವಿತರಿಸಲಾಯಿತು. ಈ ಟೂರ್ನಿಯಲ್ಲಿ ಚಾಂಪಿಯನ್ ದಿವ್ಯಾ ದೇಶ್‌ಮುಖ್‌ಗೆ 50000 ಯುಎಸ್‌ ಡಾಲರ್‌ ಎಂದರೆ, ಭಾರತೀಯ ರುಪಾಯಿ ಲಕ್ಕದಲ್ಲಿ 43 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದ್ದಾರೆ. ಇದಲ್ಲದೆ, ರನ್ನರ್ ಅಪ್ ಆಗಿದ್ದ ಕೊನೆರು ಹಂಪಿ 35000 ಅಮೆರಿಕನ್ ಡಾಲರ್ ಅಂದರೆ 30 ಲಕ್ಷ ರೂಪಾಯಿಗಳನ್ನು ನಗದು ಬಹುಮಾನವನ್ನು ಪಡೆದಿದ್ದಾರೆ.

World Cup 2025: 19ನೇ ವಯಸ್ಸಿನಲ್ಲಿಯೇ ಮಹಿಳಾ ಚೆಸ್‌ ವಿಶ್ವಕಪ್‌ ಗೆದ್ದ ಭಾರತದ ದಿವ್ಯಾ ದೇಶ್‌ಮುಖ್‌!

ದಿವ್ಯಾ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್

2025ರ ಚೆಸ್‌ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ದಿವ್ಯಾ ಮತ್ತೊಂದು ದೊಡ್ಡ ಸಾಧನೆಗೆ ಭಾಜನರಾಗಿದ್ದಾರೆ. 19ನೇ ವಯಸ್ಸಿನ ದಿವ್ಯಾ, ಈ ಪ್ರತಿಷ್ಠಿತ ಟೂರ್ನಿಯನ್ನು ಗೆದ್ದಿದ್ದಲ್ಲದೆ, ಗ್ರ್ಯಾಂಡ್‌ಮಾಸ್ಟರ್ ಕೂಡ ಆಗಿದ್ದಾರೆ. ಅವರು ಗ್ರ್ಯಾಂಡ್‌ಮಾಸ್ಟರ್ ಆದ ನಾಲ್ಕನೇ ಭಾರತೀಯ ಮಹಿಳೆಯಾಗಿದ್ದಾರೆ. ದಿವ್ಯಾಗಿಂತ ಮೊದಲು, ಕೊನೆರು ಹಂಪಿ ಈ ಸಾಧನೆಗೆ ಭಾಜನರಾಗಿದ್ದಾರೆ. ಹಂಪಿ ಭಾರತದ ಮೊದಲ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಕೂಡ. ಅವರು 2002ರಲ್ಲಿ ಈ ದಾಖಲೆ ಬರೆದಿದ್ದಾರೆ. ಇದಲ್ಲದೆ ದ್ರೋಣವಲ್ಲಿ ಹರಿಕಾ ಮತ್ತು ಆರ್ ವೈಶಾಲಿ ಭಾರತೀಯ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ಗಳು.



ದಿವ್ಯಾ ದೇಶಮುಖ್ ಮಹಾರಾಷ್ಟ್ರದ ನಾಗ್ಪುರದ ನಿವಾಸಿ. ಆಕೆಯ ಪೋಷಕರು ವೈದ್ಯರು. ದಿವ್ಯಾ ಹಂಪಿ ಅವರನ್ನು ವಿಶ್ವಕಪ್ ಫೈನಲ್‌ನಲ್ಲಿ ಸೋಲಿಸಿದಾಗ, ಅವರು ತುಂಬಾ ಭಾವುಕರಾದರು. ದಿವ್ಯಾ ಕೇವಲ 5ನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು, ಆದರೆ ಆಕೆಯ ಪೋಷಕರು ಆಕೆಯನ್ನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಬೇಕೆಂದು ಬಯಸಿದ್ದರು. ಆದಾಗ್ಯೂ, ದಿವ್ಯಾ ಅವರ ಹೃದಯವು ಚೆಸ್ ಮೇಲೆ ಕೇಂದ್ರೀಕೃತವಾಗಿತ್ತು ಮತ್ತು ಈಗ ಅವರು ತಮ್ಮ ದೇಶ ಮತ್ತು ಕುಟುಂಬವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ.