IPL 2025: ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್, ಬೆಂಗಳೂರಿಗೆ ಸ್ಟಾರ್ ವೇಗಿಯ ಆಗಮನ!
ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಆಸ್ಟ್ರೇಲಿಯಾ ವೇಗಿ ಜಾಶ್ ಹೇಝಲ್‌ವುಡ್ ಮೇ 17 ರಂದು ಪುನರಾರಂಭವಾಗಲಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲಿದ್ದಾರೆ. ಅವರು ಇದೀಗ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆಂದು ವರದಿಯಾಗಿದೆ. ಆ ಮೂಲಕ ಆರ್‌ಸಿಬಿ ತಂಡಕ್ಕೆ ಆನೆ ಬಲ ಬಂದಂತಾಗಲಿದೆ.

ಆರ್‌ಸಿಬಿಗೆ ಜಾಶ್ ಹೇಝಲ್‌ವುಡ್ ಆಗಮನ.

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯನ್ನು ಒಂದು ವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಈ ಟೂರ್ನಿಯನ್ನು ಮೇ 17 ರಂದು ಮುಂದುವರಿಸಲಾಗುತ್ತದೆ. ಶನಿವಾರ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ (RCB vs KKR) ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಇದರ ನಡುವೆ ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಗಾಯದಿಂದ ಸಂಪೂರ್ಣ ಗುಣುಮುಖರಾಗಿರುವ ಆಸ್ಟ್ರೇಲಿಯಾ ಫಾಸ್ಟ್ ಬೌಲರ್ ಜಾಶ್ ಹೇಝಲ್‌ವುಡ್ (Josh Hazlewood) ಆಗಮಿಸುತ್ತಿದ್ದಾರೆ. ಆ ಮೂಲಕ ಆರ್‌ಸಿಬಿ ಬೌಲಿಂಗ್ ವಿಭಾಗಕ್ಕೆ ಆನೆ ಬಲ ಬಂದಂತಾಗಿದೆ.
ಇದಕ್ಕೂ ಮುನ್ನ ಜೂನ್ 11 ರಂದು ಆರಂಭವಾಗುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಿಮಿತ್ತ ಜಾಶ್ ಹೇಝಲ್‌ವುಡ್ ಭಾರತಕ್ಕೆ ಮರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಹಿಂದೂಸ್ಥಾನ್ ಟೈಮ್ಸ್ ವರದಿಯ ಪ್ರಕಾರ ಜಾಶ್ ಹೇಝಲ್‌ವುಡ್ ಬೆಂಗಳೂರಿಗೆ ಪ್ರಯಾಣ ಬಳೆಸುತ್ತಿದ್ದಾರೆಂದು ತಿಳಿದು ಬಂದಿದೆ.
IPL 2025: ಇನ್ನುಳಿದ ಪಂದ್ಯಗಳ ನಿಮಿತ್ತ ಭಾರತಕ್ಕೆ ಆಗಮಿಸಿದ ವಿದೇಶಿ ಆಟಗಾರರ ವಿವರ!
"ಹೌದು, ಜಾಶ್ ಹೇಝಲ್‌ವುಡ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರು ಯಾವ ದಿನಾಂಕದಂದು ಇಲ್ಲಿಗೆ ಆಗಮಿಸುತ್ತಾರೆಂದು ಸಂಬಂಧಿತ ಪ್ರಾಧಿಕಾರದ ಜೊತೆ ಚರ್ಚೆ ನಡೆಸುತ್ತಿದೆ," ಎಂದು ಮೂಲಗಳು ತಿಳಿಸಿರುವುದನ್ನು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ರಜತ್ ಪಾಟಿದಾರ್ ಅಲಭ್ಯ, ಜಿತೇಶ್ ಶರ್ಮಾಗೆ ನಾಯಕತ್ವ
2025ರ ಐಪಿಎಲ್ ಟೂರ್ನಿಯ ಇನ್ನುಳಿದ ಭಾಗಕ್ಕೆ ರಜತ್ ಪಾಟಿದಾರ್ ಅವರು ಅಲಭ್ಯರಾಗಲಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅವರು ಬೆರಳು ಗಾಯದಿಂದ ಬಳಲುತ್ತಿದ್ದಾರೆ. ಇದರ ಪರಿಣಾಮ ಅವರನ್ನು ಇಂಗ್ಲೆಂಡ್ ಪ್ರವಾಸದ ಭಾರತ ಎ ತಂಡಕ್ಕೂ ಕೂಡ ಆಯ್ಕೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ೀ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಬೇರೆ ಯಾರಾದರೂ ಆರ್‌ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.
IPL 2025: ಆರ್‌ಸಿಬಿಗೆ ಮರಳಿದ ಲಿಯಾಮ್ ಲಿವಿಂಗ್‌ಸ್ಟೋನ್, ರೊಮ್ಯಾರಿಯೊ ಶೆಫರ್ಡ್!
ಮೇ 13 ರಂದು ನಡೆಯಬೇಕಿದ್ದ ಆರ್‌ಸಿಬಿ ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಣ ಪಂದ್ಯಕ್ಕೂ ಕೂಡ ರಜತ್ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಆರ್‌ಸಿಬಿ ತಂಡವನ್ನು ಜಿತೇಶ್ ಶರ್ಮಾ ಮುನ್ನಡೆಸಬೇಕಿತ್ತು. ಆದರೆ, ಟೂರ್ನಿಯನ್ನು ಒಂದು ವಾರ ನಿಲ್ಲಿಸಲಾಗಿತ್ತು. ಅಂದ ಹಾಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯನ್ನು ಜಿತೇಶ್ ಶರ್ಮಾ ಮುನ್ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.