ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diksha Pant: ಟಾಲಿವುಡ್ ನಟಿ ದೀಕ್ಷಾ ಪಂತ್ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದೇನು?

ಟಾಲಿವುಡ್‌ ನಟಿ ದೀಕ್ಷಾ ಪಂತ್ ಸಿನಿರಂಗದ ಕೆಲವು ಗೌಪ್ಯ ವಿಚಾರಗಳ ಬಗ್ಗೆ ಹೇಳಿಕೆ ನೀಡಿದ್ದಾರೆ‌. ಇತ್ತೀಚೆಗಷ್ಟೇ ನಟಿ ದೀಕ್ಷಾ ಪಂತ್ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಬದುಕು, ಬಿಗ್ ಬಾಸ್ ಶೋ ಅನುಭವ ಹಾಗೂ ಸಿನಿಮಾ ರಂಗದಲ್ಲಿ ಇರುವ ಕಾಸ್ಟಿಂಗ್ ಕೌಚ್ ವಿಚಾರವಾಗಿ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ.

ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನಟಿ ದೀಕ್ಷಾ ಪಂತ್

ದೀಕ್ಷಾ ಪಂತ್

Profile Pushpa Kumari Aug 27, 2025 7:29 PM

ಹೈದರಾಬಾದ್‌: ಸಿನಿಮಾ ರಂಗದಲ್ಲಿ ಎಲ್ಲರಿಗೂ ಉತ್ತಮ ಅವಕಾಶ ಸಿಗಲಾರದು. ಕೆಲವರಿಗೆ ಈ ಸಿನಿ ರಂಗ ಹೂವಿನ ಹಾಸಿಗೆಯಾದರೆ ಇನ್ನು ಕೆಲವರಿಗೆ ಮುಳ್ಳಿನ ಹಾಸಿಗೆ. ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ವರ್ಷಗಟ್ಟಲೆ ಕಾದವರೂ ಅನೇಕರಿದ್ದಾರೆ. ಇನ್ನು ಕೆಲವರು ಅದೃಷ್ಟ ಎಂಬಂತೆ ಅವಕಾಶ ಪಡೆಯುತ್ತಾರೆ. ಅದರಲ್ಲೂ ಹೀರೋಯಿನ್ ಆಗಬೇಕೆಂದರೆ ಎಲ್ಲಕ್ಕೂ ತಯಾರಿರಬೇಕು ಎನ್ನುವ ಮತು ಕೇಳಿ ಬರುತ್ತದೆ. ಕೆಲವೊಮ್ಮೆ ಕಾಸ್ಟಿಂಗ್ ಕೌಚ್ ಸಮಸ್ಯೆ ಕೂಡ ನಿಭಾಯಿಸ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ತೆಲುಗು ಸಿನಿಮಾ ರಂಗದ ಖ್ಯಾತ ನಟಿ ದೀಕ್ಷಾ ಪಂತ್ (Diksha Panth) ಸಿನಿ ರಂಗದ ಕೆಲವು ಗೌಪ್ಯ ವಿಚಾರಗಳ ಬಗ್ಗೆ ಹೇಳಿಕೆ ನೀಡಿದ್ದಾರೆ‌. ಇತ್ತೀಚೆಗಷ್ಟೇ ನಟಿ ದೀಕ್ಷಾ ಪಂತ್ ನೀಡಿದ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕು, ಬಿಗ್ ಬಾಸ್ ಶೋ ಅನುಭವ ಹಾಗೂ ಸಿನಿಮಾ ರಂಗದಲ್ಲಿ ಇರುವ ಕಾಸ್ಟಿಂಗ್ ಕೌಚ್ ವಿಚಾರವಾಗಿ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ.

ಅಲ್ಲು ಅರ್ಜುನ್ ಅಭಿನಯದ 'ವರುಡು' ಸಿನಿಮಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ದೀಕ್ಷಾ ಪಂತ್ ಬಳಿಕ 'ನೂತಿಲೋ ಕಪ್ಪಲು', 'ಗೋಪಾಲ ಗೋಪಾಲ', 'ಶಂಕರಭರಣಂ', 'ರಚ್ಚಾ', 'ಒಕ ಲೈಲಾ ಕೋಸಂ', 'ಸೊಗ್ಗಾಡೆ ಚಿನ್ನಿ ನಾಯನ', 'ಬಂತಿಪೂಲ ಜಾನಕಿ', 'ಈಗೋ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ದೀಕ್ಷಾ ಸಿನಿಮಾ ರಂಗದ ಸಕ್ಸಸ್ ಮತ್ತು ಸೆಕ್ಸ್ ಎಂಬ ಅರ್ಥದಲ್ಲಿ ಅಭಿನ್ನ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನಿಮಾ ರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಸಂದರ್ಶಕಿಯು ನಟಿ ದೀಕ್ಷಾ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದ ನಟಿ ದಿಶಾ, ಸೆಕ್ಸ್ ಆ್ಯಂಡ್ ಸಕ್ಸಸ್ ಇಬ್ಬರಿಗೂ ಇಷ್ಟವಿರುವಾಗ ಮಧ್ಯದಲ್ಲಿರು ಇರೋರಿಗೆ ಏನು ಸಮಸ್ಯೆ? ನಾನು ನನ್ನ ವೃತ್ತಿ ಜೀವನದಲ್ಲಿ ಇದೂವರೆಗೆ ಕಾಸ್ಟಿಂಗ್ ಕೌಚ್ ಸಮಸ್ಯೆಗಳನ್ನು ಎದುರಿಸಿಲ್ಲ. ಹೀಗಾಗಿ ಯಾರಿಗೆ ಯಾವುದು ಸರಿ ಎನ್ನಿಸುತ್ತದೆಯೋ ಅದನ್ನೇ ಮಾಡಬೇಕು. ಅವರು ತಮ್ಮ ಸಕ್ಸಸ್ ಗಾಗಿ ಮಾಡಲು ಹೊರಟರೆ ಅದು ಅವರ ನಿರ್ಧಾರ. ಅದನ್ನು ಸರಿ ತಪ್ಪು ಎನ್ನುವ ನಿರ್ಣಯಕ್ಕೆ ನಾವು ಬರಲು ಸಾಧ್ಯವಿಲ್ಲ. ವೈಯಕ್ತಿಕವಾಗಿ ನನಗೆ ಕಾಸ್ಟಿಂಗ್ ಕೌಚ್ ಸಮಸ್ಯೆ ಬಂದರೆ ನಾನು ಅಂತಹ ವಿಚಾರದಿಂದ ಹಾಗೂ ವ್ಯಕ್ತಿಯಿಂದ ದೂರವಿರುತ್ತೇನೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:The Devil Movie: ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ʼಇದ್ರೆ ನೆಮ್ದಿಯಾಗ್ ಇರ್ಬೇಕ್ʼ ಹಾಡು ಕಾಪಿನಾ? ಇಲ್ಲಿದೆ ಪ್ರೂಫ್‌

ಸಿನಿಮಾ ರಂಗದಲ್ಲಿ ಆರಂಭಿಕ ದಿನದಲ್ಲಿ ಆದ ಕೆಲವು ಘಟನೆ ಬಗ್ಗೆ ದೀಕ್ಷಾ ಮಾತನಾಡಿ, ಸಿನಿಮಾದ ಉತ್ತಮ ಅವಕಾಶಕ್ಕಾಗಿ ನಾನು ಕಾಯುತ್ತಿದ್ದಾಗ ಕೆಲವರು ಇಂತಹ ವಿಚಾರದ ಬಗ್ಗೆ ತಿಳಿಸಿ ಜಾಗೃತಿ ವಹಿಸುವಂತೆ ಸಲಹೆ ನೀಡುತ್ತಿದ್ದರು. ಕೆಲವರು ಸಲುಗೆಯಿಂದ ವರ್ತಿಸಿದ್ದು ಇದೆ. ಆಗೆಲ್ಲ ನಾನು ನೇರವಾಗಿ 'ನೋ' ಎಂದು ಹೇಳುತ್ತಿದ್ದೆ. ಹೀಗಾಗಿ ಕೂಡಲೇ ಅವರು ನನ್ನನ್ನು ಆ ಸಿನಿಮಾದಿಂದ ತೆಗೆದು ಹಾಕುತ್ತಿದ್ದರು. ಹಾಗೆಂದ ಮಾತ್ರಕ್ಕೆ ಬರೀ ಅವಕಾಶಗಳಿಗಾಗಿ ನಾನು ಎಲ್ಲರೊಂದಿಗೆ ಅನ್ಯೋನ್ಯವಾಗಿ ಇರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನಾನು ಸಿನಿಮಾರಂಗದ ಯಶಸ್ವಿ ನಟಿಯಾಗಲು ಸಾಧ್ಯವಾಗಲಿಲ್ಲ ಎಂದು ದೀಕ್ಷಾ ಪಂತ್ ತಿಳಿಸಿದ್ದಾರೆ.

ನಟಿ ದೀಕ್ಷಾ ಪಂತ್ ಸೆಕೆಂಡ್ ಹೀರೋಯಿನ್ ಆಗಿ ಖ್ಯಾತಿ ಪಡೆದಿದ್ದಾರೆ. ಸಿನಿಮಾ ರಂಗದಲ್ಲಿ ಸ್ವಲ್ಪ ಅವಕಾಶ ಕಡಿಮೆಯಾಗುತ್ತಾ ಬಂದ ಕಾರಣ ಬಿಗ್ ಬಾಸ್‌ ರಿಯಾಲಿಟಿ ಶೋ ಗೆ ನಟಿ ದೀಕ್ಷಾ ಎಂಟ್ರಿ ಕೊಟ್ಟರು. ಬಿಗ್ ಬಾಸ್ ತೆಲುಗು ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಇವರು ಸ್ವಲ್ಪ ಮಟ್ಟಿಗೆ ಜನಪ್ರಿಯತೆ ಕೂಡ ಪಡೆದರು. ದೀಕ್ಷಾ 'ಈಗೋ' ಸಿನಿಮಾದಲ್ಲಿ ಕೊನೆದಾಗಿ ಕಾಣಿಸಿಕೊಂಡಿದ್ದರು. ಕಳೆದ 8 ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದಾರೆ.