ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajey: The Untold Story of a Yogi: ಯೋಗಿ ಆದಿತ್ಯನಾಥ್‌ ಜೀವನಾಧಾರಿತ ಚಿತ್ರಕ್ಕೆ ನೋಟಿಸ್!

'ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ' ( Ajey: The Untold Story of a Yogi) ಚಿತ್ರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ (Bombay High Court ) ಇದೀಗ ಸೆನ್ಸಾರ್ ಮಂಡಳಿಗೆ (Censor Board) ನೋಟಿಸ್ ಜಾರಿ ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದಾದ ಬಳಿಕ ಚಿತ್ರಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಸೆನ್ಸಾರ್ ಮಂಡಳಿಗೆ ಬಾಂಬೆ ಹೈಕೋರ್ಟ್ ನೋಟಿಸ್

ಮುಂಬೈ: 'ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ' (Ajey: The Untold Story of a Yogi) ಚಿತ್ರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ (Bombay High Court ) ಇದೀಗ ಸೆನ್ಸಾರ್ ಮಂಡಳಿಗೆ (Censor Board) ನೋಟಿಸ್ ಜಾರಿ ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದಾದ ಬಳಿಕ ಚಿತ್ರಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಈ ಚಿತ್ರವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ( Uttar Pradesh Chief Minister Yogi Adityanath) ಅವರ ಜೀವನವನ್ನು ಆಧರಿಸಿದ್ದು, ಇದಕ್ಕೆ ಅನುಮೋದನೆ ನೀಡುವಲ್ಲಿ ವಿಳಂಬ ಮಾಡಿರುವುದನ್ನು ನೋಟಿಸ್ ನಲ್ಲಿ ಪ್ರಶ್ನಿಸಲಾಗಿದೆ.

'ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ' ಚಿತ್ರವು ಈಗ ಸುದ್ದಿ ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದಾದ ಬಳಿಕ ಸೆನ್ಸಾರ್ ಮಂಡಳಿಗೆ ನೋಟಿಸ್ ಜಾರಿ ಮಾಡಿರುವ ಬಾಂಬೆ ಹೈಕೋರ್ಟ್ ಈ ಚಿತ್ರಕ್ಕೆ ಅನುಮೋದನೆ ನೀಡುವಲ್ಲಿ ವಿಳಂಬ ಮಾಡಿರುವುದನ್ನು ಪ್ರಶ್ನಿಸಿದೆ ಎನ್ನಲಾಗಿದೆ.

ಈ ಕುರಿತು ಬಾರ್ ಅಂಡ್ ಬೆಂಚ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ' ಸಿನಿಮಾದ ಅನುಮೋದನೆಯನ್ನು ವಿಳಂಬ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದೆ ಎಂದು ಹೇಳಿದೆ.

'ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ' ಚಿತ್ರವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿದೆ. ಅಲ್ಲದೇ ಈ ಚಿತ್ರವು ಶಾಂತನು ಗುಪ್ತಾ ಬರೆದಿರುವ 'ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್' ಪುಸ್ತಕದಿಂದ ಪ್ರೇರೇಪಿಸಲ್ಪಟ್ಟಿದೆ.

ಚಿತ್ರದ ಅನುಮೋದನೆಗೆ ವಿಳಂಬ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಬೆ ಹೈಕೋರ್ಟ್ ಸಿಬಿಎಫ್‌ಸಿಗೆ ನೋಟಿಸ್ ನೀಡಿದೆ. ಈ ಚಿತ್ರವು ಯೋಗಿ ಆದಿತ್ಯನಾಥ್ ಅವರ ಜೀವನವನ್ನು ಆಧರಿಸಿರುವುದರಿಂದ ರಾಜಕೀಯ ಮತ್ತು ಸಾಮಾಜಿಕವಾಗಿ ಸೂಕ್ಷ್ಮ ವಿಷಯವೆಂದು ಸೆನ್ಸಾರ್ ಮಂಡಳಿ ಪರಿಗಣಿಸಿದೆ ಎನ್ನಲಾಗಿದೆ.



ಇದನ್ನೂ ಓದಿ: Operation Kalanemi: ಆಪರೇಷನ್‌ ಕಾಲನೇಮಿ; ನಕಲಿ ಬಾಬಾಗಳ ಬೇಟೆಗಿಳಿದ ಯುಪಿ ಪೊಲೀಸರು!

ಯಾವಾಗ ಬಿಡುಗಡೆ?

'ಅಜಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ' ಚಿತ್ರವು ಮುಂದಿನ ಆಗಸ್ಟ್ 1ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ನಟ ಅನಂತ್ ಜೋಶಿ ಯೋಗಿ ಆದಿತ್ಯನಾಥ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ದಿನೇಶ್ ಲಾಲ್ ಯಾದವ್ (ನಿರುವಾ), ಪರೇಶ್ ರಾವಲ್, ಪವನ್ ಮಲ್ಹೋತ್ರಾ, ಅಜಯ್ ಮೆಂಗಿ, ರಾಜೇಶ್ ಖಟ್ಟರ್, ಗರಿಮಾ ವಿಕ್ರಾಂತ್ ಸಿಂಗ್ ಮತ್ತು ಸರ್ವರ್ ಅಹುಜಾ ಮೊದಲಾದವರು ಕಾಣಿಸಿಕೊಂಡಿದ್ದಾರೆ.