The Bengal Files: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಬೆಂಗಾಳ್ ಫೈಲ್ಸ್' ಸೆನ್ಸಾರ್ ಶಿಪ್ ಅರ್ಜಿ ವಜಾ
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಬೆಂಗಾಳ ಫೈಲ್ಸ್ʼ ಹಿಂದಿ ಚಿತ್ರದಲ್ಲಿ ತಮ್ಮ ಅಜ್ಜ ಗೋಪಾಲ್ ಚಂದ್ರ ಮುಖರ್ಜಿ ಅವರನ್ನು ಮಾನಹಾನಿಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರರಾದ ಶಂತನು ಮುಖರ್ಜಿ ಸಲ್ಲಿಸಿರುವ ದೂರನ್ನು ಪರಿಶೀಲಿಸಿರುವ ಕೋಲ್ಕತಾ ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. 1946ರ ಆಗಸ್ಟ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಕೋಮು ಗಲಭೆಯನ್ನು ಆಧರಿಸಿರುವ ಚಿತ್ರ ಇದಾಗಿದೆ.

-

ಕೋಲ್ಕತಾ: ʼದಿ ಬೆಂಗಾಳ್ ಫೈಲ್ಸ್ʼ (The Bengal Files) ಚಿತ್ರದ ಸೆನ್ಸಾರ್ ಶಿಪ್ ಅರ್ಜಿಯನ್ನು (Censorship Request) ಕೋಲ್ಕತಾ ಹೈಕೋರ್ಟ್ (Calcutta High Court) ವಜಾಗೊಳಿಸಿದ್ದು, ಇದರಿಂದ ಚಿತ್ರ ನಿರ್ಮಾಪಕರಿಗೆ ಕೊಂಚ ನಿರಾಳವಾದಂತಾಗಿದೆ. 1946ರ ಆಗಸ್ಟ್‌ನಲ್ಲಿ ಕೋಲ್ಕತಾದಲ್ಲಿ ನಡೆದ ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್ಸ್ (The Great Calcutta Killings) ಎಂದು ಕರೆಯಲ್ಪಡುವ ಕೋಮು ಗಲಭೆಯನ್ನು ಆಧರಿಸಿರುವ ಚಿತ್ರ 'ದಿ ಬೆಂಗಾಳ್ ಫೈಲ್ಸ್' (The Bengal Files) ಕಳೆದ ಶುಕ್ರವಾರ (ಸೆ. 5) ಬಿಡುಗಡೆಯಾಗಿತ್ತು. ಇದಕ್ಕೆ ಸಂಬಂಧಿಸಿ ಸಲ್ಲಿಸಲಾಗಿದ್ದ ಸೆನ್ಸಾರ್ ಶಿಪ್ ಅರ್ಜಿಯನ್ನು ಇದೀಗ ಕೋಲ್ಕತಾ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ತಮ್ಮ ಅಜ್ಜ ಗೋಪಾಲ್ ಚಂದ್ರ ಮುಖರ್ಜಿ ಅವರನ್ನು ಮಾನಹಾನಿಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರ ಶಂತನು ಮುಖರ್ಜಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸೆನ್ಸಾರ್ ಪ್ರಮಾಣೀಕರಣದ ಬಗ್ಗೆ ತನಿಖೆ ನಡೆಸಬೇಕು. ಚಲನಚಿತ್ರವನ್ನು ಪ್ರಮಾಣೀಕರಿಸುವ ಮೊದಲು ಸೆನ್ಸಾರ್ ಮಂಡಳಿಯು ಯಾವ ನಿಯತಾಂಕಗಳನ್ನು ತೆಗೆದುಕೊಂಡಿದೆ ಎಂಬುದರ ಕುರಿತು ತನಿಖೆ ನಡೆಸಬೇಕೆಂದು ಅವರು ನ್ಯಾಯಾಲಯಕ್ಕೆ ಕೋರಿದ್ದರು. ಆದರೆ ಇದೀಗ ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಅರ್ಜಿದಾರರು ಆರ್‌ಟಿಐ ಅಡಿಯಲ್ಲಿ ಕೆಲವು ಮಾಹಿತಿಯನ್ನು ಪಡೆಯಲು ಉದ್ದೇಶಿಸಿದ್ದಾರೆ. ಮಾಹಿತಿಯನ್ನು ಕೋರಿದ ಅವಧಿ ಮುಗಿದಿದೆ ಎಂದು ನ್ಯಾಯಮೂರ್ತಿ ಅಮೃತ ಸಿನ್ಹಾ ತಿಳಿಸಿದರು.
ಕಳೆದ ವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರು ಈ ಚಿತ್ರದಲ್ಲಿ ಮುಖರ್ಜಿಯವರ ಪಾತ್ರವನ್ನು 'ಪಥ' (ಮೇಕೆ) ಎಂಬ ಬಂಗಾಳಿ ಅರ್ಥದಲ್ಲಿ ಕರೆಯಲಾಗಿದೆ ಎಂದು ಹೇಳಿಕೊಂಡಿದ್ದರು.
ಮುಖರ್ಜಿ 1940ರ ದಶಕದಲ್ಲಿ ಮಧ್ಯ ಕೋಲ್ಕತಾದ ಬೌಬಜಾರ್ ಪ್ರದೇಶದಲ್ಲಿ ಮೇಕೆ ಮಾಂಸದ ಅಂಗಡಿಯನ್ನು ನಡೆಸುತ್ತಿದ್ದರು. ಅರ್ಜಿದಾರರು ತಮ್ಮ ಅಜ್ಜ ಒಬ್ಬ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರ ಮೇಲೆ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದರು.1946ರ ಘಟನೆಗಳಲ್ಲಿ ಅವರು ಭಾಗಿಯಾಗಿದ್ದಾರೆಂದು ಚಲನಚಿತ್ರ ನಿರ್ದೇಶಕರು ಚಿತ್ರೀಕರಿಸಿದ್ದಾರೆ. ಇದು ನಿಜವಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: Humans In Mars: ಮಂಗಳ ಗ್ರಹದಲ್ಲಿ ವಾಸಿಸಲು ನಾಲ್ವರು ರೆಡಿ- ಕೆಂಪು ಗ್ರಹದಲ್ಲಿ ಜೀವನ ಸಾಗಿಸಲು ಸವಾಲುಗಳೇನು?
ಪ್ರಸ್ತುತ ಪಶ್ಚಿಮ ಬಂಗಾಳದಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತಿಲ್ಲ. ಇದು ಅನಧಿಕೃತ ನಿಷೇಧವಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ರಾಜಕೀಯ ಒತ್ತಡ ಮತ್ತು ಬೆದರಿಕೆ ಇದಕ್ಕೆ ಕಾರಣ ಎಂದು ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ.
ಈ ಚಿತ್ರದಲ್ಲಿ ನಟ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ಶಾಶ್ವತಾ ಚಟರ್ಜಿ, ದರ್ಶನ್ ಕುಮಾರ್ ಮತ್ತು ಸೌರವ್ ದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.