ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shilpa Shetty: ಉದ್ಯಮಿಗೆ 60 ಕೋಟಿ ರೂಪಾಯಿ ವಂಚನೆ; ನಟಿ ಶಿಲ್ಪಾ ಶೆಟ್ಟಿ ದಂಪತಿಯ ವಿರುದ್ಧ ಪ್ರಕರಣ ದಾಖಲು

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಸಂಕಷ್ಟ ಎದುರಾಗಿದೆ. ಶಿಲ್ಪಾ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ವಿರುದ್ಧ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣವು ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದೆ.

ಉದ್ಯಮಿಗೆ ವಂಚನೆ; ಶಿಲ್ಪಾ ಶೆಟ್ಟಿ ದಂಪತಿಯ ವಿರುದ್ಧ ಪ್ರಕರಣ ದಾಖಲು

Vishakha Bhat Vishakha Bhat Aug 14, 2025 8:44 AM

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ (Shilpa Shetty) ಸಂಕಷ್ಟ ಎದುರಾಗಿದೆ. ಶಿಲ್ಪಾ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ (Fraud Case) ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣವು ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದೆ. ಉದ್ಯಮಿ ದೀಪಕ್ ಕೊಠಾರಿ ಅವರು 2015-2023 ರವರೆಗೆ ವ್ಯವಹಾರ ವಿಸ್ತರಣೆಗಾಗಿ 60.48 ಕೋಟಿ ರೂ.ಗಳನ್ನು ನೀಡಿದ್ದರು. ಆದರೆ ಕುಂದ್ರಾ ದಂಪತಿ ಅದನ್ನು ತಮ್ಮ ವಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ.

2015 ರಲ್ಲಿ ರಾಜೇಶ್ ಆರ್ಯ ಎಂಬ ಏಜೆಂಟ್ ಮೂಲಕ ದಂಪತಿಯ ಪರಿಚಯವಾಯಿತು ಎಂದು ಕೊಠಾರಿ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ, ದಂಪತಿ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು. ಶಿಲ್ಪಾ ಶೆಟ್ಟಿ ಅವರು ಶೇ 87 ರಷ್ಟು % ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿದ್ದರು. ಶ್ರೀ ಆರ್ಯ ಕಂಪನಿಗೆ ವಾರ್ಷಿಕ ಶೇ.12 ರಷ್ಟು ಬಡ್ಡಿದರದಲ್ಲಿ 75 ಕೋಟಿ ರೂಪಾಯಿ ಸಾಲ ಕೇಳಿದ್ದರು. ಕೊಠಾರಿ ಅವರು ಏಪ್ರಿಲ್ 2015 ರಲ್ಲಿ ಷೇರು ಚಂದಾದಾರಿಕೆ ಒಪ್ಪಂದದ ಅಡಿಯಲ್ಲಿ 31.95 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ ಎಂದು ಹೇಳಿದ್ದಾರೆ.

ನಂತರ ಸೆಪ್ಟೆಂಬರ್ 2015 ರಲ್ಲಿ ಪೂರಕ ಒಪ್ಪಂದದ ಅಡಿಯಲ್ಲಿ 28.53 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಒಟ್ಟು ಮೊತ್ತವನ್ನು ಬೆಸ್ಟ್ ಡೀಲ್ ಟಿವಿಯ HDFC ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಒಟ್ಟಾರೆಯಾಗಿ, ಅವರು ಈ ಒಪ್ಪಂದಕ್ಕಾಗಿ ರೂ. 60.48 ಕೋಟಿಗೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ, ಜೊತೆಗೆ ರೂ. 3.19 ಲಕ್ಷವನ್ನು ಸ್ಟಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. ಶಿಲ್ಪಾ ಶೆಟ್ಟಿ, ಏಪ್ರಿಲ್ 2016 ರಲ್ಲಿ ಅವರಿಗೆ ವೈಯಕ್ತಿಕ ಗ್ಯಾರಂಟಿ ಕೂಡ ನೀಡಿದ್ದರು ಎಂದು ಕೊಠಾರಿ ಹೇಳಿಕೊಂಡಿದ್ದಾರೆ. ಆದರೆ ತಿಂಗಳುಗಳ ನಂತರ, ಸೆಪ್ಟೆಂಬರ್‌ನಲ್ಲಿ, ಅವರು ಕಂಪನಿಯ ನಿರ್ದೇಶಕಿ ಹುದ್ದೆಗೆ ರಾಜೀನಾಮೆ ನೀಡಿದರು.

ಈ ಸುದ್ದಿಯನ್ನೂ ಓದಿ: Dhruva Sarja: ನಿರ್ದೇಶಕರಿಂದ ಹಣ ಪಡೆದು ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ FIR ದಾಖಲು

ಅವರ ರಾಜಿನಾಮೆ ಬಳಿಕ ಕಂಪನಿಯ ವಿರುದ್ಧ 1.28 ಕೋಟಿ ರೂ.ಗಳ ದಿವಾಳಿತನ ಪ್ರಕರಣ ಬೆಳಕಿಗೆ ಬಂದಿತು. ಅದರ ಕುರಿತು ತನಗೆ ಗೊತ್ತಿರಲಿಲ್ಲ. ಸಂಪೂರ್ಣ ವಿಷಯ ತಿಳಿದ ಬಳಿಕ ನಾನು ಸಾಕಷ್ಟು ಬಾರಿ ಕುಂದ್ರಾ ದಂಪತಿಗಳ ಬಳಿ ಹಣಕ್ಕಾಗಿ ಮನವಿ ನೀಡಿದ್ದೇನೆ. ಪದೇ ಪದೇ ವಿನಂತಿಸಿದರೂ ಅವರು ಅದನ್ನು ನಿರಾಕರಿಸಿದರು ಎಂದು ಕೊಠಾರಿ ಹೇಳಿದ್ದಾರೆ. ಇದೀಗ ವಂಚನೆಯ ಕುರಿತು ಅವರು ದೂರು ದಾಖಲಿಸಿದ್ದಾರೆ. ಆರಂಭದಲ್ಲಿ ಜುಹು ಪೊಲೀಸ್ ಠಾಣೆಯಲ್ಲಿ ನಕಲಿ ಮತ್ತು ವಂಚನೆಗಾಗಿ ಪ್ರಕರಣ ದಾಖಲಾಗಿತ್ತು, ಆದರೆ ನಂತರ 10 ಕೋಟಿ ರೂ.ಗಳನ್ನು ಮೀರಿದ ಕಾರಣ ಆರ್ಥಿಕ ಅಪರಾಧಗಳ ವಿಭಾಗ (EOW) ಗೆ ಹಸ್ತಾಂತರಿಸಲಾಯಿತು. ಈಗ EOW ಪ್ರಕರಣದ ತನಿಖೆ ನಡೆಸುತ್ತಿದೆ.