Ceasefire Violation: ಪಾಕ್ ಕದನ ವಿರಾಮ ಉಲ್ಲಂಘನೆ ಬೆನ್ನಲ್ಲೇ ಬಾಲಿವುಡ್‌ನ ಈ ಸಿನಿಮಾ ಸೀನ್ ಫುಲ್ ವೈರಲ್-ಅಂತಹದ್ದೇನಿದೆ ಇದರಲ್ಲಿ?
Lakshya Movie Scene: ಕದನ ವಿರಾಮ ಘೋಷಣೆ ಕೆಲವೇ ಗಂಟೆಗಳಲ್ಲಿ ಅದನ್ನು ಉಲ್ಲಂಘಿಸಿ ದಾಳಿಗೆ ನಡೆಸಿ ಪಾಕ್ ಸೇನೆ ಕಿತಾಪತಿ ಮಾಡಿದೆ. ಇದರ ಬೆನ್ನಲ್ಲೇ ಬಾಲಿವುಡ್ ಲಕ್ಷ್ಯ ಸಿನಿಮಾದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಂಥಹದ್ದೇನಿದೆ ಇದರಲ್ಲಿ? ಈ ದೃಶ್ಯಕ್ಕೂ ಕದನ ವಿರಾಮ ಉಲ್ಲಂಘನೆಗೂ ಏನು ಸಂಬಂಧ ಅಂತಿರಾ? ಇಲ್ಲಿ ಡಿಟೇಲ್ಸ್.


ನವದೆಹಲಿ: ಭಾರತ ಮತ್ತು ಪಾಕಿಸ್ತಾನ 'ದ್ವಿಪಕ್ಷೀಯ ಒಪ್ಪಂದ' ಮಾಡಿಕೊಂಡ ಬಂದ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ(Ceasefire Violation) ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಹಾರಿಸಿತು. ಪಾಕ್ ಕುಕೃತ್ಯಕ್ಕೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಪಾಕ್‌ನ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.ಇದರ ಬೆನ್ನಲ್ಲೇ ಬಾಲಿವುಡ್ ಲಕ್ಷ್ಯ ಸಿನಿಮಾದ(Lakshya Movie) ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಂಥಹದ್ದೇನಿದೆ ಇದರಲ್ಲಿ? ಈ ದೃಶ್ಯಕ್ಕೂ ಕದನ ವಿರಾಮ ಉಲ್ಲಂಘನೆಗೂ ಏನು ಸಂಬಂಧ ಅಂತಿರಾ? ಇಲ್ಲಿ ಡಿಟೇಲ್ಸ್
ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಹೃತಿಕ್ ರೋಷನ್ ಅವರ 'ಲಕ್ಷ್ಯ' ಚಲನಚಿತ್ರದ ಕ್ಲಿಪ್ ವೈರಲ್ ಆಗ್ತಿದೆ. ವೀಡಿಯೊದಲ್ಲಿ, ಹಿರಿಯ ನಟ ಓಂ ಪುರಿ ಹೃತಿಕ್‌ಗೆ ಯುದ್ಧ ಪಾಠ ಹೇಳುತ್ತಿರುವುದು ಕಂಡುಬಂದಿದೆ, ಇದರಲ್ಲಿ ಪಾಕಿಸ್ತಾನ ಸೋತರೆ, ಅದು ಮತ್ತೆ ಪ್ರತಿದಾಳಿ ಮಾಡಲು ಪ್ರಯತ್ನಿಸುತ್ತದೆ ಎಂದು ಹೇಳುವುದನ್ನು ಕೇಳಬಹುದು. "ನನಗೆ ಪಾಕ್ ಬಗ್ಗೆ ಚೆನ್ನಾಗಿ ಗೊತ್ತಿದೆ. ಒಂದು ವೇಳೆ ಪಾಕಿಸ್ತಾನ ಸೋತರೆ, ಅದು ತಿರುಗಿ ಮತ್ತೆ ಬರುತ್ತದೆ... ನೀವು ಗೆದ್ದರೆ, ತಕ್ಷಣ ಅಸಡ್ಡೆ ತೋರಬೇಡಿ. ನನ್ನ ಮಾತುಗಳನ್ನು ನೆನಪಿಡಿ" ಎಂದು ಮೇಜರ್ ಪ್ರೀತಮ್ ಸಿಂಗ್ ಪಾತ್ರವನ್ನು ನಿರ್ವಹಿಸಿದ ಓಂ ಪುರಿ ಕರಣ್ ಶೆರ್ಗಿಲ್‌ಗೆ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಕರಣ್ ನೆನಪಿನಲ್ಲಿಡುವೆ ಎಂದು ಹೇಳುತ್ತಾರೆ.
ಲಕ್ಷ್ಯ ಸಿನಿಮಾದ ದೃಶ್ಯ ಇಲ್ಲಿದೆ
Ceasefire is fine but never forget Om Puri’s words 🙏 pic.twitter.com/3mcb22TA94
— Shekhar Dutt (@DuttShekhar) May 10, 2025
ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ, ವೀಡಿಯೊವನ್ನು ಹಲವಾರು ನೆಟಿಜನ್‌ಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಅನೇಕ ಕಮೆಂಟ್‌ಗಳು ಬಂದಿದ್ದು, "ಪಾಕಿಸ್ತಾನದ ಹಾವುಗಳನ್ನು ಎಂದಿಗೂ ನಂಬಬೇಡಿ!" ಒಬ್ಬರು ನೆಟ್ಟಿಗರು ಪ್ರತಿಕ್ರಿಯಿಸಿದರೆ, "ಕದನ ವಿರಾಮ ಸರಿ, ಆದರೆ ಓಂ ಪುರಿ ಅವರ ಮಾತುಗಳನ್ನು ಎಂದಿಗೂ ಮರೆಯಬೇಡಿ" ಎಂದು ಮತ್ತೊರ್ವ ಹೇಳಿದ್ದಾರೆ.
"ರೀಲ್ ಸಂಭಾಷಣೆ, ಆದರೆ ನಿಜವಾದ ಸಂದೇಶ," ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.