BBK 12: ಕಾದಿದ್ದು ಸಾಕು, ಬಿಗ್ ಬಾಸ್ ಈಸ್ ಬ್ಯಾಕ್: ಬಿಗ್ ಬಾಸ್ ಕನ್ನಡದ ಲೋಗೋ ಲಾಂಚ್
Bigg Boss Kannada season 12 Logo: ಕನ್ನಡದ ಬಿಗ್ ಬಾಸ್ ಬಗ್ಗೆ ಮಾತ್ರ ಯಾವುದೇ ಅಪ್ಡೇಟ್ ಇರಲಿಲ್ಲ. ಇದೀಗ ಕಲರ್ಸ್ ಸದ್ಯದಲ್ಲೇ ಬಿಗ್ ಬಾಸ್ ಆರಂಭದ ಸೂಚನೆ ನೀಡಿದೆ. ಇದರ ಮೊದಲ ಭಾಗವಾಗಿ ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 12ರ ಲೋಗೋವನ್ನು ಬಿಡುಗಡೆ ಮಾಡಿದೆ.

BBK 12 Logo

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಯಾವಾಗ ಶುರುವಾಗುತ್ತೆ ಎಂಬವರಿಗೆ ಇದೀಗ ಕಲರ್ಸ್ ಕನ್ನಡ ವಾಹಿನಿ ಸಣ್ಣ ಝಲಕ್ ಮೂಲಕ ಶುಭ ಸುದ್ದಿ ನೀಡಿದೆ. ಈಗಾಗಲೇ ಮಲಯಾಳಂ ಬಿಗ್ ಬಾಸ್ ಶುರುವಾಗಿದೆ. ಹಿಂದಿಯಲ್ಲಿ ಆಗಸ್ಟ್ 23ಕ್ಕೆ ಸಲ್ಮಾನ್ ಖಾನ್ ಚಾಲನೆ ನೀಡಲಿದ್ದಾರೆ. ತೆಲುಗಿನಲ್ಲಿ ಕೂಡ ಪ್ರೊಮೋ ರಿಲೀಸ್ ಆಗಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ ಶುರುವಾಗುವ ಅಂದಾಜಿದೆ. ಆದರೆ, ಕನ್ನಡದ ಬಿಗ್ ಬಾಸ್ ಬಗ್ಗೆ ಮಾತ್ರ ಯಾವುದೇ ಅಪ್ಡೇಟ್ ಇರಲಿಲ್ಲ. ಇದೀಗ ಕಲರ್ಸ್ ಸದ್ಯದಲ್ಲೇ ಬಿಗ್ ಬಾಸ್ ಆರಂಭದ ಸೂಚನೆ ನೀಡಿದೆ.
ಇದರ ಮೊದಲ ಭಾಗವಾಗಿ ಕಲರ್ಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 12ರ ಲೋಗೋವನ್ನು ಬಿಡುಗಡೆ ಮಾಡಿದೆ. ಇಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹೊಸ ಬಿಬಿಕೆ 12ನ ಅದ್ಭುತ ಲೋಗೋ ಅನಾವರಣಗೊಳಿಸಲಾಗಿದೆ. ಲೋಗೋದ ಮಧ್ಯೆ 12 ಎಂದು ಬರೆಯಲಾಗಿದ್ದು, ಇದನ್ನು ಡೈಮಂಡ್ ಡಿಸೈನ್ನಿಂದ ಕೆತ್ತಿದಂತಿದೆ. ಅಭಿಮಾನಿಗಳು ಸದ್ಯ ಲೋಗೋ ನೋಡಿಯೇ ಥ್ರಿಲ್ ಆಗಿದ್ದಾರೆ.
ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ 12 ಕನ್ನಡ ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ. ಮತ್ತೊಂದು ವಿಶೇಷ ಎಂದರೆ, ಸಾಮಾನ್ಯವಾಗಿ ಪ್ರತಿ ಭಾರಿ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಶನಿವಾರ ಮಧ್ಯರಾತ್ರಿ ಶೂಟಿಂಗ್ ಆರಂಭವಾಗಿ ರವಿವಾರದಂದು ಟೆಲಿಕಾಸ್ಟ್ ಆಗುತ್ತದೆ. ಆದರೆ, ಈಗ ಬಂದಿರುವ ಮಾಹಿತಿಯ ಪ್ರಕಾರ, ಬಿಬಿಕೆ 12 ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28ರಿಂದ ಅಂದರೆ ಸೋಮವಾರದಿಂದ ಆರಂಭವಾಗುವ ಸಾಧ್ಯ ಇದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವ ಕಾರ್ಯ ಕೊನೆಯ ಹಂತದಲ್ಲಿದೆಯಂತೆ. ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳು ಕೂಡ ಭರ್ಜರಿ ಆಗಿ ಸಾಗುತ್ತಿದೆ. ಕಿಚ್ಚ ಸುದೀಪ್ ಅವರ ಮೊದಲ ಪ್ರೊಮೋ ಶೂಟ್ ಕೂಡ ನಡೆದಿದೆ. ಇದು ಮುಂದಿನ ವಾರದಲ್ಲಿ ಹೊರಬೀಳಬಹುದು. ಇದರ ಮಧ್ಯೆ ಈ ಬಾರಿ ದೊಡ್ಮನೆಯೊಳಗೆ ಹೋಗುವ ಸ್ಪರ್ಧಿಗಳ ಪಟ್ಟಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
12ನೇ ಸೀಸನ್ಗೆ ಇವರು ಮನೆಯೊಳಗೆ ಹೋಗಲಿದ್ದಾರೆ ಎಂದು ಅನೇಕ ಹೆಸರುಗಳು ಕೇಳಿಬರುತ್ತಿವೆ. ಈ ಪೈಕಿ ನ್ಯೂಸ್ ಆಂಕರ್ ಚಂದನ್ ಶರ್ಮಾ, ಡಾ ಬ್ರೋ, ಅರ್ಚನಾ ಜೋಯಿಸ್, ಜಾಹ್ನವಿ, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಪೂಜಾ ಲೋಕೇಶ್, ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲಿ ನಟಿಸಿದ್ದ ಧನುಷ್ ಗೌಡ ಹೀಗೆ ಕೆಲವು ಹೆಸರುಗಳಿವೆ.
Bhagya Lakshmi Serial: ಭಾಗ್ಯಾಳನ್ನು ಚಿಂತೆಗೆ ದೂಡಿದ ಆದೀಶ್ವರ್ ಕೊಟ್ಟ 25 ಲಕ್ಷ ರೂ. ಗಿಫ್ಟ್