Salman Khan: ಗಣೇಶೋತ್ಸವ ಸಂಭ್ರಮದಲ್ಲಿ ಮಿಂದೆದ್ದ ಬಾಲಿವುಡ್ ನಟ ಸಲ್ಮಾನ್ ಖಾನ್- ವಿಡಿಯೊ ಇಲ್ಲಿದೆ ನೋಡಿ
Salman Khan in Ganpati Festival: ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಗಣಪತಿ ದರ್ಶನಕ್ಕಾಗಿ ಮಹಾರಾಷ್ಟ್ರ ಸಚಿವ ಆಶಿಶ್ ಶೇಲಾರ್ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಸಚಿವರಾದ ಆಶಿಸ್ ಶೇಲಾರ್ ಅವರೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ಸದ್ಯ ಈ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

-

ಮುಂಬೈ: ಸಾಂಪ್ರದಾಯಿಕ ಗಣೇಶ ಹಬ್ಬವು ಒಂದೊಂದು ಪ್ರದೇಶದಲ್ಲಿಯೂ ಒಂದೊಂದು ತರನಾಗಿ ಆಚರಣೆ ಮಾಡಲಾಗುತ್ತದೆ.ಕೆಲವರು ಮೂರು ದಿನಕ್ಕೆ ಆಚರಣೆ ಮುಗಿಸಿದರೆ ಇನ್ನು ಕೆಲವರು ಒಂದು ವಾರ, 15ದಿನ ಎಂದೆಲ್ಲ ಗಣೇಶ ಹಬ್ಬ ಆಚರಿಸುತ್ತಾರೆ. ಈ ಸಾಲಿನಲ್ಲಿ ಸೆಲೆ ಬ್ರಿಟಿಗಳು ಕೂಡ ಹೊರತಲ್ಲ ಎನ್ನಬಹುದು. ಆಗಸ್ಟ್ 28ರಂದು ಗಣೇಶ ಹಬ್ಬವು ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ಮುಂಬೈನಲ್ಲಿ ತಮ್ಮ ಕುಟುಂಬದೊಂದಿಗೆ ಗಣೇಶ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಇದರ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಗಣಪತಿ ದರ್ಶನಕ್ಕಾಗಿ ಮಹಾರಾಷ್ಟ್ರ ಸಚಿವ ಆಶಿಶ್ ಶೇಲಾರ್ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಸಚಿವರಾದ ಆಶಿಸ್ ಶೇಲಾರ್ ಅವರೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು ಸದ್ಯ ಈ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟ ಸಲ್ಮಾನ್ ಖಾನ್ ಅವರು ತಮ್ಮ ಸಿನಿಮಾ ಹಾಗೂ ರಿಯಾಲಿಟಿ ಶೋ ಹಿಂದಿ ಬಿಗ್ ಬಾಸ್ ಮೂಲಕ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಈ ಹಿಂದಿನಿಂದಲೂ ಬೆದರಿಕೆಗಳು ಕೂಡ ಅನೇಕ ಕಾರಣಕ್ಕೆ ಬರುತ್ತಿದ್ದು ಅವರಿಗೆ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಹೀಗಾಗಿ ಅವರು ಹೆಚ್ಚಾಗಿ ಸಿನಿಮಾ ಹೊರತಾದ ಸಭೆ ಸಮಾರಂಭದಲ್ಲಿ ಅಷ್ಟಾಗಿ ಭಾಗವಹಿಸಲಾರರು. ಆದರೆ ಈ ಬಾರಿ ಮಹಾರಾಷ್ಟ್ರ ಸಚಿವ ಆಶಿಶ್ ಶೇಲಾರ್ ಅವರ ಮನೆಗೆ ಭೇಟಿ ನೀಡಿ ಗಣೇಶೋತ್ಸವದಲ್ಲಿ ಅವರು ಭಾಗಿಯಾಗಿದ್ದಾರೆ. ಸಚಿವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಕೆಲವು ಫೋಟೊ ಹಂಚಿಕೊಂಡಿದ್ದು ಅದನ್ನು ಕಂಡ ನೆಟ್ಟಿಗರೂ ಕೂಡ ಅಚ್ಚರಿಗೊಂಡಿದ್ದಾರೆ.
ವೈರಲ್ ಆದ ಫೋಟೊದಲ್ಲಿ ನಟ ಸಲ್ಮಾನ್ ಖಾನ್ ಅವರು ಚೆಕ್ಸ್ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶನ ಮೂರ್ತಿ ಮುಂದೆ ಕೈ ಜೋಡಿಸಿ ಪ್ರಾರ್ಥನೆ ಸಲ್ಲಿಸುವ ದೃಶ್ಯವನ್ನು ಫೋಟೊದಲ್ಲಿ ಕಾಣಬಹುದು. ಅದರ ಜೊತೆಗೆ ಗಣೇಶನ ಮೂರ್ತಿಯನ್ನು ಪೂಜಿಸುವುದನ್ನು ಸಹ ನೋಡಬಹುದು. ಭಾರೀ ಭದ್ರ ತೆಯ ನಡುವೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಟ ಸಲ್ಮಾನ್ ಖಾನ್ ಅವರು ಕ್ಯಾಮೆರಾ ಮುಂದೆ ಪೋಸ್ ಕೂಡ ನೀಡಿದ್ದಾರೆ.
अभिनेते सलमान खान यांनी आमच्या वांद्रे पश्चिम सार्वजनिक गणेशोत्सव मंडळाच्या गणरायाचे दर्शन घेतले.#GanpatiBappaMorya #Ganeshotsav #AshishShelar pic.twitter.com/LNRyE4qjNN
— Adv. Ashish Shelar - ॲड. आशिष शेलार (@ShelarAshish) September 1, 2025
ಕಳೆದ ವಾರ ಸಲ್ಮಾನ್ ಖಾನ್ ಅವರು ತಮ್ಮ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಗಣೇಶ ಹಬ್ಬ ಆಚರಿಸಿದರು. ಈ ಆಚರಣೆಯ ಕೆಲವು ಫೋಟೋ ಹಾಗೂ ವೀಡಿಯೊ ಸಹ ವೈರಲ್ ಆಗಿತ್ತು. ಕಪ್ಪು ಬಣ್ಣದ ಶರ್ಟ್ ಹಾಗೂ ಬೀಜ್ ಪ್ಯಾಂಟ್ ಧರಿಸಿದ್ದ ಸಲ್ಮಾನ್ ಖಾನ್ ಅವರು ಗಣೇಶನ ಮೂರ್ತಿಗೆ ಪ್ರಾರ್ಥನೆ ಸಲ್ಲಿಸಿದರು. ಅರ್ಬಾಜ್ ಖಾನ್, ಅರ್ಪಿತಾ, ಆಯುಷ್ ಶರ್ಮಾ ಮತ್ತು ಅವರ ಪುತ್ರರಾದ ಅಹಿಲ್ ಶರ್ಮಾ ಮತ್ತು ಆಯತ್ ಶರ್ಮಾ, ಸೊಹೈಲ್ ಖಾನ್, ಅಲ್ವಿರಾ ಖಾನ್, ಅಲಿಜೆ ಅಗ್ನಿಹೋತ್ರಿ ಸೇರಿದಂತೆ ಇಡೀ ಖಾನ್ ಫ್ಯಾಮಿಲಿ ಈ ಹಬ್ಬವನ್ನು ಅತ್ಯಂತ ವೈಭವಯುತವಾಗಿ ಆಚರಿಸಿದರು.
ಇದನ್ನು ಓದಿ:Landlord Movie: ದುನಿಯಾ ವಿಜಯ್ ಪುತ್ರಿ ರಿತನ್ಯಾ ಹುಟ್ಟುಹಬ್ಬಕ್ಕೆ ʼಲ್ಯಾಂಡ್ ಲಾರ್ಡ್ʼ ಫಸ್ಟ್ ಲುಕ್ ರಿಲೀಸ್
ಅದರೊಂದಿಗೆ ಖಾನ್ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವ ರಿತೇಶ್ ದೇಶಮುಖ್ ಮತ್ತು ಜೆನೆಲಿಯಾ ಡಿಸೋಜಾ ಅವರು ತಮ್ಮ ಮಕ್ಕಳೊಂದಿಗೆ ಸಲ್ಮಾನ್ ಖಾನ್ ಕುಟುಂಬದ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು. ನಟ ಸಲ್ಮಾನ್ ಖಾನ್ ಅವರು ಎಆರ್ ಮುರುಗದಾಸ್ ಅವರ ನಿರ್ದೇಶನದ 'ಸಿಕಂದರ್' ಎಂಬ ಸಿನಿಮಾದಲ್ಲಿ ಕೊನೆದಾಗಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಕೂಡ ಇದೇ ಸಿನಿಮಾದಲ್ಲಿ ಅಭಿನಯಿಸಿದ್ದರು ಆದರೆ ಈ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಪಡೆಯಲಿಲ್ಲ. ಅಪೂರ್ವ ಲಖಿಯಾ ನಿರ್ದೇಶನದ ಬ್ಯಾಟಲ್ ಆಫ್ ಗಾಲ್ವಾನ್ ಚಿತ್ರದಲ್ಲಿ ಅವರು ಭಾರತೀಯ ಸೇನಾ ಸೈನಿಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅದರೊಂದಿಗೆ ಬಿಗ್ ಬಾಸ್ 19ರಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದು ಈ ಮೂಲಕ ಅಭಿಮಾನಿಗಳನ್ನು ವಾರಕ್ಕೊಮ್ಮೆ ಬಂದು ರಂಜಿಸುತ್ತಿದ್ದಾರೆ.