ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೋಮೋ ಬಿಡುಗಡೆ: ಹೊಸ ಹೇರ್​ ಸ್ಟೈಲ್​ನಲ್ಲಿ ಕಿಚ್ಚ ಮಿಂಚಿಂಗ್

ಬಿಗ್ ಬಾಸ್ ಕನ್ನಡ ಹೊಸ ಸೀಸನ್ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್ಗೆ ಬಹುದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಇಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೋಮೋ ಬಿಡುಗಡೆ

Bigg Boss Kannada 12 Promo -

Profile Vinay Bhat Sep 2, 2025 8:09 PM

ಬಿಗ್ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್​ಗಾಗಿ ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್​ಗೆ ಬಹುದೊಡ್ಡ ಸರ್​ಪ್ರೈಸ್ ಸಿಕ್ಕಿದೆ. ಇಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೆ ಸ್ವಾತಂತ್ರ್ಯ ದಿನದಂದು ಆಗಸ್ಟ್ 15 ರಂದು ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿತ್ತು. ಇದೀಗ ಮೊದಲ ಪ್ರೋಮೋ ಔಟ್ ಆಗಿದೆ.

ಈ ಬಾರಿ ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್‌ ಮಾಡಲಾಗಿದೆ. ಕಿಚ್ಚ ಸುದೀಪ್ ಅಂತೂ ಉದ್ದನೆಯ ಹೊಸ ಹೇರ್​ ಸ್ಟೈಲ್​ನಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಸೆಪ್ಟೆಂಬರ್ 28 ರಿಂದ ಶೋ ಆರಂಭವಾಗಲಿದೆ ಎಂದು ಸುದೀಪ್ ಹೇಳಿದ್ದಾರೆ. ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಬಿಡುಗಡೆ ಆಗಿದೆ.

ಕರ್ನಾಟಕದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಆಚರಣೆಯ ತುಣುಕು ಪ್ರೋಮೋದಲ್ಲಿ ತೋರಿಸಲಾಗಿದೆ. ಇದರ‌ ಜತೆ ಬಿಗ್‌ ಬಾಸ್ ನೋಡುತ್ತಾ ಗಾಸಿಪ್ ಮಾಡುವ ಜನ ಸಮೂಹವನ್ನು ‌ತೋರಿಸಲಾಗಿದೆ. 'ನನ್ನ ಪ್ರೀತಿಯ ಸಮಸ್ತ ಕನ್ನಡ ಕುಟುಂಬಕ್ಕೆ ಸ್ವಾಗತ' ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ''ಹೊಸ ಸೆಟ್ ರೆಡಿ.. ಹೊಸ ಕಂಟೆಸ್ಟೆಂಟ್ ರೆಡಿ.. ಏಳು ಕೋಟಿ ಕನ್ನಡಿಗರು ಕೂಡ ರೆಡಿ.. ಸರ್ ನೀವು..?'' ಎಂಬ ಬ್ಯಾಕ್​ಗ್ರೌಂಡ್​ನಲ್ಲಿ ಮಹಿಳಾ ವಾಯ್ಸ್ ಕೇಳಿಸುತ್ತದೆ. ಇದಕ್ಕೆ ಸುದೀಪ್ ಕೂಡ 'ನಾನು ರೆಡಿ' ಎಂದು ಹೇಳಿದ್ದಾರೆ.



ಬಿಗ್​​ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಈಗಾಗಲೇ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಸ್ಪರ್ಧಿಗಳ ಸಂಭಾವ್ಯ ಪಟ್ಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪೈಕಿ ನ್ಯೂಸ್ ಆಂಕರ್ ಚಂದನ್ ಶರ್ಮಾ, ಡಾ ಬ್ರೋ, ಅರ್ಚನಾ ಜೋಯಿಸ್‌, ಜಾಹ್ನವಿ, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಪೂಜಾ ಲೋಕೇಶ್, ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲಿ ನಟಿಸಿದ್ದ ಧನುಷ್ ಗೌಡ ಹೀಗೆ ಕೆಲವು ಹೆಸರುಗಳಿವೆ.