ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಆಫೀಸ್​ನಲ್ಲಿ ಭಾಗ್ಯಾಗೆ ಸನ್ಮಾನ ಮಾಡಲು ಮುಂದಾದ ಆದೀ: ತಾಂಡವ್​ಗೆ ಶಾಕ್

25 ಲಕ್ಷ ಹಣವನ್ನು ಭಾಗ್ಯ ಆದೀ ನಡೆಸುತ್ತಿರುವ ಚಾರಿಟಿಗೆ ಕೊಡಲು ನಿರ್ಧರಿಸಿದ್ದಾಳೆ. ಆದರೆ, ಆದೀಗೆ ನನಗೆ ಇಷ್ಟು ಸಹಾಯ ಮಾಡಿದ ಭಾಗ್ಯಾಳಿಗೆ ಏನು ಕೊಟ್ಟಿಲ್ಲವಲ್ಲ ಎಂಬ ಕೊರಗು ಕಾಣುತ್ತಿದೆ. ಇದಕ್ಕಾಗಿ ಆಫೀಸ್ನಲ್ಲಿ ಆಕೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾನೆ.

ಆಫೀಸ್​ನಲ್ಲಿ ಭಾಗ್ಯಾಗೆ ಸನ್ಮಾನ: ತಾಂಡವ್​ಗೆ ಶಾಕ್

Bhagya Lakshmi Serial -

Profile Vinay Bhat Sep 9, 2025 5:15 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ಒಳ್ಳೆಯ ತನಕ್ಕೆ ಆದೀಶ್ವರ್ ಕಾಮತ್ ಫಿದಾ ಆಗಿದ್ದಾನೆ. 25 ಲಕ್ಷ ಹಣ ಕೊಟ್ಟರೂ ಅದನ್ನು ನಾಜೂಕಾಗಿ ಆತನೇ ಕೈಗೆ ಪುನಃ ಕೊಟ್ಟು ಬಿದ್ದುವಂತಿಕೆ ಮೆರೆದಿದ್ದಾಳೆ. ಭಾಗ್ಯಾಳ ಈ ಗುಣ ಆದೀಗೆ ತುಂಬಾನೆ ಇಷ್ಟವಾಗಿದೆ. ಅಷ್ಟೇ ಅಲ್ಲದೆ ಈ 25 ಲಕ್ಷ ಹಣವನ್ನು ಭಾಗ್ಯ ಆದೀ ನಡೆಸುತ್ತಿರುವ ಚಾರಿಟಿಗೆ ಕೊಡಲು ನಿರ್ಧರಿಸಿದ್ದಾಳೆ. ಆದರೆ, ಆದೀಗೆ ನನಗೆ ಇಷ್ಟು ಸಹಾಯ ಮಾಡಿದ ಭಾಗ್ಯಾಳಿಗೆ ಏನು ಕೊಟ್ಟಿಲ್ಲವಲ್ಲ ಎಂಬ ಕೊರಗು ಕಾಣುತ್ತಿದೆ. ಇದಕ್ಕಾಗಿ ಆಫೀಸ್​ನಲ್ಲಿ ಆಕೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದಾನೆ.

ಹಿಂದಿನ ಎಪಿಸೋಡ್​ನಲ್ಲಿ, ಭಾಗ್ಯ ಮನೆಯಲ್ಲಿ ಕಳ್ಳತನವಾದ 25 ಲಕ್ಷ ಹಣ ಸಿಕ್ಕಿತ್ತು. ಅದನ್ನು ತೆಗೊಂಡು ಆದೀ ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ. ನಿಮಗೆ ಅಷ್ಟೆಲ್ಲ ತೊಂದರೆ ಕೊಟ್ಟಿರುವ ಹಣ ಪುನಃ ಮನೆಗೆ ಬಂತು. ನಾನು ಇದನ್ನ ನಿಮ್ಮ ಹತ್ರ ತೆಗೆದುಕೊಳ್ಳಲು ಫೋರ್ಸ್ ಮಾಡಲ್ಲ.. ನಾನೇ ತೆಗೆದುಕೊಳ್ಳುತ್ತೇನೆ ಎಂದು ಆದೀ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಅತ್ತ ಭಾಗ್ಯ, ಈ ದುಡ್ಡಿಂದ ಸಾಕಷ್ಟು ಸಮಸ್ಯೆ ಆಗಿದೆ.. ಮೊದಲನೇ ದಿನವೇ ನಾನು ಈ ಹಣವನ್ನು ತೆಗೆದುಕೊಂಡಿದ್ದರೆ ಇಷ್ಟೆಲ್ಲ ಸಮಸ್ಯೆ ಆಗುತ್ತಲೇ ಇರುತ್ತಿರಲಿಲ್ಲ.. ನಾನೇ ಈ ದುಡ್ಡನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.

ಅದರಂತೆ ಆದೀ ಭಾಗ್ಯ ಕೈಗೆ 25 ಲಕ್ಷ ಹಣ ಇರುವ ಬ್ಯಾಗ್ ಕೊಡುತ್ತಾನೆ. ಜೊತೆಗೆ ಭಾಗ್ಯ, ಈ ದುಡ್ಡು ಈಗ ಸಂಪೂರ್ಣ ನನಗೆ ಸೇರಿದ್ದು ತಾನೇ?, ನಾನು ಈ ದುಡ್ಡನ್ನು ನನಗೆ ಇಷ್ಟ ಬಂದ ಹಾಗೆ ಹೇಗೆ ಬೇಕಾದರು ಉಪಯೋಗಿಸಬಹುದಲ್ವಾ ಎಂದು ಕೇಳುತ್ತಾಳೆ. ಅದಕ್ಕೆ ಆದೀ, ಇದು ನಿಮ್ಮ ದುಡ್ಡು ನೀವು ಏನು ಬೇಕಾದರು ಮಾಡಬಹುದು ಎನ್ನುತ್ತಾನೆ. ಸರಿ ಹಾಗಿದ್ದರೆ ಈ ದುಡ್ಡನ್ನ ತೆಗೋಳಿ ಎಂದು ಪುನಃ ಆದೀ ಕೈಗೆ ಭಾಗ್ಯ ಕೊಟ್ಟಿದ್ದಾಳೆ.

ನಾನು ಈ ದುಡ್ಡನ್ನು ನೀವು ಚಾರಿಟಿ ಟ್ರಸ್ಟ್ ನಡೆಸ್ತಾ ಇದ್ದೀರಿ ಅಲ್ವಾ ಅದಕ್ಕೆ ಕೊಡ್ತಾ ಇದ್ದೇನೆ ಎಂದು ಹೇಳಿದ್ದಾಳೆ. ಮೊದಲು ಇದಕ್ಕೆ ಆದೀ ಒಪ್ಪದಿದ್ದರೂ ನಂತರ ಬೇರೆ ದಾರಿಯಿಲ್ಲದೆ ಆ ಹಣವನ್ನು ಚಾರಿಟಿಗೆ ಕೊಡಲು ತೆಗೆದುಕೊಳ್ಳುತ್ತಾನೆ. ಭಾಗ್ಯಾಳ ಈ ಗುಣಕ್ಕೆ ಆದೀ ಫಿದಾ ಆಗಿದ್ದಾನೆ. ನಾನು ನನ್ನ ಲೈಫ್​ನಲ್ಲಿ ನಿಮ್ಮಂತಹ ವ್ಯಕ್ತಿಯನ್ನು ಕೆಲವೇ ಕೆಲವು ಮಂದಿಯನ್ನು ನೋಡಿದ್ದು ಎಂದು ಹೇಳುತ್ತಾನೆ. ಇದಾದ ಬಳಿಕ ಆದೀಶ್ವರ್ ಆಫೀಸ್ ಬಂದು, ಛೇ ಭಾಗ್ಯಾಗೆ ಸರಿಯಾಗಿ ಥ್ಯಾಂಕ್ಸ್ ಹೇಳಲೇ ಆಗುತ್ತಿಲ್ಲವಲ್ಲ ಎಂದು ಅಂದುಕೊಳ್ಳುತ್ತಾನೆ.

ಭಾಗ್ಯಾಗೋಸ್ಕರ ಬೇರೆ ಏನು ಮಾಡಬಹುದು ಎಂದು ಆದೀ ಯೋಚಿಸುತ್ತಿರುವಾಗ ಒಂದು ಪ್ಲ್ಯಾನ್ ಹೊಳೆಯುತ್ತಾರೆ. ಆದೀ ನಡೆಸುತ್ತಿರುವ ಚಾರಿಟಿಯಲ್ಲಿ ಸಾಮಾನ್ಯವಾಗಿ ಯಾರೇ ಡೊನೇಟ್ ಮಾಡಿದ್ರು ಅವರಿಗೆ ಒಂದು ಸಣ್ಣದಾಗಿ ಸನ್ಮಾನ ಮಾಡಲಾಗುತ್ತದೆ. ಭಾಗ್ಯಾಗೂ ಅದೇರೀತಿ ಸನ್ಮಾನ ಮಾಡಿ ಥ್ಯಾಂಕ್ಸ್ ಹೇಳೋಣ ಎಂದು ಅಂದುಕೊಳ್ಳುತ್ತಾನೆ. ಅದರಂತೆ ಚಾರಿಟಿ ನೋಡಿಕೊಳ್ಳುವ ವ್ಯಕ್ತಿಯನ್ನು ಕರೆದು, ನಾಳೆ ಒಬ್ಬರಿಗೆ ಸನ್ಮಾನ ಇದೆ.. ಇದು ಮಾಮೂಲಿ ಸನ್ಮಾನ ಅಲ್ಲ ಗ್ರ್ಯಾಂಡ್ ಆಗಿ ಆಗಬೇಕು.. ಎಲ್ಲ ರೆಡಿ ಮಾಡಿ ಎಂದು ಹೇಳಿದ್ದಾನೆ.



ತಾಂಡವ್​ಗೆ ಈ ವಿಚಾರ ಹೇಳೋಣ ಎಂದು ಕರೆದಾಗ ಆತ ಆಫೀಸ್ ಬಂದಿರುವುದಿಲ್ಲ. ತಾಂಡವ್ ತನ್ನ ಮಗಳು ತನ್ವಿ ಸಸ್ಪೆಂಡ್ ಆಗಿರುವುದರಿಂದ ಕಾಲೇಜ್ ಪ್ರಿನ್ಸಿಪಾಲ್ ಜೊತೆ ಮಾತನಾಡಲು ಹೋಗಿರುತ್ತಾನೆ. ಆದೀ ತಾಂಡವ್​ಗೆ ಕಾಲ್ ಮಾಡಿ ನಾಳೆ ಒಂದು ಈವೆಂಟ್ ಇದೆ ನೀವು ಮಿಸ್ ಮಾಡದೆ ಬರಬೇಕು ಎಂದು ಹೇಳಿದ್ದಾನೆ. ಸದ್ಯ ಪ್ರೋಮೋದಲ್ಲಿ ಭಾಗ್ಯಾಗೆ ಅದ್ಧೂರಿಯಾಗಿ ಸನ್ಮಾನ ಮಾಡಲಾಗುತ್ತಿರುವುದನ್ನು ತೋರಿಸಲಾಗಿದೆ.

ಆದರೆ, ಇಲ್ಲಿ ಸನ್ಮಾನ ಮಾಡಲಾಗುತ್ತಿರುವು ಭಾಗ್ಯಾಗೆ ಎಂದು ತಾಂಡವ್​ಗೆ ಗೊತ್ತಿರುವುದಿಲ್ಲ.. ಆದೀ ಬ್ರೋ ಇಷ್ಟೆಲ್ಲ ಹೊಗಳುತ್ತಿರುವುದನ್ನು ನೋಡಿದರೆ ಯಾರೀ ಸ್ಪೆಷಲ್ ಆಗಿರೋ ವ್ಯಕ್ತಿನೇ ಇರಬೇಕು ಅಂದುಕೊಳ್ಳುತ್ತಾನೆ. ಆದರೆ, ಅದು ಭಾಗ್ಯ ಎಂದು ಗೊತ್ತಾದ ತಕ್ಷಣ ಕೋಪಗೊಂಡಿದ್ದಾನೆ. ಏನು ಮಾಡಬೇಕು ಎಂದು ತಿಳಿಯದೆ ತಳಮಳಗೊಂಡಿದ್ದಾನೆ.

ದೃಷ್ಟಿಬೊಟ್ಟು ಧಾರಾವಾಹಿಯಿಂದ ಹೊರಬಂದ ವಿಜಯ್ ಸೂರ್ಯ

ಮತ್ತೊಂದೆಡೆ ಆದೀಶ್ವರ್ ನಮ್ಮ ಕೈಯಿಂದ ಜಾರುತ್ತಿದ್ದಾನೆ.. ಆತ ನಾವು ಹೇಳಿದಂತೆ ಕೇಳುತ್ತಿಲ್ಲ ಎಂದು ಕನ್ನಿಕಾ ಹಾಗೂ ಮೀನಾಕ್ಷಿ ಟೆನ್ಶನ್ ಮಾಡಿಕೊಂಡಿದ್ದಾರೆ. ಈತನನ್ನು ನಮ್ಮ ಹಾದಿಗೆ ತರಬೇಕು ಎಂದು ಮೀನಾಕ್ಷಿ ಪ್ಲ್ಯಾನ್ ಮಾಡಿದ್ದು, ನೇರವಾಗಿ ರಾಮ್​ದಾಸ್ ಬಳಿ ಹೋಗಿ ಆದೀಗೆ ಒಂದು ಮದುವೆ ಮಾಡೋಣ ಎಂಬ ವಿಷಯ ಎತ್ತಿದ್ದಾಳೆ. ಸದ್ಯ ಧಾರಾವಾಹಿ ಮತ್ತೊಂದು ತಿರುವು ಪಡೆಯುವ ಸಾಧ್ಯತೆ ಇದೆ. ಅತ್ತ ಆದೀ ದಿನದಿಂದ ದಿನಕ್ಕೆ ಭಾಗ್ಯಾಗೆ ಹತ್ತಿರವಾಗುತ್ತಿದ್ದರೆ ಇತ್ತ ಮೀನಾಕ್ಷಿ-ಕನ್ನಿಕಾ ಆದೀಯನ್ನು ತಮ್ಮ ಕಡೆ ಮಾಡಲು ಮದುವೆಯ ಪ್ಲ್ಯಾನ್ ರೂಪಿಸಿದ್ದಾರೆ.