Drishti Bottu: ದೃಷ್ಟಿನ ಕ್ಷಮಿಸೋಕೆ ತಯಾರಿಲ್ಲ: ದುಃಖದಲ್ಲಿ ಮುಳುಗಿದ ದತ್ತಭಾಯ್
Drishti Bottu Serial: ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗಿರುವುದು ಕಥೆಯನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯಿದಿದೆ. ಸದ್ಯ ದತ್ತ ದೃಷ್ಟಿಯ ಮೇಲೆ ಕೋಪ ಮಾಡಿಕೊಂಡಿದ್ದು, ದುಖದಲ್ಲಿ ಯಾವುದೇ ಕಾರಣಕ್ಕೂ ಕ್ಷಮಿಸುವ ಮಾತೇ ಇಲ್ಲ ಎಂದಿದ್ದಾನೆ.

Drishti Bottu -

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿಬೊಟ್ಟು (Drishti Bottu) ಧಾರಾವಾಹಿ ಕಿರುತೆರೆ ವೀಕ್ಷಕರನ್ನು ಸೆಲೆಯುತ್ತಿದೆ. ಈ ಸೀರಿಯಲ್‌ನಲ್ಲೀಗ ಟ್ವಿಸ್ಟ್‌ಗಳ ಮೇಲೆ ಟ್ವಿಸ್ ನೀಡಲಾಗುತ್ತಿದೆ. ಸೀರಿಯಲ್ ವೀಕ್ಷಿಸುವವರಿಗೆ ಈ ಕಥೆ ಕುತೂಹಲ ಕೆರಳಿಸುತ್ತಿದೆ. ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗಿರುವುದು ಕಥೆಯನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ಯಿದಿದೆ. ಸದ್ಯ ದತ್ತ ದೃಷ್ಟಿಯ ಮೇಲೆ ಕೋಪ ಮಾಡಿಕೊಂಡಿದ್ದು, ದುಖದಲ್ಲಿ ಯಾವುದೇ ಕಾರಣಕ್ಕೂ ಕ್ಷಮಿಸುವ ಮಾತೇ ಇಲ್ಲ ಎಂದಿದ್ದಾನೆ.
ದತ್ತನಿಗೆ ಮೊದಲೇ ಸುಂದರವಾಗಿರೋ ಹುಡುಗೀರು ಮೋಸ ಮಾಡುತ್ತಾರೆ, ಅವರು ನಂಬಿಕೆಗೆ ಅರ್ಹರಲ್ಲ ಅನ್ನೋದನ್ನ ತುಂಬ ಗಟ್ಟಿಯಾಗಿ ನಂಬಿದ್ದಾನೆ. ಸುಂದರವಾಗಿರೋ ಹುಡುಗಿಯರ ಮೇಲೆ ದತ್ತನಿಗೆ ನಂಬಿಕೆ ಇಲ್ಲ. ಎರಡನೇಯದಾಗಿ, ನಂಬಿಕೆ ದ್ರೋಹ ಮಾಡಿದವರನ್ನ ಯಾವತ್ತಿಗೂ ಕ್ಷಮಿಸಲ್ಲ. ಇದೀಗ ದೃಷ್ಟಿ ಸುಳ್ಳು ಹೇಳಿ ತನ್ನ ನಂಬಿಕೆಗೆ ದ್ರೋಹ ಮಾಡಿದ್ದಾಳೆ ಎಂದು ದುಃಖದಲ್ಲಿದ್ದಾನೆ.
ತನಗೆ ಮುಳುವಾಗಿದ್ದ ಸೌಂದರ್ಯವನ್ನ ಮರೆಮಾಚೋಕೆ ದೃಷ್ಟಿ ಕಪ್ಪು ಬಣ್ಣ ಹಚ್ಚಿಕೊಂಡಿದ್ದಳು. ವಿಧಿ ಇವರಿಬ್ಬರನ್ನ ಒಂದುಗೂಡಿಸಿದ್ದು, ದೃಷ್ಟಿ-ದತ್ತನ ಜೀವ ಕಾಪಾಡಿದ್ದು, ಇಬ್ಬರ ನಡುವೆ ಪ್ರೀತಿ ಮೂಡಿದ್ದು, ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸಲಿಗೆ ಮೂಡಿದ್ದು ಇಲ್ಲಿಯವರೆಗಿನ ಕತೆ. ಆದರೀಗ ದತ್ತನಿಗೆ ದೃಷ್ಟಿಯ ನಿಜರೂಪ ದರ್ಶನ ಆಗಿದೆ.
ಶರಾವತಿಯ ಜನರು ದೃಷ್ಟಿಯನ್ನ ಕಿಡ್ನಾಪ್ ಮಾಡಿದ್ದಾರೆ. ಯಾವ್ಯಾವುದೋ ಪರಿಸ್ಥಿತಿಗೆ ಸಿಲುಕಿ, ಹೇಳಬೇಕೆಂದರೂ ಹೇಳಿಕೊಳ್ಳಲಾಗದ ಸ್ಥಿತಿ ಅವಳಿಗಿತ್ತು. ಇನ್ನೇನು ಎಲ್ಲವನ್ನೂ ಹೇಳಿಕೊಳ್ಳಬೇಕೆಂದು ಅಂದುಕೊಂಡಿರುವ ಹೊತ್ತಲ್ಲಿ, ದೃಷ್ಟಿ ಕಿಡ್ನಾಪ್ ಆಗುತ್ತಾಳೆ. ಕೊನೆಗೆ ದತ್ತ ಕಷ್ಟಪಟ್ಟು ದೃಷ್ಟಿಯನ್ನ ಹುಡುಕಿದ್ದಾನೆ. ಆದರೆ, ಮರಳಿ ದತ್ತಾಭಾಯ್‌ನ ಸೇರುವ ಹೊತ್ತಿಗೆ, ದೃಷ್ಟಿ ಚರ್ಮಕ್ಕೆ ಬಳಿದುಕೊಳ್ತಿದ್ದ ಕಪ್ಪು ಬಣ್ಣ ಸುರಿಯುವ ಮಳೆಯಲ್ಲಿ ಕಳೆದುಹೋಗಿದೆ. ದೃಷ್ಟಿಯ ಅಸಲಿ ಬಣ್ಣ ದತ್ತನಿಗೆ ಗೊತ್ತಾಗಿದೆ.
ದತ್ತ ಈ ದುಃಖದಲ್ಲಿ ಕುಡಿಯುತ್ತ ಇರುತ್ತಾನೆ. ಅಲ್ಲಿಗೆ ದೃಷ್ಟಿ ಬಂದು, ಇಷ್ಟು ದಿನ ನನ್ನೊಟ್ಟಿಗೆ ಬದುಕಿದ್ದೀರಾ ಯಾವತ್ತಾದ್ರು ನನ್ನ ಪ್ರೀತಿ ನಿಮಗೆ ನಾಟಕ ಎಂದು ಅನಿಸಿದೆಯಾ? ಎಂದಿದ್ದಾಳೆ. ಇದಕ್ಕೆ ದತ್ತ, ನೀನು ಮಾಡಿರೋ ಗಾಯ, ನೀನು ಮಾಡಿರೋ ನೋವು ಕಣ್ಣಿಗೆ ಕಾಣಿಸಲ್ಲ.. ಆದ್ರೆ ಮನಸ್ಸಿಗೆ ನೋವಾಗಿದೆ. ನೀನು ಎಲ್ಲ ಹುಡುಗಿರ ತರ ಅಲ್ಲ ಅಂದುಕೊಂಡೆ.. ಈ ಸುಳ್ಳು-ಕಪಟ ಗೊತ್ತಿಲ್ಲ ಅಂದುಕೊಂಡೆ.. ಮುಗ್ಧ ಹುಡುಗಿ ಅಂದುಕೊಂಡಿದ್ದೆ.. ಆದ್ರೆ ನಿನ್ದು ಮೋಸದ-ಸುಳ್ಳಿನ ಮುಖವಾಡ ಎಂದು ಹೇಳಿದ್ದಾನೆ.
ಸದ್ಯ ತನ್ನ ಪರಿಸ್ಥಿತಿಯನ್ನ ದತ್ತನಿಗೆ ದೃಷ್ಟಿ ಹೇಗೆ ಅರ್ಥ ಮಾಡಿಸುತ್ತಾಳೆ.. ದತ್ತ ಯಾವರೀತಿ ನಡೆದುಕೊಳ್ಳುತ್ತಾನೆ, ಕ್ಷಮಿಸುತ್ತಾನ ಎಂಬುದು ಕುತೂಹಲ ಮೂಡಿಸಿದ್ದು, ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Jai Movie: ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸಿನಿಮಾದಲ್ಲಿ ಸುನಿಲ್ ಶೆಟ್ಟಿ: ಟೀಸರ್ ಬಿಡುಗಡೆ