ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shah Rukh Khan: ಬರೋಬ್ಬರಿ 33 ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಗೆದ್ದ ಬಾಲಿವುಡ್‌ ಬಾದ್‌ಶಾ

ಬಾಲಿವುಡ್‌ ಕಿಂಗ್‌ ಖಾನ್‌ ಎಂದೇ ಖ್ಯಾತಿ ಹೊಂದಿರುವ ಶಾರುಖ್‌ ಖಾನ್‌ ಇಂದು ಪ್ರಶಸ್ತಿಗೆ ಭಾಜನರಾದರು. ಶಾರುಖ್‌ ನಟನೆಯ ಜವಾನ್‌ ಚಿತ್ರಕ್ಕೆ ಸಂಬಂಧಿಸಿದಂತೆ ಈ ಪ್ರಶ್ತಸ್ತಿ ಸಂದಿದೆ. ಆಶ್ಚರ್ಯಕಾರಿ ವಿಷಯವೇನೆಂದರೆ ಬರೋಬ್ಬರಿ 33 ವರ್ಷಗಳ ಸುದೀರ್ಘ ಜರ್ನಿ ಬಳಿಕ ನಟ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಗೆದ್ದ ಬಾಲಿವುಡ್‌ ಬಾದ್‌ಶಾ!

Vishakha Bhat Vishakha Bhat Aug 1, 2025 7:39 PM

ನವದೆಹಲಿ: ಕಲಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಯನ್ನು ಸರ್ಕಾರ ನೀಡಿ ಗೌರವಿಸುತ್ತದೆ. ಈ ಬಾರಿಯ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (71st National Film Awards) ಘೋಷಣಾ ಸಮಾರಂಭ ಇಂದು ದೆಹಲಿಯಲ್ಲಿ ನಡೆದಿದೆ. ವಿವಿಧ ಭಾಷೆಯ ಸಿನಿಮಾಗಳು, ಕಲಾವಿದರು ಸೇರಿದಂತೆ ಹಲವರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಬಾಲಿವುಡ್‌ ಕಿಂಗ್‌ ಖಾನ್‌ ಎಂದೇ ಖ್ಯಾತಿ ಹೊಂದಿರುವ ಶಾರುಖ್‌ ಖಾನ್‌ ಇಂದು ಪ್ರಶಸ್ತಿಗೆ ಭಾಜನರಾದರು. ಶಾರುಖ್‌ (Shah Rukh Khan) ನಟನೆಯ ಜವಾನ್‌ ಚಿತ್ರಕ್ಕೆ ಸಂಬಂಧಿಸಿದಂತೆ ಈ ಪ್ರಶ್ತಸ್ತಿ ಸಂದಿದೆ. ಆಶ್ಚರ್ಯಕಾರಿ ವಿಷಯವೇನೆಂದರೆ ಬರೋಬ್ಬರಿ 33 ವರ್ಷಗಳ ಸುದೀರ್ಘ ಜರ್ನಿ ಬಳಿಕ ನಟ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದ ನಟನಿಗೆ ಜವಾನ್ ಸಿನಿಮಾ ಕೈ ಹಿಡಿದಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜವಾನ್ ಆಗಿಯೇ ಅಬ್ಬರಿಸಿದ್ದಾರೆ. ಇಲ್ಲಿವರೆಗಿನ ಶಾರುಖ್ ಖಾನ್ ಚಿತ್ರಗಳಲ್ಲಿ ಜವಾನ್ ಸಿನಿಮಾ ವಿಶೇಷವಾಗಿಯೇ ಕಾಣಿಸಿದೆ. ಜವಾನ್ ಸಿನಿಮಾವನ್ನ ದಕ್ಷಿಣ ಭಾರತದ ಅಟ್ಲೀ ಡೈರೆಕ್ಷನ್ ಮಾಡಿದ್ದಾರೆ. ರೋಮ್ಯಾಂಟಿಕ್ ಹೀರೋ ಶಾರುಖ್‌ ಖಾನ್ ಆ್ಯಕ್ಷನ್ ಹೀರೋ ಆಗಿ ತೆರೆ ಮೇಲೆ ಬಂದಿದ್ದರು. ಜವಾನ್‌ನಲ್ಲಿ ಅವರು ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜವಾನ್ ಚಿತ್ರ ಕಳೆದ ವರ್ಷ ರಿಲೀಸ್ ಆಗಿತ್ತು. ಸೆಪ್ಟೆಂಬರ್ 7 ರಂದು ಎಲ್ಲೆಡೆ ಈ ಚಿತ್ರ ತೆರೆಗೆ ಬಂದಿತ್ತು.

ಈ ಸುದ್ದಿಯನ್ನೂ ಓದಿ: Shah Rukh Khan: ಶೂಟಿಂಗ್‌ ವೇಳೆ ಅವಘಡ; ಶಾರುಖ್‌ ಖಾನ್‌ಗೆ ಗಾಯ, ಚಿಕಿತ್ಸೆಗಾಗಿ ಅಮೆರಿಕಕ್ಕೆ ಶಿಫ್ಟ್‌

ಜವಾನ್ ಹಿಂದಿ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿದೆ. ಜವಾನ್ ಮೊದಲ ದಿನ 65.50 ಕೋಟಿ ಗಳಿಸಿ ಭರ್ಜರಿ ಲಾಭ ತಂದು ಕೊಟ್ಟಿತ್ತು. ಶಾರುಖ್‌ ಮಾತ್ರವಲ್ಲದೇ ದೀಪಿಕಾ ಪಡುಕೋಣೆ ನಟನೆಗೂ ಜನರು ಫಿದಾ ಆಗಿದ್ದರು. ಚಿತ್ರದ ಪ್ರತಿ ಹಾಡು ಪ್ರೇಕ್ಷಕರನ್ನು ಸೆಳೆದಿತ್ತು. ಈ ಸಿನಿಮಾ 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು ಹಿಂದಿಯಲ್ಲಿ 590 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಒಟಿಟಿಯಲ್ಲಿಯೂ ಅತ್ಯುತ್ತಮ ರೆಸ್ಪಾನ್ಸ್‌ ಕಂಡಿತ್ತು.