Mokshitha Pai: ಹೆಣ್ಣಿಗೆ ಸೀರೆ ಲಕ್ಷಣ ಎಂದು ಸಾರಿಯಲ್ಲಿ ವಿಶೇಷ ವಿಡಿಯೋ ಹಂಚಿಕೊಂಡ ಮೋಕ್ಷಿತಾ
ಮೋಕ್ಷಿ ಸೀರೆಯುಟ್ಟು ವಿಡಿಯೋ ಶೂಟ್ ಮಾಡಿಸಿದ್ದು, ಇದಕ್ಕೆ ‘ಹೆಣ್ಣಿಗೆ ಸೀರೆ ಲಕ್ಷಣ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಬೇಬಿ ಪಿಂಕ್ ಮೈ ಬಣ್ಣಕ್ಕೆ ಕೆಂಪು ಬಣ್ಣದ ಬೆಂಟೆಕ್ಸ್ ಬಾರ್ಡರ್ ಇರುವ ಸೀರೆಯುಟ್ಟು ಅಪ್ಸರೆಯಂತೆ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ.

Mokshitha Pai

ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲೂ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು. ಬಿಗ್ ಬಾಸ್ ಬಳಿಕ ನಟನೆಯಿಂದ ವಿರಾಮ ಪಡೆದಿರುವ ಇವರು ಸದ್ಯ ತಮ್ಮ ಫ್ರಿ ಟೈಮ್ ಎಂಜಾಯ್ ಮಾಡುತ್ತಿದ್ದಾರೆ. ಇದರ ಜೊತೆ ಒಂದು ಮಿನಿ ಸೀರಿಸ್ನಲ್ಲಿ ಕೂಡ ನಟಿಸಿದ್ದಾರೆ. ಇದರ ಮಧ್ಯೆ ಮೋಕ್ಷಿಯ ಒಂದು ವಿಡಿಯೋಓ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಮೋಕ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಏನೇ ಹಂಚಿಕೊಂಡರೂ ಅದು ವೈರಲ್ ಆಗುತ್ತಿದೆ. ಬಿಗ್ ಬಾಸ್ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ಪಾರು ಆಗಾಗ ಫೋಟೊಗಳನ್ನು-ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ.
ಈಗ ಮೋಕ್ಷಿ ಸೀರೆಯುಟ್ಟು ವಿಡಿಯೋ ಶೂಟ್ ಮಾಡಿಸಿದ್ದು, ಇದಕ್ಕೆ ‘ಹೆಣ್ಣಿಗೆ ಸೀರೆ ಲಕ್ಷಣ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಬೇಬಿ ಪಿಂಕ್ ಮೈ ಬಣ್ಣಕ್ಕೆ ಕೆಂಪು ಬಣ್ಣದ ಬೆಂಟೆಕ್ಸ್ ಬಾರ್ಡರ್ ಇರುವ ಸೀರೆಯುಟ್ಟು ಅಪ್ಸರೆಯಂತೆ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. ಇದಕ್ಕೆ ಬಗೆಬಗೆಯ ಕಮೆಂಟ್ಗಳು ಬರುತ್ತಿದ್ದು, ನೀವು ಸಹಜ ಸುಂದರಿ, ಗ್ರ್ಯಾಂಡ್ ಆಗಿ ಕಾಣ್ತಾ ಇದ್ದೀರಾ ಎಂದು ಹೇಳಿದ್ದಾರೆ.
ಅಂದ ಹಾಗೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮೋಕ್ಷಿತಾ ಪೈ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಮೋಕ್ಷಿತಾ ಪೈ ಅವರ ಹೊಸ ಸಿನಿಮಾ ಶೂಟಿಂಗ್ ಮುಕ್ತಾಯಗೊಂಡಿದೆ. ‘ಮಿಡಲ್ ಕ್ಲಾಸ್ ರಾಮಾಯಣ' ಎಂಬುದು ಸಿನಿಮಾ ಹೆಸರಾಗಿದ್ದು, ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದರ ಜೊತೆಗೆ ‘ಅದೇ ಕಣ್ಣು’ ಎಂಬ ಮೈಕ್ರೋ ಸೀರಿಸ್ನಲ್ಲಿ ನಟಿಸಿದ್ದಾರೆ.
ಅದೇ ಕಣ್ಣು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ಈ ಸರಣಿಯಲ್ಲಿ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೋಕ್ಷಿತಾ ಇವರ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ದಿಲೀಪ್ ರಾಜ್ ಅವರು ಇದನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದು ಬುಲೆಟ್ ಆ್ಯಪ್ನಲ್ಲಿ ಪ್ರಸಾರವಾಗುತ್ತಿದೆ.
Naavu Nammavaru Show: ಇಂದಿನಿಂದ ನಾವು ನಮ್ಮವರು ಶೋ: ರಜತ್ ಕಿಶನ್ ಫ್ಯಾಮಿಲಿ ಭರ್ಜರಿ ಎಂಟ್ರಿ