ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonal Monteiro: ʼʼನಮ್ಮ ಬಂಧ ಇನ್ನಷ್ಟು ಬಿಗಿಯಾಗಲಿʼʼ; ಭೀಮನ ಅಮಾವಾಸ್ಯೆ ಆಚರಿಸಿದ ಸೋನಾಲ್ ಮೊಂತೆರೊ ಭಾವುಕ

Tharun Sudhir: ಸ್ಯಾಂಡಲ್‌ವುಡ್‌ ನಟಿ ಸೋನಾಲ್ ಮೊಂತೆರೊ ಗುರುವಾರ ಭೀಮನ ಅಮಾವಾಸ್ಯೆ ಆಚರಿಸಿದ್ದಾರೆ. ಪತಿ ತರುಣ್ ಸುಧೀರ್ ಅವರ ಪಾದ ಪೂಜೆ ಮಾಡಿ ಶಾಸ್ತ್ರೋಕ್ತವಾಗಿ ಸಂಪ್ರದಾಯವನ್ನು ಪಾಲಿಸಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಭೀಮನ ಅಮಾವಾಸ್ಯೆ ಆಚರಿಸಿದ ಸೋನಾಲ್ ಮೊಂತೆರೊ

Ramesh B Ramesh B Jul 24, 2025 7:55 PM

ಬೆಂಗಳೂರು: ಕಳೆದ ವರ್ಷ ಆ. 11ರಂದು ಸ್ಯಾಂಡಲ್‌ವುಡ್‌ನ ಸ್ಟಾರ್‌ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರನ್ನು ವಿವಾಹವಾಗಿದ್ದ ಕರಾವಳಿ ಮೂಲದ ನಟಿ ಸೋನಾಲ್ ಮೊಂತೆರೊ (Sonal Monteiro) ಗುರುವಾರ (ಜು. 24) ಭೀಮನ ಅಮಾವಾಸ್ಯೆ ಆಚರಿಸಿದ್ದಾರೆ. ಪತಿ ತರುಣ್ ಸುಧೀರ್ ಅವರ ಪಾದ ಪೂಜೆ ಮಾಡಿ ಶಾಸ್ತ್ರೋಕ್ತವಾಗಿ ಸಂಪ್ರದಾಯವನ್ನು ಪಾಲಿಸಿದ್ದಾರೆ. ಈ ಫೋಟೊವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಹಳದಿ-ಕೆಂಪು ಮಿಶ್ರಿತ ಸೀರೆ ಉಟ್ಟು, ಮಲ್ಲಿಗೆ ಮುಡಿದು, ಕೈತುಂಬ ಬಳೆ ತೊಟ್ಟ ಸೋನಾಲ್‌ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ತರುಣ್‌ ಕೂಡ ಪಂಚೆ-ಶಲ್ಯ ಧರಿಸಿ ಸಾಥ್‌ ನೀಡಿದ್ದಾರೆ. ಸೋನಾಲ್‌ ಪತಿಯ ಪಾದ ಪೂಜೆ ಮಾಡಿ ಕಾಲಿಗೆರಗಿದ್ದಾರೆ. ತರುಣ್‌ ಮನ ತುಂಬಿ ಆಶೀರ್ವದಿಸಿದ್ದಾರೆ.

ಸೋನಾಲ್ ಮೊಂತೆರೊ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Fathers Day Movie: ತಂದೆ - ಮಗನ ಬಾಂಧವ್ಯದ ʼಫಾದರ್ಸ್ ಡೇʼ ಚಿತ್ರದ ಟೀಸರ್‌ ಔಟ್‌

ಕ್ಯಾಪ್ಶನ್‌ನಲ್ಲಿ ಏನಿದೆ?

ಫೋಟೊ ಹಂಚಿಕೊಂಡ ಸೋನಾಲ್‌ ಈ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ʼʼನಿಮ್ಮಂತಹ ಪತಿ ಕೋಟಿಗೊಬ್ಬರು. ಇಂದಿಗೆ ಮಾತ್ರವಲ್ಲ ಎಂದಿಗೂ ನಿಮ್ಮ ಸುಖ, ಶಾಂತಿ ಮತ್ತು ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ನಡುವಿನ ಬಂಧ ಹೀಗೆ ಬಿಗಿಯಾಗಲಿ...ಐ ಲವ್‌ ಯೂ ಮೈ ಲವ್‌ʼʼ ಎಂದಿದ್ದಾರೆ. ಮಂಗಳೂರು ಮೂಲದ ಸೋನಾಲ್‌ ಕ್ರಿಶ್ಚಿಯನ್‌ ಧರ್ಮದವರು. ಕ್ರಿಶ್ಚಿಯನ್‌ ಆಗಿದ್ದರೂ ಸೋನಾಲ್‌ ಹಿಂದೂ ಧರ್ಮದ ಎಲ್ಲ ಹಬ್ಬ ಹರಿದಿನಗಳನ್ನು ಸಂಪ್ರದಾಯದ ಪ್ರಕಾರ ಆಚರಿಸುತ್ತ ಬಂದಿದ್ದಾರೆ. ಇದೀಗ ಭೀಮನ ಅಮವಾಸ್ಯೆಯನ್ನು ಆಚರಿಸುವ ಮೂಲಕ ಗಮನ ಸಳೆದಿದ್ದಾರೆ.

ಅಭಿಮಾನಿಗಳು ಫೋಟೊಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಲವರು ಸೂಪರ್‌ ಎಂದು ಕಮೆಂಟ್‌ ಮಾಡಿ ಹಾರ್ಟ್‌ ಇಮೋಜಿ ಹಾಕಿದ್ದಾರೆ. ಇನ್ನು ಕೆಲವರು 100 ವರ್ಷ ಹೀಗೆ ಇರಿ ಎಂದು ಹಾರೈಸಿದ್ದಾರೆ.

2 ಧರ್ಮದ ಪ್ರಕಾರ ಮದುವೆಯಾಗಿದ್ದ ಸೋನಾಲ್‌-ತರುಣ್‌

ವಿಶೇಷ ಎಂದರೆ ತರುಣ್‌ ಮತ್ತು ಸೋನಾಲ್‌ ಹಿಂದು ಮತ್ತು ಕ್ರಿಶ್ಚಿಯನ್‌ ಧರ್ಮದ ಪ್ರಕಾರ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ಹಿಂದು ಶೈಲಿಯಲ್ಲಿ ಸಪ್ತಪದಿ ತುಳಿದರೆ, ಮಂಗಳೂರಿನಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆ ನಡೆದಿತ್ತು.

2021ರಲ್ಲಿ ತೆರೆಕಂಡ ದರ್ಶನ್‌ ಅಭಿನಯದ 'ರಾಬರ್ಟ್' ಸಿನಿಮಾ ಮೂಲಕ ಈ ಜೋಡಿಯ ಸ್ನೇಹ ಆರಂಭವಾಯಿತು. ಈ ಸಿನಿಮಾವನ್ನು ತರುಣ್​ ಸುಧೀರ್ ನಿರ್ದೇಶಿಸಿದರೆ, ಸೋನಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ​​​ ಸಿನಿಮಾ ಮೂಲಕ ತರುಣ್ ಹಾಗೂ ಸೋನಾಲ್ ಸ್ನೇಹ ಆರಂಭವಾಗಿ ಬಳಿಕ ಅದು ಮದುವೆವರೆಗೂ ತಲುಪಿತು.

2015ರಲ್ಲಿ ರಿಲೀಸ್‌ ಆದ ʼಎಕ್ಕ ಸಕʼ ತುಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸೋನಾಲ್‌ ಅದಾದ ಬಳಿಕ 2018ರಲ್ಲಿ ʼಅಭಿಸಾರಿಕೆʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ಇತ್ತೀಚೆಗೆ ತೆರೆಕಂಡ ವಿನೋದ್‌ ಪ್ರಭಾಕರ್‌ ಜತೆಗಿನ ʼಮಾದೇವʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಗಮನ ಸೆಳೆದಿದೆ. ಇದರಲ್ಲಿನ ಸೋನಾಲ್‌ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಅವರು ಉಪೇಂದ್ರ ಜತೆ ʼಬುದ್ಧಿವಂತ 2ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.