ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rapper Eshani: ನಾನ್ ಬಿಕಿನಿ ಹಾಕಿದ್ರೆ ನಿಮಗೇನ್ ಪ್ರಾಬ್ಲಂ? ಬಿಗ್ ಬಾಸ್ ಮಾಜಿ ಸ್ಪರ್ಧಿ ರ‍್ಯಾಪರ್ ಇಶಾನಿ ಗರಂ!

Bigg Boss Contestant Rapper Ishani: ಬಿಗ್ ಬಾಸ್ ಮಾಜಿ ಸ್ಪರ್ಧಿ, ರ‍್ಯಾಪರ್ ಇಶಾನಿ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ಇವರಿಗೆ ಅಪಾರ ಮಟ್ಟಿಗೆ ಅಭಿಮಾನಿ ಬಳಗ ಕೂಡ ಇದೆ. ವಿಭಿನ್ನ ಉಡುಗೆ, ಆಲ್ಬಂ ಸಾಂಗ್ , ವೆಬ್ ಸೀರಿಸ್ ಇತ್ಯಾದಿ ಮೂಲಕ ಖ್ಯಾತಿ ಪಡೆದ ಇವರು ಇತ್ತೀಚೆಗಷ್ಟೆ ವಿಶ್ವವಾಣಿ ಟಿವಿಯ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಿಕಿನಿ ಧರಿಸುವ ಬಗ್ಗೆ ರ‍್ಯಾಪರ್ ಇಶಾನಿ ಹೇಳೀದ್ದೇನು!

-

Profile Pushpa Kumari Sep 5, 2025 4:52 PM

ಸದಾ ಕಾಲ ಡಿಫರೆಂಟ್ ಆಗಿ ಕಾಣಲು ಇಷ್ಟ ಪಡುವ ಇಶಾನಿ ಅವರು ಡ್ರೆಸ್ ಫ್ಯಾಷನ್ ಅನ್ನು ಫಾಲೋ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಈ ಬಗ್ಗೆ ಸಂದರ್ಶಕಿಯು ಬಿಂದಾಸ್ ಫ್ಯಾಷನ್ ಎಂದರೇನು ಎಂದು ಪ್ರಶ್ನಿಸಿದ್ದು ಅದಕ್ಕೆ ಅವರು ಉತ್ತರಿಸಿದ್ದಾರೆ. ಬಿಂದಾಸ್ ಫ್ಯಾಷನ್ ಎಂದರೆ ನಮಗೆ ಇಷ್ಟವಾದ ಬಟ್ಟೆಯನ್ನು ಆಯಾ ಇವೆಂಟಿಗೆ ತಕ್ಕನಾಗಿ ಹಾಕುದಾಗಿದೆ. ಬೀಚ್ ಗೆ ಹೋದರೆ ಬಿಕಿನಿ, ಪಾರ್ಟಿಯಲ್ಲಿ ಪಾರ್ಟಿ ವೇರ್, ಟ್ರಕ್ಕಿಂಗ್ ಇತರೆಗಳಿಗೆ ಜಾಕೆಟ್ ಹೀಗೆ ನಮ್ಮಿಷ್ಟದ ಬಟ್ಟೆ ಯನ್ನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಆಯಾ ಇವೆಂಟಿಗೆ ಧರಿಸುವುದಾಗಿದೆ ಎಂದು ಇಶಾನಿ ಅವರು ಹೇಳಿದ್ದಾರೆ.ಇಶಾನಿ ಅವರು ತಮ್ಮ ಲೈಫ್ ಸ್ಟೈಲ್ , ಫ್ಯಾಷನ್ , ಪ್ರವೃತ್ತಿ ಇತ್ಯಾದಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದು ವಿವಿಧ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಯನ್ನು ಅವರು ಹಂಚಿಕೊಂಡಿದ್ದಾರೆ. ಅವರ ಲೈಫ್ ಸ್ಟೈಲ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ತರತರನಾಗಿ ಕಾಮೆಂಟ್ ಹಾಕಿದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬಿಂದಾಸ್ ಆಗಿ ಜೀವನವನ್ನು ತಮ್ಮಿಷ್ಟದಂತೆ ಕಳೆಯುತ್ತಿದ್ದಾರೆ.

ಸದಾ ಕಾಲ ಡಿಫರೆಂಟ್ ಆಗಿ ಕಾಣಲು ಇಷ್ಟ ಪಡುವ ಇಶಾನಿ ಅವರು ಡ್ರೆಸ್ ಫ್ಯಾಷನ್ ಅನ್ನು ಫಾಲೋ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಈ ಬಗ್ಗೆ ಸಂದರ್ಶಕಿಯು ಬಿಂದಾಸ್ ಫ್ಯಾಷನ್ ಎಂದರೇನು ಎಂದು ಪ್ರಶ್ನಿಸಿದ್ದು ಅದಕ್ಕೆ ಅವರು ಉತ್ತರಿಸಿದ್ದಾರೆ. ಬಿಂದಾಸ್ ಫ್ಯಾಷನ್ ಎಂದರೆ ನಮಗೆ ಇಷ್ಟವಾದ ಬಟ್ಟೆಯನ್ನು ಆಯಾ ಇವೆಂಟಿಗೆ ತಕ್ಕನಾಗಿ ಹಾಕುದಾಗಿದೆ.ಬೀಚ್ ಗೆ ಹೋದರೆ ಬಿಕಿನಿ, ಪಾರ್ಟಿಯಲ್ಲಿ ಪಾರ್ಟಿ ವೇರ್, ಟ್ರಕ್ಕಿಂಗ್ ಇತರೆಗಳಿಗೆ ಜಾಕೆಟ್ ಹೀಗೆ ನಮ್ಮಿಷ್ಟದ ಬಟ್ಟೆ ಯನ್ನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಆಯಾ ಇವೆಂಟಿಗೆ ಧರಿಸುವುದಾಗಿದೆ ಎಂದು ಇಶಾನಿ ಅವರು ಹೇಳಿದ್ದಾರೆ.



ಇತ್ತೀಚೆಗಷ್ಟೆ ಅವರು ಬಿಕಿನಿಯಲ್ಲೂ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಅಲ್ಲಿ ಬರುವ ನೆಗೆಟಿವ್ ಕಾಮೆಂಟ್ಸ್ ಹೇಗೆ ಸ್ವೀಕಾರ ಮಾಡುತ್ತೀರಿ ಎಂಬ ಬಗ್ಗೆ ಸಂದರ್ಶಕಿಯು ಪ್ರಶ್ನೆ ಮಾಡಿದ್ದಾರೆ. ಯಾರು ಏನು ಹೇಳುತ್ತಾರೆ ಎಂಬ ಕಾರಣಕ್ಕೆ ನಮ್ಮ ಲೈಫ್ ಸ್ಟೈಲ್ ಬದಲಾಯಿಸಬಾರದು. ನಮ್ಮ ಬಟ್ಟೆಯಿಂದ ನಮ್ಮ ವ್ಯಕ್ತಿತ್ವ ಜಡ್ಜ್ ಮಾಡುವುದು ನಿಜಕ್ಕೂ ಇರಿಟೇಟ್ ಆಗುತ್ತದೆ. ಯಾವಾಗಲು ಹಾಕುವ ಬಟ್ಟೆಯಿಂದ ನಮ್ಮನ್ನು ಯಾರು ಜಡ್ಜ್ ಮಾಡಲು ಸಾಧ್ಯವಿಲ್ಲ. ಹೆಚ್ಚಾಗಿ ಬೀಚ್ ಗೆ ಹೋಗುವಾಗ ಬಿಕಿನಿಯನ್ನು ನಾವು ತೊಡುತ್ತೇವೆ. ಬೀಚ್ ನಲ್ಲಿರುವ ಬಿಸಿಲಿಗೆ ಕೋಟ್ ಹಾಕಿ ಕೂರಲು ಆಗೊಲ್ಲ. ಬಟ್ಟೆ ಹಾಕುವುದು ನಮ್ಮ ಇಷ್ಟ ಅದನ್ನು ಯಾರು ಜಡ್ಜ್ ಮಾಡಬೇಡಿ ಎಂದಿದ್ದಾರೆ.

ನೆಗೆಟಿವ್ ಕಾಮೆಂಟ್ ಬಗ್ಗೆ ಕೂಡ ಇಶಾನಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಮಾತನಾಡಿ, ನಾನು ಬಿಕಿನಿ ಹಾಕಿದ್ದ ಫೋಟೊಗೆ ಅನೇಕರು ಬಹಳ ಕೆಟ್ಟದಾಗಿ ಕಾಮೆಂಟ್ ಹಾಕಿದ್ದರು. ಅವರು ಸೀರೆ ಉಡುವಂತೆ ನನಗೆ ಸಲಹೆ ಕೂಡ ನೀಡುತ್ತಿದ್ದರು. ಆದರೆ ನಾನು ಹೇಳುದೇನೆಂದರೆ ನಿಮಗೆ ನಾನಿ ಬಿಕನಿ ತೊಡುವುದು ಇಷ್ಟವಾಗದಿದ್ದರೆ ನೋಡಬೇಡಿ.. ನಾನು ಆಯಾ ಇವೆಂಟ್ ಗೆ ತಕ್ಕದಾಗಿ ಡ್ರೆಸ್ ತೊಡಲು ಇಷ್ಟಪಡುತ್ತೇನೆ. ಬೀಚ್ ಗೆ ಹೋದಾಗ ಮೈತುಂಬಾ ಸೀರೆ ಉಟ್ಟು ಈಜಾಡಲು ನನಗೆ ಇಷ್ಟವಿಲ್ಲ ಕಾಮೆಂಟ್ ಹಾಕುವವರು ಸಾಧ್ಯವಾದರೆ ಸೀರೆ ಉಟ್ಟುಕೊಂಡು ಸ್ವಿಮ್ಮಿಂಗ್ ಮಾಡಿ. ಸುಮ್ಮ ಸುಮ್ಮನೆ ಟ್ರೋಲ್ ಮಾಡುವುದು ಕೆಟ್ಟ ಮನಸ್ಥಿತಿಯನ್ನು ತೋರಿಸಲಿದೆ. ಅದರಿಂದ ನನಗೇನು ಸಮಸ್ಯೆ ಇಲ್ಲ. ನನಗೆ ಇಷ್ಟವಾದದ್ದು ನಾನು ಹಾಕುತ್ತಾನೆ ಅದನ್ನು ನೀವು ಹಾಕಿ ಎಂದು ನಾನು ಹೇಳಲಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Ghaati Movie: ʼಘಾಟಿʼ ಚಿತ್ರಕ್ಕೆ ಶುಭವಾಗಲೆಂದು ಅನುಷ್ಕಾ ಶೆಟ್ಟಿಗೆ ಹಾರೈಸಿದ ಪ್ರಭಾಸ್

ಬಳಿಕ ಸಂದರ್ಶಕರು ಶೂಟಿಂಗ್ ಹೊರತಾಗಿ ಇತರ ಸಂದರ್ಭದಲ್ಲಿ ಮೇಕಪ್ ಇಲ್ಲದೆ ಇರಲು ಇಷ್ಟ ಪಡುವ ನೀವು ಬೇರೆ ಅವರಿಗೆ ಏನು ಸಲಹೆ ನೀಡುವಿರಿ ಎಂದು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ‌. ಅದಕ್ಕೆ ಉತ್ತರಿಸಿದ್ದ ಇಶಾನಿ, ನ್ಯಾಚುರಲ್ ಮೇಕಪ್ ಯಾವಾಗಲು ಒಳ್ಳೇಯದು. ಮೇಕಪ್ ಬಳಸದೆ ನಿಮ್ಮ ಮೈಕಾಂತಿ ವೃದ್ಧಿಸಿಕೊಳ್ಳುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಮಾನ್ಸೂನ್ ಕಾಲಕ್ಕೆ ಮಾಡುವ ಫ್ಯಾಷನ್ ಗೆ ಟ್ರ್ಯಾಕ್ ಸೂಟ್ , ಜಾಕೆಟ್ ಧರಿಸುವುದು ನನಗೆ ಬಹಳ ಇಷ್ಟ ಅದಕ್ಕೆ ಹೊಂದುವ ಗೋಲ್ಡ್ ಜುವೆಲೆರಿ ತೊಡುವುದು ನಾನು ತುಂಬ ಇಷ್ಟಪಡುತ್ತೇನೆ ಎಂದು ಇಶಾನಿ ಅವರು ಹೇಳಿದ್ದಾರೆ.