ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Beef Fest Protest: ಕೇರಳದಲ್ಲಿ ಭುಗಿಲೆದ್ದ ಮತ್ತೊಂದು ವಿವಾದ; ಗೋಮಾಂಸ ಉತ್ಸವ ಆಚರಿಸಿ ಪ್ರೊಟೆಸ್ಟ್‌!

ಕ್ಯಾಂಟೀನ್ ನಲ್ಲಿ ಗೋಮಾಂಸ ಖಾದ್ಯ ನಿಷೇಧಿಸಿದ್ದರಿಂದ ಆಕ್ರೋಶಗೊಂಡ ಕೇರಳದ ಕೆನರಾ ಬ್ಯಾಂಕ್ ನೌಕರರು ಗೋಮಾಂಸ ಉತ್ಸವ ನಡೆಸಿ ಪ್ರತಿಭಟಿಸಿದ ಘಟನೆ ಕೊಚ್ಚಿ ಪ್ರಾದೇಶಿಕ ಕಚೇರಿಯಲ್ಲಿ ನಡೆದಿದೆ. ಇತ್ತೀಚೆಗೆ ಪ್ರಾದೇಶಿಕ ಅಧಿಕಾರಿ ಕ್ಯಾಂಟೀನ್‌ನಲ್ಲಿ ಗೋಮಾಂಸವನ್ನು ನಿಷೇಧಿಸಿ ಆದೇಶಿಸಿದ್ದರಿಂದ ನೌಕರರು ಪ್ರತಿಭಟನೆ ನಡೆಸಿದ್ದಾರೆ.

ಕೇರಳದಲ್ಲಿ ಗೋಮಾಂಸ ಉತ್ಸವ ಆಚರಿಸಿ ಪ್ರೊಟೆಸ್ಟ್‌!

-

ಕೊಚ್ಚಿ: ಪ್ರಾದೇಶಿಕ ಅಧಿಕಾರಿ ಕ್ಯಾಂಟೀನ್‌ನಲ್ಲಿ ಗೋಮಾಂಸವನ್ನು (Beef) ನಿಷೇಧಿಸಿ ಆದೇಶಿಸಿದ್ದರಿಂದ ಆಕ್ರೋಶಗೊಂಡ ಕೇರಳದ ಕೆನರಾ ಬ್ಯಾಂಕ್ ನೌಕರರು (Canara Bank employees protest) ಗೋಮಾಂಸ ಉತ್ಸವ (Beef Fest) ನಡೆಸಿ ಪ್ರತಿಭಟಿಸಿದ ಘಟನೆ ಕೊಚ್ಚಿ ಪ್ರಾದೇಶಿಕ ಕಚೇರಿಯಲ್ಲಿ ನಡೆದಿದೆ. ಕೇರಳದಲ್ಲಿ ವ್ಯಾಪಕವಾಗಿ ಗೋಮಾಂಸವನ್ನು ಸೇವಿಸಲಾಗುತ್ತದೆ. ಹಲವಾರು ಬಾರಿ ರಾಜ್ಯದಲ್ಲಿ ಜಾನುವಾರುಗಳ ಮಾರಾಟ ಮತ್ತು ಹತ್ಯೆಯನ್ನು ತಡೆಯುವ ಪ್ರಯತ್ನ ನಡೆಸಲಾಗಿದ್ದರೂ ಇದನ್ನು ವ್ಯಾಪಕವಾಗಿ ವಿರೋಧಿಸಲಾಗುತ್ತಿದೆ. ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದೊಂದಿಗೆ (Bank Employees Federation of India) ಸಂಯೋಜಿತವಾಗಿರುವ ಕೆನರಾ ಬ್ಯಾಂಕ್ ನೌಕರರು ಬ್ಯಾಂಕಿನ ಕೊಚ್ಚಿ ಪ್ರಾದೇಶಿಕ ಕಚೇರಿಯಲ್ಲಿ ಗೋಮಾಂಸ ಉತ್ಸವವನ್ನು ಆಯೋಜಿಸಿ ಪ್ರಾದೇಶಿಕ ಅಧಿಕಾರಿ ಆದೇಶವನ್ನು ಉಲ್ಲಂಘಿಸಿದರು.

ಬಿಹಾರದ ಪ್ರಾದೇಶಿಕ ಅಧಿಕಾರಿ ಅಶ್ವಿನಿ ಕುಮಾರ್ ಅವರು ಬ್ಯಾಂಕ್ ನ ಕ್ಯಾಂಟೀನ್ ನಲ್ಲಿ ಗೋಮಾಂಸವನ್ನು ಬಡಿಸಬಾರದು ಎಂದು ಮೌಖಿಕವಾಗಿ ನಿರ್ದೇಶಿಸಿದ್ದರು. ಇದನ್ನು ವಿರೋಧಿಸಿ ಗುರುವಾರ ಗೋಮಾಂಸ ಉತ್ಸವವನ್ನು ಆಯೋಜಿಸಲಾಯಿತು. ಕಚೇರಿಯಲ್ಲಿಯೇ ಗುರುವಾರ ಗೋಮಾಂಸ ಉತ್ಸವವನ್ನು ನಡೆಸಿದ ನೌಕರರು ಅಧಿಕಾರಿಯ ನಿರ್ದೇಶನವನ್ನು ಧಿಕ್ಕರಿಸಿದರು. ಗೋಮಾಂಸದೊಂದಿಗೆ ಮಲಬಾರ್ ಪರಾಠವನ್ನು ಕೂಡ ಪ್ರತಿಭಟನೆ ವೇಳೆ ಉಣಬಡಿಸಲಾಯಿತು.

ಎರ್ನಾಕುಲಂನಲ್ಲಿರುವ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ನಾಯಕರೊಬ್ಬರು ಕ್ಯಾಂಟೀನ್‌ನಲ್ಲಿ ಗೋಮಾಂಸ ಭಕ್ಷ್ಯಗಳನ್ನು ಬಡಿಸಲಾಗಿದೆ ಎಂದು ತಿಳಿಸಿದರು. ಕೆಲವು ದಿನಗಳ ಹಿಂದೆ ಪ್ರಾದೇಶಿಕ ವ್ಯವಸ್ಥಾಪಕರು ಸಹೋದ್ಯೋಗಿಗಳಿಗೆ ಕಚೇರಿಯಲ್ಲಿ ಗೋಮಾಂಸ ಸೇವಿಸದಂತೆ ಹೇಳಿದ್ದರು. ಆದರೂ ಕ್ಯಾಂಟೀನ್‌ನಲ್ಲಿ ಸಾಂದರ್ಭಿಕವಾಗಿ ಗೋಮಾಂಸ ಬಡಿಸಲಾಗುತ್ತಿತ್ತು. ಸಿಬ್ಬಂದಿಗೆ ಇನ್ನು ಮುಂದೆ ಈ ಖಾದ್ಯ ಬಡಿಸಬಾರದು ಎಂದು ನಿರ್ದೇಶಿಸಿದ್ದರು. ಈ ದೇಶದಲ್ಲಿ ನಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನಮಗಿದೆ. ಇದು ವೈಯಕ್ತಿಕ ಆಯ್ಕೆಯಾಗಿದೆ ಮತ್ತು ನಾವು ಯಾರನ್ನೂ ಗೋಮಾಂಸ ಸೇವಿಸುವಂತೆ ಒತ್ತಾಯಿಸುವುದಿಲ್ಲ. ಕೇರಳದಲ್ಲಿ ಒಬ್ಬ ಅಧಿಕಾರಿ ಅಂತಹ ನಿರ್ದೇಶನವನ್ನು ಹೇಗೆ ನೀಡಬಹುದು ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Kim Jong Un: ಸ್ಪೆಷಲ್‌ ಬುಲೆಟ್‌ ಫ್ರೂಪ್‌ ಟ್ರೇನ್‌ನಲ್ಲಿ ಚೀನಾಗೆ ಪ್ರಯಾಣಿಸಿದ ಕಿಮ್ ಜಾಂಗ್ ಉನ್; ಅಮೆರಿಕಕ್ಕೆ ಶುರುವಾಯ್ತು ನಡುಕ

ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಬೆಂಬಲಿತ ಶಾಸಕ ಕೆ.ಟಿ. ಜಲೀಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಸಂಘ ಪರಿವಾರದ ಕಾರ್ಯಸೂಚಿ ಕೇರಳದಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.